ಬೆಳ್ತಂಗಡಿ: ಬ್ರಹ್ಮಶ್ರೀ ನಾರಾಯಣ ಗುರುಗಳ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ವಿಶ್ವ ಮಾನವ ಸಂದೇಶವನ್ನು ಪಾಲಿಸಿ, 45 ವರ್ಷಗಳಿಂದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಕ್ರೀಡೆ, ಸಾಂಸ್ಕೃತಿಕ, ಆರೋಗ್ಯ ಹಾಗೂ ಸಮಾಜಮುಖಿ ಸಾಧನೆ, ಸೇವೆಯನ್ನು ಮಾಡಿ, ಅದೆಷ್ಟೋ ಜನರ ಬದುಕಲ್ಲಿ ನೆಲೆ ನಿಂತ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಬಳಂಜಕ್ಕೆ ಒಲಿದು ಬಂದ ಪ್ರತಿಷ್ಠಿತ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ – 2024ಕ್ಕೆ ಸಹಕರಿಸಿದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜರವರನ್ನು ಅವರ ನಿವಾಸದಲ್ಲಿ ಸಂಘದ ವತಿಯಿಂದ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸಂತೋಷ್ ಪಿ. ಕೋಟ್ಯಾನ್ ಬಳಂಜ, ಮಾಜಿ ಅಧ್ಯಕ್ಷ ಪ್ರವೀಣ್ ಕುಮಾರ್ ಹೆಚ್. ಎಸ್., ತಾಲೂಕು ಯುವ ಬಿಲ್ಲವ ವೇದಿಕೆ ಮಾಜಿ ಅಧ್ಯಕ್ಷ ರಂಜಿತ್ ಹೆಚ್.ಡಿ., ಸಂಘದ ನಿರ್ದೇಶಕರುಗಳಾದ ಯತೀಶ್ ವೈ.ಎಲ್., ರಂಜಿತ್ ಪೂಜಾರಿ ಮಜಲಡ್ಕ, ರಕ್ಷಿತ್ ಬಗ್ಯೋಟ್ಟು, ಸದಸ್ಯರಾದ ಸಂತೋಷ್ ಕುಮಾರ್ ಹಿಮರಡ್ಡ, ದಿನೇಶ್ ಪೂಜಾರಿ ನಿಟ್ಟಡ್ಕ ಮೊದಲಾದವರು ಉಪಸ್ಥಿತರಿದ್ದರು.