ಬೆಳ್ತಂಗಡಿ: ರಾಜ್ಯದಲ್ಲಿ ರೈತರ, ದಲಿತರ, ಮಠ ದೇವಸ್ಥಾನಗಳ ಆಸ್ತಿಯ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ದಾಖಲಿಸಿ ಆಸ್ತಿ ಕಬಳಿಕೆ ಮಾಡುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ವಿರುದ್ಧ ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ವತಿಯಿಂದ ಬೃಹತ್ ಪ್ರತಿಭಟನೆಯು ನ.4ರಂದು ಬೆಳ್ತಂಗಡಿ ಆಡಳಿತ ಸೌಧದ ಎದರು ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜ ಅವರು 2022 ರಲ್ಲಿ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂಡಾ ಹಗರಣ, ವಾಲ್ಮೀಕಿ ನಿಗಮದ ಎಸ್.ಸಿ, ಎಸ್.ಟಿಗೆ ಮೀಸಲಿಟ್ಟ ಅನುದಾನಗಳ ದುರುಪಯೋಗ ಮಾಡಿ, ಭ್ರಷ್ಟಚಾರ ಅರಾಜಕತೆಯಿಂದ ತುಂಬಿದ್ದು ಸಮಾಜ ಕಲ್ಯಾಣ ಸಚಿವರೇ ಜೈಲಿಗೆ ಹೋಗಿ ಬಂದಿದ್ದಾರೆ. ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಓಲೈಕೆಗಾಗಿ ರಾಜ್ಯದ ವಿವಿಧೆಡೆ ರೈತರ ಭೂಮಿಗೆ ಸಂಬಂಧಿಸಿದ ಪಹಣಿಯಲ್ಲಿ ವಕ್ಫ್ ಭೂಮಿ ಎಂದು ನಮೂದಿಸಿ ಗೊಂದಲ ಸೃಷ್ಟಿ ಮಾಡುತ್ತಿದೆ ಎಂದು ಆರೋಪಿಸಿದರು.
ರಾಜ್ಯದ ರೈತರ ದಲಿತರ ಮಠ ದೇವಸ್ಥಾನದ ಭೂಮಿಯ ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ದಾಖಲಾಗಿದೆ. ವಿಜಯಪುರಕ್ಕೆ ಸ್ವತಃ ನಿಯೋಗದಲ್ಲಿ ನಾನು ಹೋಗಿದ್ದೆ. ಅಲ್ಲಿ ಸಿಂದಾಗಿ ತಾಲೂಕಿನಲ್ಲಿ ಬಸವಣ್ಣನವರ ವಿರಕ್ತ ಮಠದ ಪಹಣಿಯಲ್ಲೂ ವಕ್ಫ್ ಗೆ ಸೇರಿಸಿದ್ದಾರೆ. ಇದು ಸಾವಿರದ ಐನೂರು ವರ್ಷಗಳ ಹಿಂದಿನ ಮಠ, ಆಗ ಇಸ್ಲಾಂ ಧರ್ಮವೇ ಹುಟ್ಟಿರಲಿಲ್ಲ ಅಷ್ಟು ಪುರಾತಣ ಮಠದ ಆಸ್ತಿಯಲ್ಲಿ ವಕ್ಸ್ ಎಂದಿದೆ. ಸೋಮನಾಥ ದೇವಸ್ಥಾನ, ಬಬುಲೇಶ್ವರ ದೇವಸ್ಥಾನದ ಜಮೀನು ಕೂಡ ವಕ್ಫ್ ಗೆ ಸೇರಿದೆ. ರಾಜ್ಯದಲ್ಲಿ ಹಿಂದೂಗಳ ಸಾವಿರಾರು ಎಕ್ರೆ ಜಾಗ ಮುಸ್ಲಿಂರ ಪಾಲಾಗುತ್ತಿದೆ. ದ.ಕ ಜಿಲ್ಲೆಯಲ್ಲಿಯೂ ಆರುನೂರು ಎಕ್ರೆ ಹಿಂದೂಗಳ ಜಾಗ ವಕ್ಫ್ ಗೆ ಸೇರಿಸಲಾಗಿದೆ ಇದರ ವಿರುದ್ಧ ನಾವೆಲ್ಲ ಒಟ್ಟಾಗಿ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸರಕಾರ 75 ಸಾಲಿನ ಗೆಜೆಟ್ ಅಧಿಸೂಚನೆ ರದ್ದುಗೊಳಿಸಲು ಹಾಗೂ ಸಮಾಜದಲ್ಲಿ ಶೋಭೆ ಹಾಗೂ ಅಶಾಂತಿಗೆ ಕಾರಣಿಕರ್ತರಾದ ಜಮೀರ್ ಅಹಮದ್‌ರನ್ನು ಸಚಿವ ಸಂಪುಟದಿಂದ ವಜಾಗೊಳಿಸಲು ಒತ್ತಾಯಿಸಿ ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ ರಾವ್, ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ್ ಪಾರೆಂಕಿ, ಜಯಾನಂದ ಗೌಡ ಪ್ರಜ್ವಲ್, ಪ್ರಮುಖರಾದ ಸುಂದರ ಹೆಗ್ಡೆ ವೇಣೂರು, ಜಯಂತ ಕೋಟ್ಯಾನ್, ಕೊರಗಪ್ಪ ನಾಯ್ಕ, ಈಶ್ವರ ಭೈರ, ಸೀತಾರಾಮ ಬೆಳಾಲು, ಗಣೇಶ್ ಗೌಡ ನಾವೂರು, ಭಾಸ್ಕರ್ ಧರ್ಮಸ್ಥಳ, ಶಶಿರಾಜ್ ಶೆಟ್ಟಿ, ಚೆನ್ನಕೇಶವ ಮುಂಡಾಜೆ, ಬಾಬು ಗೌಡ ನೆರಿಯ, ವಸಂತ ಮಜಲು, ನವೀನ್ ಸಾಮಾನಿ, ಬಾಲಕೃಷ್ಣ ಬಿರ್ಮೋಟ್ಟು, ರಕ್ಷಿತ್ ಪಣೆಕ್ಕರ್, ರಾಕೇಶ್ ಹೆಗ್ಡೆ ಬಳಂಜ, ರಾಜೇಶ್ ಮೂಡುಕೋಡಿ, ಶರತ್ ಶೆಟ್ಟಿ, ಯಶವಂತ್ ಡೆಚ್ಚಾರು, ಮಾಧವ ಶಿರ್ಲಾಲು, ವಿದ್ಯಾಶ್ರೀನಿವಾಸ್, ಉಮೇಶ್ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.