ಕನ್ಯಾಡಿ: ದ್ವಾರಕ ಮನೆ ನಿವಾಸಿ ಹಿರಿಯ ಸ್ವಯಂ ಸೇವಕ ಬಿ. ಸುಬ್ರಹ್ಮಣ್ಯ ರಾವ್ (86 ವ) ನ. 21ರಂದು ಅಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾದರು.
ಸುಬ್ರಹ್ಮಣ್ಯರವರು ವಿಶ್ವ ಹಿಂದೂ ಪರಿಷತ್, ಭಾರತೀಯ ಮಝ್ದೂರ್ ಸಂಘದ ಜಿಲ್ಲಾ ಮಟ್ಟದ ಪ್ರಮುಖರಾಗಿ ಅನೇಕ ಹೋರಾಟಗಳಲ್ಲಿ ಭಾಗಿಯಾಗಿದ್ದರು. ಅನೇಕ ಕಿರಿಯರಿಗೆ ಮಾರ್ಗದರ್ಕರಾಗಿದ್ದರು. ಯಕ್ಷಭಾರತಿ ಸಂಸ್ಥೆಯ ವಾರ್ಷಿಕ ಸಮಾರಂಭದಲ್ಲಿ ಎಡನೀರು ಶ್ರೀಗಳಿಂದ ಗೌರವ ಸನ್ಮಾನಕ್ಕೆ ಪಾತ್ರರಾಗಿದ್ದರು.
ಇವರು ಬೆಳ್ತಂಗಡಿ ತಾಲೂಕಿನಲ್ಲಿ ವಸಂತ ಬಂಗೇರ ಮೊದಲ ಬಾರಿಗೆ ಚುನಾವಣೆಗೆ ನಿಂತಾಗ ತಾಲ್ಲೂಕಿನಾದ್ಯಂತ ಓಡಾಟ ಮಾಡಿ ಸಂಘಟನೆ ಮಾಡಿದ್ದರು. ನಂತರ ವಸಂತ ಬಂಗೇರ ಅವರು ಪ್ರಥಮ ಹಾಗೂ ದ್ವಿತೀಯ ಬಾರಿ ಶಾಸಕರಾಗಿದ್ದಾಗ 7ವರ್ಷ ಆಪ್ತ ಸಹಾಯಕರಾಗಿ ಜವಾಬ್ದಾರಿ ನಿರ್ವಹಿಸಿದ್ದರು. ಬೆಳ್ತಂಗಡಿ ತಾಲೂಕಿನಲ್ಲಿ ಬಿಎಂಎಸ್ ಸಂಘಟನೆ ಪ್ರಾರಂಭಿಸಿ ಜಿಲ್ಲೆಯಾದ್ಯಂತ ಓಡಾಟ ನಡೆಸಿದ್ದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ತಾಲ್ಲೂಕಿನ ಒಂದು ತಂಡದ ನೇತೃತ್ವ ವಹಿಸಿ ಬಂಧನಕ್ಕೆ ಒಳಗಾಗಿದ್ದರು.
p>