ಕೊಯ್ಯೂರು: ರಾಷ್ಟ್ರಮಟ್ಟದ ಮುಕ್ತ ಕರಾಟೆ ಪಂದ್ಯ- ಕೊಯ್ಯೂರಿನ ಮೋಹನ್ ಪೂಜಾರಿ ಬಜೆ ಇವರಿಗೆ ಚಿನ್ನ ಹಾಗೂ ಬೆಳ್ಳಿ

0

ಕೊಯ್ಯೂರು: ಎ.ಕೆ.ಎಫ್.ಎ. ಕರಾಟೆ ಅಸೋಸಿಯೇಷನ್ ವತಿಯಿಂದ ಭಟ್ಕಳದಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಮುಕ್ತ ಕರಾಟೆ ಪಂದ್ಯದಲ್ಲಿ ಶೊರೀನ್ ರಿಯೊ ಕರಾಟೆ ಅಸೋಸಿಯೇಷನ್ ಆಫ್ ಇಂಡಿಯಾ ಇದರಿಂದ ಭಾಗವಹಿಸಿದ ಸೆನ್ಸಾಯಿ ಮೋಹನ್ ಪೂಜಾರಿ ಬಜೆ ಇವರು ಸೀನಿಯರ್ ಬ್ಲಾಕ್ ಬೆಲ್ಟ್ ವಿಭಾಗದ ಕುಮಿತೆಯಲ್ಲಿ ಚಿನ್ನದ ಪದಕ ಹಾಗೂ ಕಟ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಪಡೆದಿರುತ್ತಾರೆ.

ಪ್ರಸ್ತುತ ಜಿಲ್ಲೆಯ ಹಲವು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕರಾಟೆ ತರಬೇತಿಯನ್ನು ನೀಡುತ್ತಿದ್ದು, ರೆನ್ಸಿ ನದೀಮ್ ಮೂಡಬಿದ್ರೆ ಹಾಗೂ ಶಿಹನ್ ಅಬ್ದುಲ್ ರಹಿಮಾನ್ ಉಜಿರೆ ಇವರಿಂದ ತರಬೇತಿಯನ್ನು ಪಡೆದಿರುತ್ತಾರೆ. ಇವರು ಬಜೆ ಸೇಸಪ್ಪ ಪೂಜಾರಿ ಮತ್ತು ಬೇಬಿ ದಂಪತಿ ಪುತ್ರ.

LEAVE A REPLY

Please enter your comment!
Please enter your name here