ಸುದ್ದಿಯ ಸುತ್ತ ವಾರಕ್ಕೊಂದು ಸುತ್ತು ಕಾರ್ಯಕ್ರಮ ನೇರಪ್ರಸಾರ-೩

0

ಸುದ್ದಿಯ ಸುತ್ತ ವಾರಕ್ಕೊಂದು ಸುತ್ತು ವಿಶೇಷ ಕಾರ್ಯಕ್ರಮದ ೩ನೇ ನೇರಪ್ರಸಾರ ಸೆ.೨೦ರಂದು ಸಂಜೆ ಸುದ್ದಿ ನ್ಯೂಸ್ ಬೆಳ್ತಂಗಡಿ ಸ್ಟುಡಿಯೋದಲ್ಲಿ ನಡೆಯಿತು.
ಸುದ್ದಿ ಬಿಡುಗಡೆ ಪತ್ರಿಕೆಯ ಸಂಪಾದಕ ಸಂತೋಷ್ ಕುಮಾರ್ ಶಾಂತಿನಗರ ಮತ್ತು ಸುದ್ದಿ ನ್ಯೂಸ್ ಚಾನೆಲ್‌ನ ಮುಖ್ಯಸ್ಥ ದಾಮೋದರ ದೊಂಡೋಲೆ ಪ್ರಮುಖ ಘಟನೆಗಳ ಕುರಿತು ವಿಶ್ಲೇಷಣೆ ನಡೆಸಿದರು. ಪ್ರಧಾನ ನಿರೂಪಕಿ ಶ್ರೇಯಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಪ್ರಮುಖವಾಗಿ ಕುವೆಟ್ಟು ಗ್ರಾಮಸಭೆಯಲ್ಲಿ ನಡೆದ ಗುರುವಾಯನಕೆರೆ ಎಕ್ಸೆಲ್ ಕಾಲೇಜು ಕುರಿತಾದ ಚರ್ಚೆ-ದೇಶದ್ರೋಹ ವಿಚಾರ-ಡ್ರಗ್ಸ್ ದಂಧೆ-ಅನಿಲ ಸೈಟ್-ನರಕಧಾಮವಾಗಿದೆ ಗುರುವಾಯನಕೆರೆಯ ಮೋಕ್ಷಧಾಮ, ವಿಧಾನ ಪರಿಷತ್ ಚುನಾವಣೆ ದಿನಾಂಕ ನಿಗದಿ-ಬಿಜೆಪಿ ಕಾಂಗ್ರೆಸ್‌ನಲ್ಲಿ ಹಲವರ ಪೈಪೋಟಿ, ಸಂಸದ ಬ್ರಿಜೇಶ್ ಚೌಟರಿಂದ ಅರಸಿನಮಕ್ಕಿ ರೆಖ್ಯ ಕಾಮಗಾರಿ ವೀಕ್ಷಣೆ-ರಾಷ್ಟ್ರೀಯ ಹೆದ್ದಾರಿ-ಸರ್ವಿಸ್ ರಸ್ತೆ ತ್ವರಿತ ಕಾಮಗಾರಿಗೆ ಸೂಚನೆ, ಶಾಸಕ ಹರೀಶ್ ಪೂಂಜ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನುzಶಿಸಿ ಫೇಸ್‌ಬುಕ್‌ನಲ್ಲಿ ಕಲೆಕ್ಷನ್ ಮಾಸ್ಟರ್ ಎಂದು ಪೋಸ್ಟ್ ಹಾಕಿದ್ದ ವಿಚಾರಕ್ಕೆ ಸಂಬಂಧಿಸಿ ತನಿಖಾಧಿಕಾರಿಯಿಂದ ನೋಟಿಸ್ ಜಾರಿ, ಟಾಯ್ಲೆಟ್‌ನಲ್ಲಿ ವಾಸಿಸುತ್ತಿದ್ದ ಚಾರ್ಮಾಡಿಯ ಚೆಲುವಮ್ಮ ಮನೆಗೆ ಶಿಫ್ಟ್, ಸೆಪ್ಟೆಂಬರ್ ೨೨ರಿಂದ ಧರ್ಮಸ್ಥಳದಲ್ಲಿ ಭಜನಾ ಕಮ್ಮಟ, ಬೆಳ್ತಂಗಡಿಯ ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ೧೦೩೯ ಪ್ರಕರಣಗಳು ಇತ್ಯರ್ಥ, ದಿನೇಶ್ ಅಮ್ಮಣ್ಣಾಯರಿಗೆ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ತಾ.ಪಂ. ಮತ್ತು ಗ್ರಾಮ ಪಂಚಾಯತ್‌ಗಳಿಗೆ ನಿಯಮ ಬಾಹಿರವಾಗಿ ಕಾನೂನು ಸಲಹೆಗಾರರಾಗಿ ಶೈಲೇಶ್ ಠೋಸರ್ ನೇಮಕ: ಜಿ.ಪಂ. ಸಿ.ಇ.ಓಗೆ ವಕೀಲ ಸುರೇಶ್ ದೂರು-ತಾ.ಪಂ. ಸಾಮಾನ್ಯ ಸಭೆಯ ನಿರ್ಣಯದಂತೆ ನನ್ನ ನೇಮಕವಾಗಿದೆ-ಶೈಲೇಶ್ ಠೋಸರ್ ಸ್ಪಷ್ಟನೆ ಮತ್ತು ಭಾರತಕ್ಕೆ ಸ್ವಾತಂತ್ರ್ಯ ನೀಡಿದರೆ ಅದು ರೌಡಿಗಳ, ರಾಸ್ಕಲ್‌ಗಳ, ಅಕ್ರಮ ವ್ಯವಹಾರ ಮಾಡುವವರ, ಜಗಳಗಂಟರ ಕೈಗೆ ಹೋಗುತ್ತದೆ ಎಂದು ಬ್ರಿಟನ್‌ನ ಮಾಜಿ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ಹೇಳಿರುವ ಮತ್ತು ಭಾರತದ ಕಟ್ಟ ಕಡೆಯ ವ್ಯಕ್ತಿಗೆ ಸಮಾನ ಅವಕಾಶ, ಹಕ್ಕು, ಸಾಮರಸ್ಯದ ಸ್ವಾವಲಂಬಿ ಜೀವನ ದೊರಕಿ ತಲೆಯೆತ್ತಿ ನಿಲ್ಲುವಂತಾಗುವುದೇ ಸ್ವಾತಂತ್ರ್ಯದ ಉzಶ ಎಂದು ಮಹಾತ್ಮಗಾಂಧಿ ಹೇಳಿರುವ ವಿಚಾರಗಳ ಕುರಿತು ಸುದ್ದಿ ಜನಾಂದೋಲನ ವೇದಿಕೆಯ ಮುಖ್ಯಸ್ಥ ಡಾ. ಯು.ಪಿ. ಶಿವಾನಂದರವರು ಬರೆದಿರುವ ಲೇಖನದ ಕುರಿತು ಚರ್ಚೆ ನಡೆಸಲಾಯಿತು.
ಸುದ್ದಿಯ ಸುತ್ತ ವಾರಕ್ಕೊಂದು ಸುತ್ತು ಕಾರ್ಯಕ್ರಮದ ೪ನೇ ನೇರಪ್ರಸಾರ ಸೆ.೨೭ರ ಶುಕ್ರವಾರ ಸಂಜೆ ನಡೆಯಲಿದ್ದು  ಪ್ರಮುಖವಾಗಿ ಧರ್ಮಸ್ಥಳದಲ್ಲಿ ೨೬ನೇ ವರ್ಷದ ಭಜನಾ ತರಬೇತಿ ಕಮ್ಮಟ * ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಬೆದರಿಸಿ ನಿಂದಿಸಿದ ಆರೋಪದ ಪ್ರಕರಣ-ಶಾಸಕ ಹರೀಶ್ ಪೂಂಜರನ್ನು ಪೊಲೀಸರು ಬಂಧಿಸಿಲ್ಲ, ಜಾಮೀನು ಪಡೆದಿಲ್ಲ * ಅ.೨೧: ವಿಧಾನ ಪರಿಷತ್ ಉಪ ಚುನಾವಣೆ ಹಲವರ ಹೆಸರು ರೇಸ್‌ನಲ್ಲಿ-ಅಚ್ಚರಿಯ ಆಯ್ಕೆ ಸಾಧ್ಯತೆ * ಸಾವಯವ ಮುಳ್ಳುಸೌತೆ ಬೆಳೆಯುವ ಬಂದಾರು ಬ್ರದರ್ಸ್ * ಡೇವಿಡ್ ಜೈಮಿ ಕೊಕ್ಕಡ ನೊಬೆಲ್ ವಿಶ್ವ ದಾಖಲೆ * ಅಧ್ಯಕ್ಷರೂ ಇಲ್ಲ.. ಪಂಚಾಯತ್ ಅಭಿವೃದ್ಧಿ ಅಧಿಕಾರಿಯೂ ಇಲ್ಲ..
ಗ್ರಾಮಸ್ಥರ ತಾಳ್ಮೆ ಪರೀಕ್ಷಿಸುತ್ತಿದೆ ಕಣಿಯೂರು ಗ್ರಾ.ಪಂ. * ಗಾಂಧಿ ಗ್ರಾಮ ಪುರಸ್ಕಾರ ಅಂತಿಮ ಪಟ್ಟಿಯಲ್ಲಿ ಕಾಶಿಪಟ್ಣ ಗ್ರಾ.ಪಂ. * ದೇಶದ ಪ್ರವಾಸೋದ್ಯಮ ಭೂಪಟದಲ್ಲಿ ಮಿಂಚಿದ ಕುತ್ಲೂರು * ಕಸ್ತೂರಿ ರಂಗನ್ ವರದಿ ಜಾರಿ ವಿಚಾರ – ಸಂಪುಟ ಉಪಸಮಿತಿ ಸಭೆಯಲ್ಲಿ ಚರ್ಚೆ * ವಿಧಾನಪರಿಷತ್ ಉಪಚುನಾವಣೆಯ ನೀತಿ ಸಂಹಿತೆ ಅವಧಿ ಮುಗಿದ ಬಳಿಕ ಗ್ರಾಮ ಪಂಚಾಯತ್‌ಗಳಲ್ಲಿ ಸಾರ್ವಜನಿಕ ಸಭೆ ನಡೆಸಲು ಸುದ್ದಿ ಬಳಗ ನಿರ್ಧಾರ-ಸಂಪಾದಕ ಸಂತೋಷ್ ಕುಮಾರ್ ಶಾಂತಿನಗರ ಬರಹ * ರಾಷ್ಟ್ರಕವಿ ಕುವೆಂಪು ಕಂಡಂತೆ ರಾಷ್ಟ್ರಪಿತ ಗಾಂಧೀಜಿ-ಬ್ರಿಟಿಷರ ವಿರುದ್ಧ ಉಪವಾಸ ಮಾಡಿದ ಗಾಂಧೀಜಿ- ಸುದ್ದಿ ಜನಾಂದೋಲನ ವೇದಿಕೆ ಮುಖ್ಯಸ್ಥ ಡಾ.ಯು.ಪಿ. ಶಿವಾನಂದರವರ ಲೇಖನ ಇತ್ಯಾದಿ ವಿಚಾರದ ಬಗ್ಗೆ ಚರ್ಚೆ ನಡೆಯಲಿದ್ದು ಸಾರ್ವಜನಿಕರು ೮೦೫೦೨೯೪೦೫೨ ನಂಬರ್‌ಗೆ ಕರೆ ಮಾಡಿ ಮಾತನಾಡಬಹುದು.

p>

LEAVE A REPLY

Please enter your comment!
Please enter your name here