ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ವಿಶೇಷ ಭಾವಪೂರ್ಣ ಕಾರ್ಯಕ್ರಮ: ಮಾತೃ ವಂದನಾ, ಮಾತೃ ಪೂಜನ, ಮಾತೃ ಭೋಜನ

0

ಗುರುವಾಯನಕೆರೆ : ನಮ್ಮ ಮನೆ ಹವ್ಯಕ ಭವನದಲ್ಲಿ ಶ್ರೀ ಪತಂಜಲಿ ಯೋಗ ಸೇವಾ ಸಮಿತಿಯ ವತಿಯಿಂದ ಮಾತೃ ಪೂಜನ, ಮಾತೃ ಧ್ಯಾನ ಮತ್ತು ಮಾತೃ ಭೋಜನ ಎಂಬ ವಿಶಿಷ್ಟ ಭಾವಪೂರ್ಣ ಕಾರ್ಯಕ್ರಮ ನೆರವೇರಿತು. ಸಂಸ್ಕಾರ, ಸಂಘಟನೆ, ಸೇವೆ ಎಂಬ ಧ್ಯೇಯ ದೊಂದಿಗೆ ಕರುಣಾಮಯಿ,ತ್ಯಾಗ ಮೂರ್ತಿ ಅಮ್ಮನ ಮಹತ್ವವನ್ನು ಅರ್ಥೈಸುವ ಕಾರ್ಯಕ್ರಮದಲ್ಲಿ ಎಸ್ ಪಿ ವೈ ಎಸ್ ಎಸ್ ನೇತ್ರಾವತಿ ವಲಯ ಸಂಯೋಜಕರಾದ ಶ್ರೀಯುತ ಜಯರಾಮ ಅವರು ಮುಖ್ಯ ಮಾತುಗಾರರಾಗಿ ತಾಯಿಯ ಮಹತ್ವವನ್ನು ಮನಮುಟ್ಟುವಂತೆ ಅರ್ಥಪೂರ್ಣವಾಗಿ ಮಾತನಾಡಿದರು. ಮುಖ್ಯ ಅಭ್ಯಾಗತರಾಗಿ ಹೊಸನಗರ ಶ್ರೀ ರಾಮಚಂದ್ರಾಪುರ ಮಠ ಮಾತೃ ಮಂಡಳಿಯ ಹಾಗು ಹವ್ಯಕಭವನ ಮಾತೃ ಮಂಡಳಿಯ ಅಧ್ಯಕ್ಷೆ ದೇವಿಕಾ ಶಾಸ್ತ್ರಿ ಮಕ್ಕಳಿಗೆ ತಾಯಂದಿರು ಬಾಲ್ಯದಿಂದಲೇ ಸಂಸ್ಕಾರದ ಪಾಠ ಕಲಿಸಬೇಕು ಎಂಬ ಸಂದೇಶದೊಂದಿಗೆ ಶುಭ ಹಾರೈಸಿದರು. ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ
ಗಾಣಿಗರ ಸಮುದಾಯ ಭವನ ಶಾಖೆಯ ಯೋಗ ಶಿಕ್ಷಕಿ ಆಶಾ ಅಧ್ಯಕ್ಷತೆ ವಹಿಸಿ ಮಾತನಾಡಿ ಶುಭ ಹಾರೈಸಿದರು.

ಯೋಗ ಬಂಧುಗಳ ಸಾಮೂಹಿಕ ಪ್ರಾರ್ಥನೆಯೊಂದಿಗೆ ಹಾಗು ಬ್ರಾಹ್ಮೀ ಅವರ ವೈಯಕ್ತಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಜಯರಾಮ ಅವರು ವಿವಿಧ ಆಟೋಟ,ನಗುವ ಯೋಗದೊಂದಿಗೆ ಬಾಲ್ಯದ ನೆನಪುಗಳನ್ನು ಮರುಕಳಿಸುವಂತೆ ಮಾಡಿದರು ಮತ್ತು ಮುಖ್ಯ ಅಂಗವಾದ ಮಾತೃ ಧ್ಯಾನ ,ಮಾತೃ ವಂದನ ಕಾರ್ಯಕ್ರಮ ನಡೆಸಿಕೊಟ್ಟರು. ತ್ಯಾಗಮೂರ್ತಿ ಅಮ್ಮನ ರಕ್ಷಣೆಯ ಪ್ರತಿಜ್ಞಾವಿಧಿ ಭೋಧನೆಯ ಅಭೂತಪೂರ್ವ ಕ್ಷಣ ಎಲ್ಲರ ಕಣ್ಣಾಲಿಗಳು ತೇವಗೊಳ್ಳುವಂತಾಯಿತು. ಎಲ್ಲಾ ಯೋಗ ಬಂಧುಗಳು ಹಿರಿಯರ ಆಶೀರ್ವಾದ ಪಡೆದುಕೊಂಡರು. ಯೋಗ ತರಗತಿಯ ಬಂಧುಗಳು ತಾವು ಮನೆಯಲ್ಲಿ ಪ್ರಸಾದರೂಪದಲ್ಲಿ ತಯಾರಿಸಿ ತಂದ ವಿವಿಧ ತಿನಿಸುಗಳನ್ನು ಎಲ್ಲರಿಗೂ ಕೈತುತ್ತು ನೀಡುವ ಮೂಲಕ ಮಾತೃಭೋಜನ ಕಾರ್ಯಕ್ರಮ ನಡೆಸಿಕೊಟ್ಟರು. ಯೋಗ ಬಂಧುಗಳು ತರಗತಿಯ ಅನುಭವಗಳನ್ನು ಹಂಚಿಕೊಂಡರು.

ತಾಯಿಯ ಮಹತ್ವವನ್ನು ಅರ್ಥೈಸುವ ಉದ್ದೇಶವನ್ನು ಇಟ್ಟುಕೊಂಡು ಅ 26 ರಂದು ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ 190 ಮಂದಿ ಯೋಗ ಹಾಗು ಯೋಗೇತರ ಬಂಧುಗಳು ಪಾಲ್ಗೊಂಡಿದ್ದರು.

ಉಪ್ಪಿನಂಗಡಿ ತಾಲೂಕು ಸಂಚಾಲಕರಾದ ಸಂತೋಷ್ ಹಾಗು ವಿವಿಧ ಶಾಖೆಗಳ ಶಿಕ್ಷಕರು ಪಾಲ್ಗೊಂಡಿದ್ದರು. ಯೋಗ ಶಿಕ್ಷಕರಾದ ಪ್ರದೀಪ್ , ಆನಂದ್ ಹಾಗು ಪ್ರೇಮಲತಾ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿಬಂತು. ದಮಯಂತಿ ಅವರು ಸ್ವಾಗತಿಸಿ, ಪೂರ್ಣಿಮಾ ವರದಿ ವಾಚಿಸಿ ,ಸುಮಲತಾ ವಂದನಾರ್ಪಣೆ ಗೈದರು. ದಯಾನಂದ ಅವರು ವಂದೇಮಾತರಂ ಗೀತೆ ಹಾಡಿದರು. ಜಯಂತಿ ಏಕನಾಥ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here