ಬೆಳ್ತಂಗಡಿ: ಶ್ರೀ ಗುರುದೇವ ಪದವಿಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟವು ಸರಕಾರಿ ಪದವಿಪೂರ್ವ ಜೂನಿಯರ್ ಕಾಲೇಜು ಕ್ರೀಡಾಂಗಣ ಸಂತೆಕಟ್ಟೆ ಇಲ್ಲಿ ದಿನಾಂಕ ನ.16 ಶನಿವಾರದಂದು ಅದ್ದೂರಿಯಿಂದ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುರುದೇವ ಎಜುಕೇಶನಲ್ ಟ್ರಸ್ಟಿನ ಸದಸ್ಯರು ಪ್ರೀತಿತಾ ಧರ್ಮವಿಜೇತ್ ವಹಿಸಿಕೊಂಡು ಶಿಕ್ಷಣದ ಒಂದು ಭಾಗ ಕ್ರೀಡೆ ಆದಕ್ಕೆ ಬೇಕಾದ ಸಂಪೂರ್ಣ ಸಹಕಾರ ನೀಡುವುದಾಗಿ ಅಧ್ಯಕ್ಷೀಯ ನುಡಿಗಳನ್ನಾಡಿದರು.
ಕ್ರೀಡಾಕೂಟದ ಉಧ್ಘಾಟನೆಯನ್ನು ಸರಕಾರಿ ಪದವಿಪೂರ್ವ ಜೂನಿಯರ್ ಕಾಲೇಜು ಬೆಳ್ತಂಗಡಿ ಇಲ್ಲಿಯ ಪ್ರಾಂಶುಪಾಲ ಸುಕುಮಾರ್ ಜೈನ್ ನೆರವೇರಿಸಿ ಹಿತನುಡಿಗಳನ್ನಾಡಿದರು. ವೇದಿಕೆಯಲ್ಲಿ ಗುರುದೇವಾ ಪದವಿ ಕಾಲೇಜಿನ ಪ್ರಾಂಶುಪಾಲ ಸವಿತಾ ಉಪಸ್ಥಿತರಿದ್ದು ಕ್ರೀಡೆಯಲ್ಲೂ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂಬ ಮಾತುಡಳನ್ನಾಡಿದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸುಕೇಶ್ ಕುಮಾರ್, ಉಪ ಪ್ರಾಂಶುಪಾಲ ಬಿ.ಎ ಶಮಿವುಲ್ಲಾ, ಗುರುದೇವಾ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಕ ನಿರ್ದೇಶಕರಾದ ರವಿರಾಮ್ ಶೆಟ್ಟಿ ಉಪಸ್ಥಿತರಿದ್ದರು. ಬೆಳಿಗ್ಗೆ 9ಗಂಟೆಗೆ ಆರಂಭವಾಗಿ ಸಂಜೆ 4ಗಂಟೆಯವರೆಗೂ ಕ್ರೀಡಾಕೂಟ ನಡೆದಿದ್ದು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ಬಹುಮಾನ ಪಡೆದಕೊಂಡರು.
ಈ ಕ್ರೀಡಾಕೂಟದಲ್ಲಿ ದೈಹಿಕ ಶಿಕ್ಷಕ ನಿರ್ದೇಶಕ ರವಿರಾಮ್ ಶೆಟ್ಟಿಯವರ ಮಾರ್ಗದರ್ಶನದೊಂದಿಗೆ ಎಲ್ಲಾ ಉಪನ್ಯಾಸ ವೃಂದ, ಭೋಧಕೇತರ ವೃಂದ, ಬಿಸಿಲನ್ನು ಲೆಕ್ಕಿಸದೇ ವಿದ್ಯಾರ್ಥಿಗಳೊಂದಿಗೆ ತೀರ್ಪುಗಾರಿಕೆಯಲ್ಲಿ ಸಹಕರಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಬಿ.ಎ.ಶಮಿವುಲ್ಲಾ ಕಾರ್ಯಕ್ರಮಕ್ಕೆ ಸ್ವಾಗತಿಸಿ, ಉಪನ್ಯಾಸಕಿ ಶುಭಲಕ್ಷ್ಮೀ ವಂದಿಸಿದರು. ನಿರೂಪಣೆಯಲ್ಲಿ ಉಪನ್ಯಾಸಕ ಹರೀಶ್ ಸಹಕರಿಸಿದರು.