ಮಡಂತ್ಯಾರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2023-24ನೇ ಸಾಲಿನ ಮಹಾಸಭೆಯು ಸೆ.24ರಂದು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಕೆ.ಅರವಿಂದ ಜೈನ್ ಇವರ ಅಧ್ಯಕ್ಷತೆಯಲ್ಲಿ ಜರಗಿತು.
ಸಂಘವು 2023-24ನೇ ಆರ್ಥಿಕ ವರ್ಷದಲ್ಲಿ 5215 ಸದಸ್ಯ ಬಲ ಹೊಂದಿದ್ದು ಪಾಲು ಬಂಡವಾಳವು 3.79 ಕೋಟಿ, 77.86 ಕೋಟಿ ಠೇವಣಿ, ರೂ 8.44 ಕೋಟಿ ನಿಧಿ ಹೊಂದಿದ್ದು 71.67 ಕೋಟಿ ಸಾಲ ಹೊರ ಬಾಕಿಯಿದೆ. ಶೇಕಡ 95% ರಷ್ಟು ಸಾಲ ವಸೂಲಾತಿ ಆಗಿದ್ದು, ಲೆಕ್ಕ ಪರಿಶೋಧನೆಯಲ್ಲಿ ‘ಎ’ ಶ್ರೇಣಿ ದೊರಕಿರುತ್ತದೆ. ಒಟ್ಟು 369ಕೋಟಿ ವ್ಯವಹಾರ ನಡೆಸಿ ರೂ. 1.74 ಕೋಟಿ ಲಾಭಗಳಿಸಿ ಶೇ. 16% ಡಿವಿಡೆಂಡ್ ಘೋಷಿಸಲಾಯಿತು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಧನಲಕ್ಷ್ಮೀ, ನಿರ್ದೇಶಕರಾದ ಕುಮಾರ ನಾಯ್ಕ, ಪದ್ಮನಾಭ ಸಾಲಿಯಾನ್, ಅಬ್ದುಲ್ ರಹಿಮಾನ್ ಪಡ್ಡು, ಎಚ್ ಧರ್ಣಪ್ಪ ಗೌಡ, ಕಿಶೋರ್ ಕುಮಾರ್ ಶೆಟ್ಟಿ, ರಮೇಶ್, ಜೋಯೆಲ್ ಮೆಂಡೋನ್ಸಾ, ತುಳಸಿ ಪೂಜಾರಿ, ಉಷಾಲತಾ,ಡಿ. ಸಿ. ಸಿ. ಬ್ಯಾಂಕ್ ಪ್ರತಿನಿಧಿ ಸಿರಾಜುದ್ದೀನ್ ಉಪಸ್ಥಿತರಿದ್ದರು.
2023-24ನೇ ಸಾಲಿನ ವರದಿಯನ್ನು ಮತ್ತು ಲೆಕ್ಕ ಪತ್ರಗಳನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೋಕಿಂ ಡಿಸೋಜ ಮಂಡಿಸಿದರು. ಲೆಕ್ಕ ಪರಿಶೋಧಕರ ನ್ಯೂನತೆಗಳನ್ನು ಓದಿ ಸಭೆಯ ಮುಂದಿಟ್ಟರು. ಪುಂಜಾಲಕಟ್ಟೆ ಶಾಖಾ ವ್ಯವಸ್ಥಾಪಕ ಸವಿನ್ ಜೈನ್ ಜಮಾ ಖರ್ಚಿನ ವಿವರ ನೀಡಿದರು.
ಸಿಬಂದಿ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಸಿಬ್ಬಂದಿಗಳಾದ ಗಣೇಶ್, ಸುಂದರ ನಾಯ್ಕ್, ಸವಿನ್ ಜೈನ್ , ದಿನೇಶ್ ಎಂ. ಕಿಶನ್ ಕುಮಾರ್, ಮೊಹಮ್ಮದ್ ಸರ್ವಾನ್, ಸುಭಾಶ್ಚಂದ್ರ,
ಪೂರ್ಣಿಮಾ, ಸುಪ್ರಿತಾ ಎಂ. ಶಶಿಕಲಾ, ಪ್ರಶಾಂತ್ ಸಹಕರಿಸಿದರು.