ಧರ್ಮಸ್ಥಳ : ಧರ್ಮಸ್ಥಳ ಗ್ರಾಮ ಪಂಚಾಯತಿನಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ವಯೋ ನಿವೃತ್ತರಾದ ಉಮೇಶ್ ಕೆ. ಇವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಅ.30ರಂದು ಧರ್ಮಸ್ಥಳ ಸಹಕಾರ ಸಂಘದ ಅಟಲ್ ಜೀ ಸಭಾ ಭವನದಲ್ಲಿ ಜರಗಿತು.
ಸಮಾರಂಭದ ಅಧ್ಯಕ್ಷತೆಯನ್ನು ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಮಲ ಪರಮೇಶ್ವರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್, ಮೂಡಬಿದ್ರೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಕುಸುಮಾಧರ್, ಡಾ. ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ, ಧರ್ಮಸ್ಥಳ ಪ್ರಾ. ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರೀತಮ್ ಡಿ., ಧರ್ಮಸ್ಥಳ ಪೊಲೀಸ್ ಠಾಣಾ ಎಸ್ ಐ ಕಿಶೋರ್ ಭಾಗವಹಿಸಿದ್ದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ ರಾವ್ ಪ್ರಸ್ತಾಪಿಸಿದರು. ಸಿಬ್ಬಂದಿ ಡಾ. ದೇವಿಪ್ರಸಾದ್ ಬೊಲ್ಮ ಸನ್ಮಾನ ಪತ್ರ ವಾಚಿಸಿದರು. ಪುತ್ತೂರು ಪಿಡಿಒ ನಾಗೇಶ್ ಸನ್ಮಾನಿತರ ಕುರಿತು ಮಾತನಾಡಿದರು.
ಪಿಡಿಒ ಉಮೇಶ್ ಕೆ. ಮತ್ತು ಪತ್ನಿ ಗೀತಾ ದಂಪತಿಯನ್ನು ಗ್ರಾಮ ಪಂಚಾಯತ್ ಮತ್ತು ಸನ್ಮಾನ ಸಮಿತಿ ವತಿಯಿಂದ, ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ, ಧರ್ಮಸ್ಥಳ ಸಹಕಾರ ಸಂಘದ ವತಿಯಿಂದ, ಪಂಚಾಯತ್ ಮಾಜಿ ಅಧ್ಯಕ್ಷರುಗಳಿಂದ, ಅಭಿಮಾನಿಗಳು ಸನ್ಮಾನಿಸಿದರು.