ಕೊಕ್ಕಡ : ಬೆಳ್ತಂಗಡಿ ಮಹಿಳಾ ಕಾಂಗ್ರೆಸ್ ಗ್ರಾಮೀಣ ಘಟಕದ ವತಿಯಿಂದ ಭಾರತದ ಮೊದಲ ಮಹಿಳಾ ಪ್ರಧಾನಿ ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಜನ್ಮದಿನ ಕಾರ್ಯಕ್ರಮವನ್ನು ನ.19 ರಂದು ಕೊಕ್ಕಡ ಎಂಡೊಸಲ್ಫಾನ್ ಸಂತ್ರಸ್ತರ ಪಾಲನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಯಿತು.
ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ಕೆ.ಎಂ.ನಾಗೇಶ್ ಕುಮಾರ್ ಗೌಡ ಇಂದಿರಾ ಗಾಂಧಿ ಅವರ ಜನಪರ ಯೋಜನೆಗಳನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಮುಖಂಡ ಎಂ.ಎಚ್ .ಮುಹಮ್ಮದ್ ಕಲಂದರ್ ಶಾ ಕೊಕ್ಕಡ, ಮಹಿಳಾ ಕಾಂಗ್ರೆಸ್ ಮುಖಂಡರಾದ ಉಷಾ ಶರತ್, ವನಿತಾ ಎಂ.ಸಾಲಿಯಾನ್, ಶೋಭಾ ನಾರಾಯಣ ಗೌಡ, ಕೇಶವತಿ, ತನುಜಾ ಶೇಖರ್, ಸುಚಿತ್ರಾ ಕೊಳ್ಳಜೆ, ಹರ್ಷಲತಾ, ಸಿಂಧೂ ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಇಂದಿರಾ ಗಾಂಧಿ ಜನ್ಮ ದಿನಾಚರಣೆಯ ಪ್ರಯಕ್ತ ಸಿಹಿ ವಿತರಣೆ ಹಾಗೂ ವಸ್ತ್ರಗಳನ್ನು ವಿತರಿಸಲಾಯಿತು.
ಬೆಳ್ತಂಗಡಿ ಮಹಿಳಾ ಕಾಂಗ್ರೇಸ್ ಘಟಕ ಗ್ರಾಮೀಣ ಸಮಿತಿ ಅಧ್ಯಕ್ಷೆ ನಮಿತಾ ಪೂಜಾರಿ ಸ್ವಾಗತಿಸಿದರು.
p>