ಬೆಳ್ತಂಗಡಿ: ಸಂತ ತೆರೇಸಾ ಪದವಿ ಪೂರ್ವ ಕಾಲೇಜಿನಲ್ಲಿ ಫುಡ್ ಫೆಸ್ಟ್ 

0

ಬೆಳ್ತಂಗಡಿ: ಸಂತ ತೆರೇಸಾ ಪದವಿ ಪೂರ್ವ ಕಾಲೇಜಿನಲ್ಲಿ ಸಾಂಸ್ಕೃತಿಕ ಸಂಘದಿಂದ ಅ.29ರಂದು ವಿದ್ಯಾರ್ಥಿಗಳಿಗೆ ಫುಡ್ ಫೆಸ್ಟನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ತಂಡಗಳಾಗಿ ಈ ಆಹಾರ ಮೇಳದಲ್ಲಿ ಭಾಗವಹಿಸಿದ್ದು ವಿವಿಧ ರೀತಿಯ ಭಕ್ಷ ಭೋಜನಗಳನ್ನು ವಿದ್ಯಾರ್ಥಿಗಳೇ ತಯಾರಿಸಿ ಪ್ರದರ್ಶಿಸಿದರು.

ಅತ್ಯುತ್ತಮ ರೀತಿಯಲ್ಲಿ ಭಕ್ಷ ಭೋಜನಗಳನ್ನು ಪ್ರದರ್ಶಿಸಿದ ಉತ್ತಮವಾದ ತಂಡಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಫುಡ್ ಫೆಸ್ಟಿನ ವೀಕ್ಷಕರಾಗಿ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಭಕ್ಷಗಳ ಸವಿಯನ್ನು ಸವಿದರು.  ಉತ್ತಮ ಆಹಾರದ ಉಪಯೋಗತೆ ಹಾಗೂ ಬಳಕೆ ಹೇಗೆ ಎನ್ನುವುದರ ಬಗ್ಗೆ ಅರಿವು ಮೂಡಿಸಲು ಈ ಕಾರ್ಯಕ್ರಮವು ಸಹಕಾರಿಯಾಯಿತು.

LEAVE A REPLY

Please enter your comment!
Please enter your name here