







ಬಳಂಜ: ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಸದಸ್ಯರಿಂದ ದೀಪಾವಳಿ ಹಬ್ಬದ ಆಚರಣೆ ಅ.31ರಂದು ಬಳಂಜ ಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಣತೆ ದೀಪ ಹಚ್ಚಿ ಸಂಭ್ರಮಿಸಿದರು.



ಮಂಡಳಿಯ ಪ್ರಧಾನ ಸಂಚಾಲಕ ಹರೀಶ್ ವೈ. ಚಂದ್ರಮ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಧ್ಯಕ್ಷ ಸಂತೋಷ್ ಪಿ. ಕೋಟ್ಯಾನ್, ಗ್ರಾಮ ಪಂಚಾಯತ್ ಸದಸ್ಯ ರವೀಂದ್ರ ಬಿ.ಅಮೀನ್, ಆಶ್ವಿನ್ ಬಿ.ಕೆ., ಪ್ರಣಾಮ್ ಶೆಟ್ಟಿ, ಮಂಡಳಿಯ ಅಧ್ಯಕ್ಷೆ ಜ್ಯೋತಿ, ತರಬೇತುದಾರರಾದ ಮಾನ್ಯ ಮಂಡಳಿಯ ಸದಸ್ಯರ ಪೋಷಕರು ಉಪಸ್ಥಿತರಿದ್ದರು. ಬೊಲ್ಲಜ್ಜ ದೈವದ ಕಟ್ಟೆಯಲ್ಲೂ ದೀಪ ಹಚ್ಚಿ ಪ್ರಾರ್ಥಿಸಲಾಯಿತು. ಪಟಾಕಿ ಸಿಡಿಸಲಾಯಿತು. ಸಿಹಿ ತಿಂಡಿಗಳನ್ನು ಹಂಚಿ ಪರಸ್ಪರ ಶುಭಾಶಯಗಳನ್ನು ಸಲ್ಲಿಸುವುದರೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.









