ಉಜಿರೆ: ಲಕ್ಷ್ಮಿ ಕನಸಿನ ಮನೆಯಲ್ಲಿ ವಿಜಯೋತ್ಸವ ಕೂಪನ್ ಬಿಡುಗಡೆ

0

ಉಜಿರೆ: ಉದ್ಯಮದ ಯಶಸ್ಸಿಗೆ ಉತ್ತಮ ಸೇವೆ, ಗುಣಮಟ್ಟ, ಗ್ರಾಹಕರೊಂದಿಗೆ ಉತ್ತಮ ಬಾಂದವ್ಯ ಅಗತ್ಯ. ಅದರ ಜೊತೆ ಕಠಿಣ ಶ್ರಮವು ಬೇಕು. ಕಠಿನ ಶ್ರಮದಿಂದ ಯಶಸ್ಸು ಸಿಗಬಹುದು ಎಂಬುದಕ್ಕೆ ಉಜಿರೆ ಲಕ್ಷ್ಮಿ ಇಂಡಸ್ಟ್ರೀಸ್ ಕನಸಿನ ಮನೆಯ ಮೋಹನ್ ಕುಮಾರ್ ಸಾಕ್ಷಿ ಎಂದು ಉಜಿರೆ ಎಸ್ ಡಿ ಎಂ ಕಾಲೇಜಿನ ಐ ಟಿ ವಿಭಾಗದ ಸಿ ಇ ಒ ಪೂರಣ್ ವರ್ಮ ಹೇಳಿದರು. ಅವರು ಅ.22ರಂದು ಉಜಿರೆ ಲಕ್ಷ್ಮಿ ಇಂಡಸ್ಟ್ರೀಸ್ ಕನಸಿನ ಮನೆಯಲ್ಲಿ ವಿಜಯವಾಣಿ ವಿಜಯೋತ್ಸವದ ಕೂಪನ್ ಬಿಡುಗಡೆಗೊಳಿಸಿ ಮಾತನಾಡಿದರು.

ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿ ಸಾರಿಗೆ ಸಂಸ್ಥೆ ಮತ್ತು ಪತ್ರಿಕಾ ಧರ್ಮದಲ್ಲಿ ಡಾ ವಿಜಯಸಂಕೇಶ್ವರರ ಸಾಧನೆ ಇಡೀ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಿದೆ. ಅದೇ ರೀತಿ ನೂರಾರು ಮಂದಿಗೆ ಅನ್ನದಾತರಾದ ಲಕ್ಷ್ಮಿ ಕನಸಿನ ಮನೆಯ ಮಾಲಕ ಮೋಹನ್ ಕುಮಾರ್ ರವರ ಕಠಿನ ಶ್ರಮದಿಂದ ಉದ್ಯಮ ಯಶಸ್ವಿಯಾಗಿದೆ. ಜೊತೆಗೆ ಸಮಾಜ ಮುಖಿ ಕಾರ್ಯ ಮಾಡುವ ಮೂಲಕ ಸಮಾಜಕ್ಕೆ ಆಸ್ತಿಯಾಗಿದ್ದಾರೆ ಎಂದರು. ಮಾಲಕ ಮೋಹನ್ ಕುಮಾರ್ ಮಾತನಾಡಿ ನಮ್ಮಲ್ಲಿ ಗೃಹ ನಿರ್ಮಾಣ ಉತ್ಪನ್ನಗಳನ್ನು ಗುಣಮಟ್ಟದಲ್ಲಿ ತಯಾರಿಸಲಾಗುತ್ತದೆ. ಗುಣಮಟ್ಟಕ್ಕೆ ಯಾವುದೇ ರಾಜಿ ಇಲ್ಲ. ಅದ್ದರಿಂದ 35 ವರ್ಷಗಳಿಂದ ಗ್ರಾಹಕರ ವಿಶ್ವಾಸ ಗಳಿಸಿದ್ದೇವೆ ಎಂದರು.

ಕಿರುತೆರೆ ನಟ ವಿನು ಬಳಂಜ, ಬಳಂಜ ಶಿಕ್ಷಣ ಟ್ರಸ್ಟ್ ನ ಕಾರ್ಯದರ್ಶಿ ರತ್ನರಾಜ್ ಜೈನ್, ಟ್ರಷ್ಡಿ ಪ್ರಮೋದ್ ಜೈನ್, ರೇಷ್ಮಾ ಮೋಹನ್ ಕುಮಾರ್ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಪತ್ರಕರ್ತ ಮನೋಹರ್ ಬಳಂಜ ಪ್ರಾಸ್ತಾವಿಕ ಮಾತನಾಡಿ ನಿರೂಪಿಸಿದರು.

p>

LEAVE A REPLY

Please enter your comment!
Please enter your name here