ಬೆಳ್ತಂಗಡಿ: ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕ ವಿಭಾಗದ ಷಷ್ಠ್ಯಬ್ದ ಹಾಗೂ ಸ್ನಾತಕೋತ್ತರ ವಿಭಾಗದ ದಶಮಾನೋತ್ಸವದ ಪ್ರಯುಕ್ತ ನಡೆದ ಅಂತರ ಜಿಲ್ಲಾ ಮಟ್ಟದ ಪ್ರತಿಭೋತ್ಸವ -2024-25 ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಾಣಿ ಪದವಿ ಪೂರ್ವ ಕಾಲೇಜು ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ 13 ಪದವಿಪೂರ್ವ ಕಾಲೇಜುಗಳು ಭಾಗವಹಿಸಿದ್ದ ಈ ಸ್ಪರ್ಧೆಗಳಲ್ಲಿ ಕನ್ನಡ ಪ್ರಬಂಧದಲ್ಲಿ ಪ್ರಥಮ ಮತ್ತು ದ್ವಿತೀಯ, ಇಂಗ್ಲಿಷ್ ಭಾಷಣದಲ್ಲಿ ದ್ವಿತೀಯ, ಜನಪದ ಗೀತೆಯಲ್ಲಿ ದ್ವಿತೀಯ, ಶಾಸ್ತ್ರೀಯ ಸಂಗೀತದಲ್ಲಿ ದ್ವಿತೀಯ, ರೀಲ್ ಮೇಕಿಂಗ್ ನಲ್ಲಿ ದ್ವಿತೀಯ, ವಿಜ್ಞಾನದ ರಸಪ್ರಶ್ನೆಯಲ್ಲಿ ದ್ವಿತೀಯ, ಕುಣಿತ ಭಜನೆಯಲ್ಲಿ ಪ್ರಥಮ, ಬೀದಿ ನಾಟಕದಲ್ಲಿ ಪ್ರಥಮ, ಸಮೂಹ ನೃತ್ಯದಲ್ಲಿ ಪ್ರಥಮ, ಬಿಸಿನೆಸ್ ಮಾಡೆಲ್ ನಲ್ಲಿ ಪ್ರಥಮ ಮತ್ತು ಜಾಹೀರಾತು ಪ್ರದರ್ಶನದಲ್ಲಿ ಪ್ರಥಮ ಪ್ರಶಸ್ತಿಗಳನ್ನು ಪಡೆದುಕೊಂಡು ಚಾಂಪಿಯನ್ ಆಗಿ ಹೊರಹೊಮ್ಮಿದೆ.
p>