ಕೊಕ್ಕಡ: ಅ.24ರಂದು ಸಾಯಂಕಾಲ ಸುರಿದ ಭಾರಿ ಮಳೆಗೆ ಕೊಕ್ಕಡದಿಂದ ಅರಸಿನಮಕ್ಕಿ ಬರುವ ಮಾರ್ಗದ ಹೊಸ್ತೋಟ ಸಮೀಪ ರಸ್ತೆಗೆ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿದ್ದರಿಂದ ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ಉಂಟಾಗಿ ಸಂಚಾರಕ್ಕೆ ಅಡೆತಡೆ ಉಂಟಾಯಿತು. ತದನಂತರ ಮಳೆ ಪ್ರಮಾಣ ಕಡಿಮೆ ಆದ ಮೇಲೆ ನೀರಿನ ಪ್ರಮಾಣ ಕಡಿಮೆಯಾಗಿ ಸಂಚಾರ ಸುಗಮವಾಯಿತು.
ಸಾಯಂಕಾಲ 5ಗಂಟೆಯಿಂದ 7ಗಂಟೆ ವರೆಗೆ ಸುರಿದ ವಿಪರೀತ ಮಳೆಯಿಂದ ಕೊಕ್ಕಡ, ಅರಸಿನಮಕ್ಕಿ ಭಾಗದಲ್ಲಿ ಅಲ್ಲಲ್ಲಿ ಗುಡ್ಡ ಕುಸಿತ ಗೊಂಡಿದ್ದು, ಯಾವುದೇ ದೊಡ್ಡ ಪ್ರಮಾಣದ ಹಾನಿ ಸಂಭವಿಸಿಲ್ಲ.
p>