ಉಜಿರೆ: ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಆಧಿಕಾರಿ ಡಾ. ಆನಂದ ಕೆ. ಉಜಿರೆ ಗ್ರಾಮ ಪಂಚಾಯತ್ ಗೆ ನ.12ರಂದು ಭೇಟಿ ನೀಡಿದದರು.
ಧರ್ಮಸ್ಥಳದಿಂದ ನೀಡಿರುವ ಘನ ತ್ಯಾಜ್ಯ ನಿರ್ವಹಣಾ ವಾಹನವನ್ನು ಎಂ.ಆರ್.ಎಫ್ ನಿರ್ವಾಹಕ ವೈಷ್ಣವಿ ಇಂಡಸ್ಟ್ರಿ ಮಾಲಕರಿಗೆ ಹಸ್ತಾಂತರ ಮಾಡಿದರು. ಪಂಚಾಯತ್ ವ್ಯಾಪ್ತಿಯ ಸಮಗ್ರ ಘನ ತ್ಯಾಜ್ಯ ನಿರ್ವಹಣಾ ಕೇಂದ್ರ (ಎಂ ಆರ್ ಎಫ್ ), ತ್ಯಾಜ್ಯ ವಿಲೇವಾರಿ ಘಟಕ, ಮಲ ತ್ಯಾಜ್ಯ ವಿಲವಾರಿ ಘಟಕ, ಕೂಸಿನ ಮನೆ, ಗ್ರಂಥಾಲಯ, ಕಚೇರಿಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಭವಾನಿ ಶಂಕರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ಪಿ. ಹೆಚ್., ಪಂಚಾಯತ್ ರಾಜ್ ಇಂಜಿನಿಯರ್ ನಿತಿನ್, ಜಿಲ್ಲಾ ಪಂಚಾಯತ್ ಸ್ವಚ್ಛ ಭಾರತ್ ಮೆಷಿನ್ ಘಟಕದ ಪವನ್, ನವೀನ್, ಡೊಂಬಯ್ಯ ಮತ್ತು ಪಂಚಾಯತ್ ಸಿಬ್ಬಂದಿಗಳು ಹಾಜರಿದ್ದರು.
p>