ಬೆಳಾಲು: ಬೆಳಾಲು ರಬ್ಬರ್ ಪ್ರೊಡ್ಯೂಸರ್ಸ್ ಸೊಸೈಟಿ ಮಹಾಸಭೆ ಅ.22ರಂದು ಬೆಳಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಸೊಸೈಟಿ ಅಧ್ಯಕ್ಷ ದಾಮೋದರ ಗೌಡ ಸುರುಳಿ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಮಂಗಳೂರು ರಬ್ಬರ್ ಬೋರ್ಡ್ ರೀಜನಲ್ ಕಚೇರಿಯ ರಬ್ಬರ್ ಪ್ರೊಡಕ್ಷನ್ ಕಮಿಷನರ್ ಶೀಜಾ ಟಿ. ಪಿ., ಅಸಿಸ್ಟೆಂಟ್ ಡೆವಲಪ್ಸ್ ಮೆಂಟ್ ಆಫೀಸರ್ ದೀಪ್ತಿದಾಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಬೆಳಾಲು ರಬ್ಬರು ಪ್ರೊಡ್ಯೂಸರ್ಸ್ ಸೊಸೈಟಿ ನಿರ್ದೇಶಕರುಗಳಾದ ಹೆಚ್. ಪದ್ಮ ಗೌಡ, ಜೋಯಿ ನಾಯರ್ ಕಂಡ, ಸುರೇಶ್ ಭಟ್ ಪರಂಗಜೆ, ವಸಂತ ನಾಯ್ಕ ಪಲ್ಲಿದಡ್ಕ, ಬೆಳಾಲು ಸಹಕಾರ ಸಂಘದ ಉಪಾಧ್ಯಕ್ಷ ಸುರೇಂದ್ರ ಗೌಡ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾರಾಯಣ ಗೌಡ ಉಪಸ್ಥಿತರಿದ್ದರು. ಉಪಾಧ್ಯಕ್ಷ ವಿಜಯ ಗೌಡ ಸ್ವಾಗತಿಸಿ, ನಿರ್ದೇಶಕಿ ಉಷಾದೇವಿ ವಂದಿಸಿದರು. ಅವಿನಾಶ್ ಕಾತ್ಯಕ್ರಮ ನಿರೂಪಿಸಿ, ವರದಿ ವಾಚಿಸಿದರು.
p>