ಉಜಿರೆ: ಇಲ್ಲಿನ ಮಾರ್ಕೆಟ್ ನಲ್ಲಿ 36ವರ್ಷಗಳಿಂದ ಉದ್ಯಮ ನಡೆಸುತ್ತಿದ್ದ ರಾಮಚಂದ್ರ ಶೆಟ್ಟಿ ಮಾಲಕತ್ವದ ಉದಯ ಚಿಕನ್ ಸೆಂಟರ್ ಇಂದು ವಿಸ್ತಾರಗೊಂಡು ಉದ್ಘಾಟನೆಗೊಂಡಿದೆ.
ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಉದಯ ಚಿಕನ್ ಸೆಂಟರ್ ಉದ್ಘಾಟನೆಗೊಳಿಸಿದರು.
ಉಜಿರೆಯ ಜನಾರ್ಧನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ ದೀಪಬೆಳಗಿಸಿ ಮಾತನಾಡಿ “ರಾಮಚಂದ್ರ ಶೆಟ್ಟಿಯವರು ಉದ್ಯಮದ ಮೂಲಕ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುತ್ತಿದ್ದಾರೆ. ಹೊಸ ತಂತ್ರಜ್ಞಾನದ ಅಳವಡಿಕೆಯಾಗಿದೆ. ಅವರ ಕುಟುಂಬಕ್ಕೆ ಶುಭವಾಗಲಿ” ಎಂದು ಹಾರೈಸಿದರು.
ಉದಯ್ ಚಿಕನ್ ಉದ್ಘಾಟಿಸಿ ಮಾತನಾಡಿದ ಪ್ರತಾಪ ಸಿಂಹ ನಾಯಕ್ “ರಾಮಚಂದ್ರ ಶೆಟ್ಟಿಯವರು ಸಮಾಜಮುಖಿ ಚಿಂತನೆಯುಳ್ಳವರು. ಅವರ ಮೊದಲ ಉದ್ಯಮದ ಸ್ಲೀಪಿಂಗ್ ಪಾರ್ಟ್ನರ್ ಆಗಿದ್ದೆ. ರಾಮಚಂದ್ರ ಶೆಟ್ಟಿಯವರಿಗೆ ಅನ್ನ ತಮ್ಮಂದಿರಂತೆ ನೆರವಾಗಬೇಕಿದೆ, ರಾಮಚಂದ್ರ ಶೆಟ್ಟಿಯವರು ಸ್ವಚ್ಛತೆಗೆ ಇನ್ನೊಂದು ಹೆಸರು. ಅವರ ಊರಿಗೆ ಒಳ್ಳೆಯದಾಗಬೇಕು ಅನ್ನುವ ಧೋರಣೆಗೆ ನೆರವಾಗಬೇಕು” ಎಂದರು.
ಈ ವೇಳೆ ಮಾಜಿ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ಉಜಿರೆ ಇದರ ಅಧ್ಯಕ್ಷ ರಂಜನ್ ಜಿ. ಗೌಡ, ಬದುಕು ಕಟ್ಟೋಣ ಸಂಚಾಲಕ ಮೋಹನ್ ಕುಮಾರ್, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾಕಿರಣ್ ಕಾರಂತ್, ಉಜಿರೆ ಶಾರದಾ ಸೇವಾ ಟ್ರಸ್ಟ್ ನ ಭರತ್ ಕುಮಾರ್, ಉಪಾಧ್ಯಕ್ಷ ರವಿಕುಮಾರ್ ಬರಮೇಲು, ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ ಕಾರ್ಯಕ್ರಮಕ್ಕೆ ಆಗಮಿಸಿ ಶುಭಹಾರೈಸಿದರು.
ಈ ವೇಳೆ ಅರುಣ್ ಕುಮಾರ್, ಜಯಂತ್, ಲಯನ್ಸ್ ಉಮೇಶ್ ಶೆಟ್ಟಿ, ಲಕ್ಷ್ಮಣ್ ಸಪಲ್ಯ, ಬಾಲಕೃಷ್ಣ ಶೆಟ್ಟಿ, ಪ್ರೀತಮ್ ಧರ್ಮಸ್ಥಳ, ಉಜಿರೆಯ ಈ ಹಿಂದಿನ ಪಿಡಿಒ ಗಾಯತ್ರಿ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಮಂಜುನಾಥ್ ಶೆಟ್ಟಿ ನೆರವೇರಿಸಿದರು.