ಬೆಳ್ತಂಗಡಿ: 1994ರಲ್ಲಿ ಪ್ರಾರಂಭಗೊಂಡ ಪ್ರವೀಣ್ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್ ನ 13ನೇ ಶಾಖೆಯು ಬೆಳ್ತಂಗಡಿಯ ಹನುಮಾನ್ ಕಾಂಪ್ಲೆಕ್ಸ್, ಬಾಳಿಗ ಕಟ್ಟಡದ ಒಂದನೇ ಮಹಡಿಯಲ್ಲಿ ನ.8 ಶುಕ್ರವಾರದಂದು ಉದ್ಘಾಟನೆಗೊಳ್ಳಲಿದೆ.
ಪುತ್ತೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸಂಸ್ಥೆಯು ಹಣಕಾಸು ಕ್ಷೇತ್ರದಲ್ಲಿ 30 ವರ್ಷಗಳ ಅನುಭವದೊಂದಿಗೆ ನಮ್ಮ ರಾಜ್ಯದ 15 ಜಿಲ್ಲೆಗಳಲ್ಲಿ ಗ್ರಾಹಕರನ್ನು ಹೊಂದಿದೆ. ಪ್ರಸ್ತುತ ಪುತ್ತೂರು, ಮಂಗಳೂರು, ಮೂಡಬಿದ್ರಿ ,ಮಡಿಕೇರಿ, ಮೈಸೂರು, ಸಕಲೇಶಪುರ, ಶಿರಸಿ, ಚಿಕ್ಕಮಗಳೂರು, ಹಾವೇರಿ, ಶಿವಮೊಗ್ಗ, ದಾವಣಗೆರೆ ಮತ್ತು ಸಾಗರದಲ್ಲಿ ಶಾಖೆಗಳನ್ನು ಹೊಂದಿದೆ. ಅತೀ ಶೀಘ್ರದಲ್ಲಿ ಕುಂದಾಪುರ, ಧಾರವಾಡ ಹಾಗೂ ಹುಣಸೂರಿನಲ್ಲಿ ಶಾಖೆಗಳು ಪ್ರಾರಂಭಗೊಳ್ಳಲಿದೆ. 2025-26ನೇ ಆರ್ಥಿಕ ವರ್ಷದಲ್ಲಿ ಕರ್ನಾಟಕದಾದ್ಯಂತ ಶಾಖೆಗಳನ್ನು ಆರಂಭಿಸಲು ಗುರಿಯನ್ನು ಹೊಂದಿದೆ. 2024 -25ನೇ ಆರ್ಥಿಕ ವರ್ಷದಲ್ಲಿ 350 ಕೋಟಿ ವಹಿವಾಟನ್ನು ತಲುಪುವ ಗುರಿಯನ್ನು ಹೊಂದಿದೆ.
ಈ ಸಂಸ್ಥೆಯಲ್ಲಿ ಹೊಸ ಮತ್ತು ಹಳೆಯ ವಾಹನಗಳ ಮೇಲೆ ಹಾಗೂ ಖರೀದಿಸಲು ಸಾಲ ಸೌಲಭ್ಯ, ಭೂ ಅಡಮಾನ ಸಾಲಗಳನ್ನು ಆಕರ್ಷಕ ಬಡ್ಡಿ ದರದಲ್ಲಿ ಅತೀ ಶೀಘ್ರವಾಗಿ ಗ್ರಾಹಕರಿಗೆ ನೀಡುವ ಸಂಸ್ಥೆಯಾಗಿದೆ.
ಮುಂದಿನ ದಿನಗಳಲ್ಲಿ ಈ ಸಂಸ್ಥೆಯು ಚಿನ್ನ ಅಡಮಾನ ಸಾಲ, ವ್ಯಾಪಾರಾಭಿವೃದ್ಧಿ ಸಾಲವನ್ನು ನೀಡುವ ಯೋಜನೆಯನ್ನು ಜಾರಿಗೊಳಿಸಲಿದೆ.
ಇದು ಬಿಂದು ಮಿನರಲ್ ವಾಟರ್, ಬಿಂದು ಜೀರಾಮಸಾಲಾ, ಸಿಪ್ಪಾನ್ ಸೇರಿದಂತೆ 50ಕ್ಕೂ ಅಧಿಕ ಪಾನೀಯ ಮತ್ತು ಸ್ನಾಕ್ಅಪ್ ತಿನಿಸುಗಳ ತಯಾರಕರಾದ ಪ್ರತಿಷ್ಠಿತ SG ಗ್ರೂಪ್ ನ ಸಹ ಸಂಸ್ಥೆಯಾಗಿದೆ.