ಹಿಂದೂ ದೇವಾಲಯಗಳನ್ನು ಸರಕಾರದ ಹಿಡಿತದಿಂದ ಮುಕ್ತಗೊಳಿಸಲು ಒಂದು ದಿನದ ಉಪವಾಸ ಸತ್ಯಾಗ್ರಹ

0

ಕೊಕ್ಕಡ: ಹಿಂದೂ ದೇವಾಲಯಗಳನ್ನು ಸರ್ಕಾರದ ಹಿಡಿತದಿಂದ ಮುಕ್ತಿಗೊಳಿಸಲು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಡಳಿತಕ್ಕೆ ಒಳಪಟ್ಟ (ಎ ಗ್ರೇಡ್ ಬಿ ಗ್ರೇಡ್ ಹಾಗೂ ಸಿ ಗ್ರೇಡ್ ) ದೇವಾಲಯಗಳನ್ನು ಸರಕಾರದ ಹಿಡಿತದಿಂದ ವಿಮುಕ್ತಿಗೊಳಿಸಲು ಹಾಗೂ ಹಿಂದೂ ಸ್ವಾಯತ್ತೆ ಮಂಡಳಿಯನ್ನು ರಚಿಸಿ ಹಿಂದೂಗಳಿಗೆ ಧಾರ್ಮಿಕ ಸ್ವಾತಂತ್ರ್ಯವನ್ನು ಹಿಂದಿರುಗಿಸಬೇಕೆಂದು ನಾಡಿನ ಸುಪ್ರಸಿದ್ಧ ದೇವಾಲಯವಾದ ಕೊಕ್ಕಡ ಸೌತಡ್ಕ ಶ್ರೀ ಮಹಾಗಣಪತಿ ದೇವರ ಸನ್ನಿಧಾನದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ. ಅಕ್ಟೋಬರ್ 6ರಂದು ಉಪವಾಸ ಸತ್ಯಾಗ್ರಹ ನಡೆಯಿತು. ಉಪವಾಸ ಸತ್ಯಾಗ್ರಹವನ್ನು ಆರ್ ಎಸ್‌ ಎಸ್ ಮುಖಂಡ ಕೃಷ್ಣ ಭಟ್ ಹಾಗೂ ಡಾ.ಮೋಹನ್ ದಾಸ್ ಗೌಡ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ಕಳೆಂಜ ಇದರ ಅಧ್ಯಕ್ಷರಾದ ಡಾ.ಎಂ.ಎಂ ದಯಾಕರ್., ವಿಶ್ವ ಹಿಂದೂ ಪರಿಷತ್‌ ಸಂಚಾಲಕ ನವೀನ್ ನೆರಿಯ, ಉದ್ಯಮಿ ಬಾಲಕೃಷ್ಣ ನೈಮಿಷ, ಪ್ರಕಾಶ್ ಚಾರ್ಮಾಡಿ, ಸೌತಡ್ಕ ದೇವಸ್ಥಾನದ ದೇವಸ್ಥಾನ ಸಮಿತಿ ಮಾಜಿ ಅಧ್ಯಕ್ಷ ಹರೀಶ್‌ ರಾವ್, ಮಾಜಿ ಸದಸ್ಯ ಪುರಂದರ ಗೌಡ ಕಡೀರಾ, ಪ್ರಶಾಂತ್ ಗೌಡ ಪೂವಾಜೆ, ವಿವಿಧ ಭಜನಾ ಮಂಡಳಿ ದೇವಸ್ಥಾನಗಳ ಸದಸ್ಯರು ಆಗಮಿಸಿ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

p>

LEAVE A REPLY

Please enter your comment!
Please enter your name here