ಕಲ್ಮಂಜ: ಅಕ್ಷಯ ನಗರ ಗೆಳೆಯರ ಬಳಗ ನಿಡಿಗಲ್ ದಿ|ಮಹಾವೀರ್ ಜೈನ್ ಹುಣಿಪ್ಪಾಜೆ, ಇವರ ಸ್ಮರಣಾರ್ಥವಾಗಿ 25ನೇ ವರ್ಷದ ಶ್ರೀ ಗಣೇಶ್ ಚತುರ್ಥಿ ಪ್ರಯುಕ್ತ ಪುರುಷರಿಗೆ ಮಹಿಳೆಯರಿಗೆ ಮತ್ತು ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳು ಸೆ.22ರಂದು ಗೆಳೆಯರ ಬಳಗ ಅಕ್ಷಯನಗರ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಊರಿನ ಹಿರಿಯರು ಸುರೇಶ್ ಪೂಜಾರಿ ಬಳ್ಳಿದ್ದಡ್ಡ ನೆರವೇರಿಸಿದರು.ಸಭೆಯ ಅಧ್ಯಕ್ಷತೆಯನ್ನು ಕ್ರೀಡಾಕೂಟದ ಅಧ್ಯಕ್ಷ ಸುಹಾಸ್ ಕಂದೂರು ವಹಿಸಿದ್ದರು.ವೇದಿಕೆಯಲ್ಲಿ ಕಲ್ಮಂಜ ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ ಪೂರ್ಣಿಮ, ಭಾರತೀಯ ಭೂ ಸೇನೆ ನಿವೃತ್ತ ಸೈನಿಕ ತಿಮ್ಮಪ್ಪ ಇ.ಕೆ, ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಮಲ, ಉಪನ್ಯಾಸಕ ಸ್ಮಿತೇಶ್ ಎಸ್ ಬಾರ್ಯ ಉಪಸ್ಥಿತರಿದ್ದರು.
ಕ್ರೀಡಾಕೂಟ ಮುಗಿದ ಬಳಿಕ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಗೆಳೆಯರ ಬಳಗದ ಅಧ್ಯಕ್ಷ ವಿಲ್ಸನ್ ಮೋನಿಸ್ ವಹಿಸಿದ್ದರು.ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಸುವರ್ಣ ಸಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಸಂಪತ್ ಸುವರ್ಣ, ಉಜಿರೆ ಅಮೃತ್ ಟೆಕ್ಸ್ ಟೈಲ್ಸ್ ಮಾಲಕ ಪ್ರಶಾಂತ್ ಜೈನ್, ಕಲ್ಮಂಜ ಸುಷಾ ಕ್ಲಿನಿಕ್ ಡಾ.ಸ್ಮಿತಾ ಶಶಿಕಿರಣ್, ಉಜಿರೆ ರಮ್ಯ 1ಗ್ರಾಂ ಗೋಲ್ಡ್ ಮಾಲಕ ಪ್ರಸಾದ್, ಉದ್ಯಮಿ ಅಂಟೋನಿ ಟಿ.ಆರ್, ಉಜಿರೆ-ನಿಡಿಗಲ್ ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ಮುಸ್ತಫಾ, ಗೀತಾ ಅಂಬ್ರೋಜ್ ಫೆರ್ನಾಂಡಿಸ್, ಸುರ್ಯ ಹೋಟೆಲ್ ಉದ್ಯಮಿ ಯೋಗಿಶ್ ಪೂಜಾರಿ, ಉಪಸ್ಥಿತರಿದ್ದರು.
ಗಣ್ಯರ ಸಮ್ಮುಖದಲ್ಲಿ ಅಕ್ಷಯನಗರ ಅಂಗನವಾಡಿ ಸಹಾಯಕಿ ರುಕ್ಮಿಣಿ ಇವರನ್ನು ಸನ್ಮಾನಿಸಲಾಯಿತು.ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸ್ಥಾಪಕ ಅಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಅನೇಕ ಗಣ್ಯರು ಭಾಗವಹಿಸಿದ್ದರು.ಗೆಳೆಯರ ಬಳಗ ಇದರ ಸದಸ್ಯ ನೆಲ್ಸನ್ ಮೋನಿಸ್ ಕಾರ್ಯಕ್ರಮವನ್ನು ಸ್ವಾಗತಿಸಿ ನಿರೂಪಿಸಿ, ಸದಸ್ಯ ಸುಬ್ರಾಯ ವಂದಿಸಿದರು.