ಬೆಳ್ತಂಗಡಿ: ದೈಹಿಕ ಹಾಗೂ ಮಾನಸಿಕ ಬದಲಾವಣೆ ಹೊಂದುವ ಹದಿಹರೆಯದವರಲ್ಲಿ ಸಂವಹನವನ್ನು ನಡೆಸುವುದರಿಂದ ಅವರಲ್ಲಿರುವ ಸಂದೇಹ, ಆತಂಕಗಳನ್ನು ದೂರ ಮಾಡಲು ಸಾಧ್ಯವಿದೆ ಎಂದು ಮಂಗಳೂರು ರೋಶನಿ ನಿಲಯದ ಸಹಾಯಕ ಪ್ರಾಧ್ಯಾಪಕಿ ರಮ್ಯಾ ಬಿ. ಹೇಳಿದರು.
ಅವರು ವಾಣಿ ಪದವಿ ಪೂರ್ವ ಕಾಲೇಜಿನ ಮಹಿಳಾ ಕ್ಷೇಮ ಪಾಲನಾ ಸಂಘದ ಆಶ್ರಯದಲ್ಲಿ ನಡೆದ ಗೆಳತಿ ಭರವಸೆಯ ನಾಳೆಗಾಗಿ ಎಂಬ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರೊಂದಿಗೆ ಸಂವಹನವನ್ನು ನಡೆಸುತ್ತಾ, ಹೆಣ್ಣು ಮಕ್ಕಳ ಜೀವನ ಕ್ರಮ, ದೈಹಿಕ ಶುಚಿತ್ವ ಹಾಗೂ ಮಾನಸಿಕ ಒತ್ತಡವನ್ನು ನಿವಾರಣೆ ಮಾಡುವ ವಿಚಾರಗಳ ಕುರಿತು ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಯದುಪತಿ ಗೌಡ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲ ವಿಷ್ಣು ಪ್ರಕಾಶ್ ಉಪಸ್ಥಿತರಿದ್ದರು. ಮಹಿಳಾ ಕ್ಷೇಮಪಾಲನಾ ಸಂಘದ ಸಂಯೋಜಕಿ ಶಾಂತಿ ಪ್ರಿಯ ಪಿಂಟೋ ಸ್ವಾಗತಿಸಿದರು. ರಾಧಿಕಾ ಎಂ. ಧನ್ಯವಾದವಿತ್ತರು.
p>