ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ರಚನೆಗೆ ವೇಗ: ಬೆಳ್ತಂಗಡಿಯ ಸುಜಿತಾ ವಸಂತ ಬಂಗೇರ ಸಹಿತ ೧೨೪ ಮಂದಿ ಅರ್ಜಿ ಸಲ್ಲಿಕೆ

0

ಬೆಳ್ತಂಗಡಿ: ರಾಜ್ಯದ ಪ್ರಸಿದ್ಧ ಯಾತ್ರಾ ಕ್ಷೇತ್ರವಾದ ಕಡಬ ತಾಲೂಕಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ರಚನೆ ಪ್ರಕ್ರಿಯೆಗೆ ವೇಗ ದೊರೆತಿದೆ. ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರ ಅವರ ಪತ್ನಿ ಸುಜಿತಾ ವಸಂತ ಬಂಗೇರ ಸಹಿತ ೧೨೪ ಮಂದಿ ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯತ್ವ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಕೆ ಅವಧಿ ಮುಕ್ತಾಯಗೊಂಡು ತಿಂಗಳುಗಳೇ ಕಳೆದರೂ ನೇಮಕಾತಿ ಪ್ರಕ್ರಿಯೆ ಮುಂದುವರಿದಿರಲಿಲ್ಲ. ಇದೀಗ ನೇಮಕಾತಿ ಪ್ರಕ್ರಿಯೆ ಆರಂಭಗೊಂಡಿದ್ದು ಅರ್ಜಿ ಸಲ್ಲಿಸಿರುವವರ ಹೆಸರು ಪರಿಶೀಲನೆಗಾಗಿ ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ರವಾನಿಸಲಾಗಿದೆ. ಪೊಲೀಸ್ ಠಾಣೆಗಳಿಂದ ವರದಿ ಬಂದ ಕೂಡಲೇ ಹೊಸ ಸಮಿತಿ ನೇಮಕವಾಗುವುದು ಖಚಿತಗೊಂಡಿದೆ.
೧೨೪ ಅರ್ಜಿ: ವ್ಯವಸ್ಥಾಪನಾ ಸಮಿತಿಯಲ್ಲಿ ಸದಸ್ಯತ್ವಕ್ಕಾಗಿ ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರ ಅವರ ಪತ್ನಿ ಸುಜಿತಾ ವಸಂತ ಬಂಗೇರ ಸಹಿತ ರಾಜ್ಯದ ವಿವಿಧೆಡೆಯ ೧೨೪ ಮಂದಿ ಅರ್ಜಿ ಸಲ್ಲಿಸಿದ್ದಾರೆ ಎಂಬ ವಿವರ ಲಭ್ಯವಾಗಿದೆ. ಕವಿತಾ ವೆಂಕಟೇಶ್ ಬೆಂಗಳೂರು, ಸರಸ್ವತಿ ಕಾಮತ್, ಲೋಕೇಶ್ ಆಕ್ರಿಕಟ್ಟೆ, ರಮೇಶ್ ಕೋಟೆ, ಸತೀಶ್ ಹುದಿನೂರು, ಅಶೋಕ್ ನೆಕ್ರಾಜೆ, ಸನತ್ ಮುಳುಗಾಡು, ವಿಜಯಕುಮಾರ್ ರೈ ಮರ್ದಾಳ, ಸುಧೀರ್ ಕುಮಾರ್ ಶೆಟ್ಟಿ ಬಿಳಿನೆಲೆ, ಡಾ.ಸೌಮ್ಯ ಸುಧೀರ್‌ಕುಮಾರ್ ಶೆಟ್ಟಿ, ಅಭಿಲಾಶ್ ನೂಜಿಬಾಳ್ತಿಲ, ಗೋಪಾಲ ಎಣ್ಣೆಮಜಲು, ರತ್ನಾಕರ ಶೆಟ್ಟಿ ಬೆಂಗಳೂರು, ನವೀನ್ ರೈ ಬೆಳ್ತಂಗಡಿ, ಪ್ರವೀಣ ರೈ ಮರುವಂಜ, ನಂದರಾಜ್ ಸಂಕೇಶ, ಭರತ್ ಮುಂಡೋಡಿ, ಕೆ.ರಾಜೇಶ ಭಟ್ ಕಾರ್ಕಳ, ಸಚಿನ್‌ರಾಜ್ ಶೆಟ್ಟಿ, ಅನಿಲ್ ಬೆಳ್ಳಾರೆ, ಜಯಪ್ರಕಾಶ್ ರೈ, ದಿನಕರ ಉಳ್ಳಾಲ, ರಮೇಶ ನಾಯಕ್ ಬಂಟ್ವಾಳ, ಶಶಿಕಲಾ ದೇರಪ್ಪಜ್ಜನ ಮನೆ, ಹರೀಶ ಇಂಜಾಡಿ, ಬಿ.ಜಿ ಪ್ರವೀಣ ಪಾಣಾಜೆ, ಎನ್.ಕೆ ಮನೋಹರ, ಎಚ್.ಎಲ್ ಹರೀಶ ಬೆಂಗಳೂರು, ಉದಯ ಶಂಕರ ಶೆಟ್ಟಿ ಅರಿಯಡ್ಕ, ಜಿ.ಕೃಷ್ಣಪ್ಪ ರಾಮಕುಂಜ, ಸಾಯಿಗೀತ ಕೂಜುಗೋಡು, ರಾಜೀವಿ ಆರ್. ರೈ, ಮಹೇಶ್ ಕುಮಾರ್ ಕರಿಕ್ಕಳ, ಬಾಲಾಜಿ ಬೆಂಗಳೂರು, ಸೀತಾರಾಮ ರೈ ಸವಣೂರು, ಡಾ.eನೇಶ್ ಎನ್.ಎ, ಡಾ. ವೆಂಕಟೇಶ್ ಎಂ., ರಾಮದಾಸ ಗೌಡ ಪುತ್ತೂರು, ರಾಜಾರಾಮ್ ಭಟ್ ಬೆಟ್ಟ, ನಿಖಿಲಾ ಡಬೀರ ಹುಬ್ಬಳ್ಳಿ, ಕೇನ್ಯ ರವೀಂದ್ರನಾಥ ಶೆಟ್ಟಿ, ವಿಜಯ ಜಯರಾಮ ಕೂಜುಗೋಡು, ಸುಮಾ ರಂಗನಾಥ ಬೆಂಗಳೂರು, ದಯಾನಂದ ಕೂಜುಗೋಡು, ರಮೇಶ ರೈ ಡಿಂಬ್ರಿ, ಪ್ರವೀಣ ಮುಂಡೋಡಿ, ಬೊಂಡಾಲ ಸಚ್ಚಿದಾನಂದ ಶೆಟ್ಟಿ, ಸುಬ್ರಹ್ಮಣ್ಯ ರಾವ್, ಸತ್ಯ ಕುಮಾರ್ ಆಡಿಂಜ, ನಾರಾಯಣ ಶಬರಾಯ, ಕೃಷ್ಣಮೂರ್ತಿ ಭಟ್ ಸುಬ್ರಹ್ಮಣ್ಯ, ತಾರಾ ಮಲ್ಲಾರ, ದೀಪಶ್ರೀ ಕರೆಕ್ಕೋಡಿ ಕೇನ್ಯ, ಶೈಲೇಶ್ ಕಟ್ಟೆಮನೆ, ನಿರ್ಮಲ ಕೂಜುಗೋಡು ಕಟ್ಟೆಮನೆ, ಟಿ.ಎನ್. ಶ್ರೀನಾಥ್ ಕುಲ್ಕುಂದ, ಎನ್.ಕೆ. ಜಗನ್ನಿವಾಸ ರಾವ್, ಮೋಹನದಾಸ ರೈ ದೋಣಿಮಕ್ಕಿ, ಸೌಮ್ಯ ಕಲ್ಲುಗುಡ್ಡೆ ಸುಬ್ರಹ್ಮಣ್ಯ, ಧನಂಜಯ ಅಡ್ಪಂಗಾಯ, ಸುದರ್ಶನ ಪಡಿಯಾರ್, ಸುಂದರ ನಾಯ್ಕ ಕೂಡೇಲು, ಕಿಶೋರ್ ಕುಮಾರ್ ಅರಂಪಾಡಿ, ಹರೀಶ್ ಎಸ್. ಇಂಜಾಡಿ, ಲೀಲಾ ಮನಮೋಹನ್, ಶಿವರಾಮ ರೈ ಸುಬ್ರಹ್ಮಣ್ಯ, ಚೇತನ ಹರೀಶ ಇಂಜಾಡಿ, ಕೈಯಾರು ನಾರಾಯಣ ಭಟ್, ವೆಂಕಟ್ರಮಣ ಕುಕ್ಕುಜಡ್ಕ, ಪ್ರಮೋದ್ ಕುಮಾರ್ ಬೆಂಗಳೂರು, ಡಾ.ಬಿ.ಕೆ. ವಿಶುಕುಮಾರ್ ಬೇರ್ಯ, ಶಿವಾನಂದ ವೀರಭದ್ರಪ್ಪ, ಸತೀಶ್ಚಂದ್ರ ಶೆಟ್ಟಿ ಬಲ್ಯ, ಮಂಜುನಾಥ ಎನ್.ಎಂ ಬೆಂಗಳೂರು, ನಿತ್ಯಾನಂದ ಮುಂಡೋಡಿ, ಮಾಧವ ದೇವರಗದ್ದೆ, ಜಯರಾಮ ಪಿ.ಸಿ. ಮಡಪ್ಪಾಡಿ, ಪಿ.ಎಸ್ ಗಂಗಾಧರ, ವಿಮಲಾ ರಂಗಯ್ಯ, ಸತೀಶ್ ನಾಯಕ್ ಕಡಬ, ರಂಗಯ್ಯ ಶೆಟ್ಟಿಗಾರ್, ಶಿವಾನಂದ ಅಡಿಗ ಗದಗ, ಡಾ. ಬಿ.ರಘು, ಆಶಾ ಲPಣ ಗುಂಡ್ಯ, ಅಜಿತ್ ಕುಮಾರ್ ಹಾವೇರಿ, ಚಂದ್ರಶೇಖರ ಭಟ್, ಲೋಕಯ್ಯ ಗೌಡ ನೆಲ್ಯಾಡಿ, ಬೆಟ್ಟ ರಾಜರಾಮ ಭಟ್, ಸುಮನಾ ಬೆಳ್ಳಾರ್ಕರ್, ನಾಗಭೂಷಣ ಮೈಸೂರು, ಚಂದ್ರಾವತಿ ನೆತ್ತಾರ ಐನೆಕಿದು, ಲಕ್ಷ್ಮಿ ಎಸ್. ಕಲ್ಲಪ್ಪಣೆ, ಹರೀಶ ಭಂಡಾರಿ ಬಂಟ್ವಾಳ, ಶ್ರೀವತ್ಸ ವಿ. ಬೆಂಗಳೂರು, ತಾರಾ ಮರ, ಸುಮಿತ್ರಾ ಜಯಪ್ರಕಾಶ್ ಕೂಜುಗೋಡು, ಜಯಪ್ರಕಾಶ್ ಕೂಜುಗೋಡು, ಶಿವಕುಮಾರ ಕೆ. ಕೂಜುಗೋಡು, ಎಸ್.ಎನ್. ದಯಾನಂದ ಶ್ರೀರಂಗಪಟ್ಟಣ, ವೇದನಾಥ ಸುವರ್ಣ, ಶ್ಯಾಮಪ್ರಸಾದ ಪುಂಜಾಲಕಟ್ಟೆ, ಸುರೇಶ ನೂಚಿಲ, ಮಹಾಬಲ ಶೆಟ್ಟಿ ಪುಣ್ಚಪ್ಪಾಡಿ, ಬಾಲಕೃಷ್ಣ ಬೆಂಗಳೂರು, ಶ್ರೀಹರಿ ಕುಕ್ಕುಡೇಲು, ನಾಗೇಂದ್ರ ಕುಮಾರ್, ಡಾ. ಹರ್ಷಕುಮಾರ್ ಮಾಡಾವು, ಪದ್ಮಗೌಡ ಸಿರಿಬಾಗಿಲು, ಸ್ವರೂಪ್ ಎನ್. ಶೆಟ್ಟಿ, ಎನ್.ಜಿ. ಲೋಕನಾಥ, ವೀಣಾ ಪಿ. ಭಟ್, ಪಿ.ದುಗ್ಗಪ್ಪ ತಣ್ಣೀರುಪಂತ, ಶಶಿಧರ ಬೊಟ್ಯಡ್ಕ, ಪುಷ್ಪಾ ಡಿ. ಕಾನತ್ತೂರು, ದಿನೇಶ ಬಿ.ರಾವ್, ಎನ್ ರವೀಂದ್ರ ಶೆಟ್ಟಿ, ಹರಿಣಿ ಎಸ್. ಇಂಜಾಡಿ, ಅಶ್ವಿನಿ ದೇವರಗದ್ದೆ, ಧರ್ಮಪಾಲ ಕೊಯಿಂಗಾಜೆ, ಜಗದೀಶ್ ಪಡ್ಪು, ಕೃಷ್ಣಕುಮಾರ್, ಕುಮಾರ್ ಎನ್. ಅವರು ವ್ಯವಸ್ಥಾಪನಾ ಸಮಿತಿಯಲ್ಲಿ ಸದಸ್ಯತ್ವ ಕೋರಿ ಅರ್ಜಿ ಸಲ್ಲಿಸಿದ್ದಾರೆ.

ನಂ.೧ ದೇವಸ್ಥಾನ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ರಾಜ್ಯ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳ ಪೈಕಿ ಅತೀ ಹೆಚ್ಚು ಆದಾಯ ಗಳಿಸುವ ದೇವಸ್ಥಾನವಾಗಿದೆ. ೨೦೨೩-೨೪ನೇ ಆರ್ಥಿಕ ವರ್ಷದಲ್ಲಿ ೧೪೬.೦೧ ಕೋಟಿ ರೂ.ಆದಾಯ ಗಳಿಸಿ ಆದಾಯ ಗಳಿಕೆಯಲ್ಲಿ ರಾಜ್ಯದಲ್ಲಿ ನಂ.೧ ಸ್ಥಾನ ಪಡೆದುಕೊಂಡಿತು. ಅಲ್ಲದೆ ಸತತ ೧೩ ವರ್ಷಗಳಿಂದ ಆದಾಯ ಗಳಿಕೆಯಲ್ಲಿ ನಂಬರ್ ೧ ಸ್ಥಾನದಲ್ಲಿದೆ.

ಒಟ್ಟು ೯ ಸ್ಥಾನ: ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಲ್ಲಿ ಒಟ್ಟು ೯ ಸ್ಥಾನಗಳಿರುತ್ತದೆ. ಇದರಲ್ಲಿ ೧ ಸ್ಥಾನ ಪ್ರಧಾನ ಅರ್ಚಕರಿಗೆ ಸೀಮಿತವಾಗಿರುತ್ತದೆ. ಉಳಿದಂತೆ ಎಸ್‌ಸಿ/ಎಸ್‌ಟಿ-೧, ಮಹಿಳೆ-೨ ಹಾಗೂ ೫ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುತ್ತದೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಈ ಹಿಂದಿನ ವ್ಯವಸ್ಥಾಪನಾ ಸಮಿತಿ ಅವಧಿ ೪-೩-೨೦೨೪ಕ್ಕೆ ಕೊನೆಗೊಂಡಿದ್ದು ಸದ್ಯ ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ. ಪುತ್ತೂರು ಸಹಾಯಕ ಆಯುಕ್ತರು ಆಡಳಿತಾಧಿಕಾರಿಯಾಗಿದ್ದಾರೆ.

LEAVE A REPLY

Please enter your comment!
Please enter your name here