ಕುವೆಟ್ಟು: ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗೆ ರಾಷ್ಟ್ರೀಯ ಹೆದ್ದಾರಿಯ ಕೆಲಸಗಳು ನಡೆಯುತ್ತಿದ್ದು ಹಲವು ಕಡೆ ಸಂಕಗಳ ಕೆಲಸಗಳು ಬರದಿಂದ ಸಾಗುತ್ತಿದೆ. ಮದ್ದಡ್ಕ ಸಮೀಪದ ನೇರಳಕಟ್ಟೆ ಸುoಟಾನ್ ಗುರಿ ಎಂಬಲ್ಲಿ ನ.8ರoದು ಸಾಯಂಕಾಲ ಮಂಗಳೂರು ಕಡೆಯಿಂದ ಬರುತ್ತಿದ್ದ ಲಾರಿ ಮತ್ತು ಕೆ.ಎಸ್.ಆರ್.ಟಿ.ಸಿ. ಬಸ್ ರಸ್ತೆ ಮಧ್ಯದಲ್ಲಿ ಹೂತು ಹೋಗಿ ಸ್ವಲ್ಪ ಸಮಯ ವಾಹನ ಸಂಚಾರಕ್ಕೆ ಅಡಚಣೆಯಾಯಿತು.
ಹೆದ್ದಾರಿ ಕೆಲಸದ ಕಂಟ್ರಾಕ್ಟರ್ ಕೆಲಸದವರು, ಜೆ ಸಿ ಬಿ ಹಾಗೂ ಊರಿನವರ ಸಹಕಾರದಿಂದ ತಕ್ಷಣ ಲಾರಿಯನ್ನು ತೆರೆವುಗೊಳಿಸಿ, ವಾಹನ ಸಂಚಾರ ಸುಗಮಗೊಳಿಸಲಾಯಿತು.
p>