ಬಳಂಜ: ನ.1ರಂದು ಬಳಂಜದಲ್ಲಿ ಸರ್ವಧರ್ಮೀಯರಿಗಾಗಿ ಸಾರ್ವಜನಿಕ ದೀಪಾವಳಿ ಆಚರಣೆ ಹಾಗೂ ದೋಸೆ ಹಬ್ಬ ಮತ್ತು ಲೂಡೋ ಸ್ಪರ್ಧೆ ನಡೆಯಲಿದೆ ಎಂದು ಕಾರ್ಯಕ್ರಮದ ನೇತೃತ್ವವನ್ನು ವಹಿಸಿರುವ ಸಮಾಜ ಸೇವಕ ಗುರುಪ್ರಸಾದ್ ಹೆಗ್ಡೆ ತಿಳಿಸಿದ್ದಾರೆ.
ಬಳಂಜದಲ್ಲಿ ಯಾವುದೇ ಕಾರ್ಯಕ್ರಮ ಇರಲಿ ಅದರಲ್ಲಿ ಸರ್ವಧರ್ಮದವರು ಒಟ್ಟಾಗಿ ಪಾಲ್ಗೊಂಡು ಸಹಕಾರ ನೀಡುತ್ತಾ ಬರುತ್ತಿರುವುದು ವಿಶೇಷ. ಈ ವರ್ಷ ಊರಿನ ಪ್ರಮುಖರು ಒಟ್ಟು ಸೇರಿ ಸರ್ವಧರ್ಮದವರನ್ನು ಒಟ್ಟು ಸೇರಿಸಿ ಪ್ರಥಮ ಬಾರಿಗೆ ಸಾರ್ವಜನಿಕ ದೀಪಾವಳಿ ಆಚರಣೆ ಮಾಡಲು ತೀರ್ಮಾನಿಸಿದ್ದು ಇದರ ಜೊತೆಗೆ ಲೂಡೋ ಸ್ಪರ್ಧೆ ಸಹ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದು ಸಾರ್ವಜನಿಕರು ಮತ್ತು ಸರ್ವಧರ್ಮದವರು ಎಲ್ಲರೂ ಸಂಭ್ರಮದಿಂದ ಭಾಗವಹಿಸಬೇಕೆಂದು ವಿನಂತಿಸಿದ್ದಾರೆ. ಈಗಾಗಲೇ ಬಳಂಜ ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಪ್ರಾಂಗಣದಲ್ಲಿ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.