ಜೆಸಿಐ ಬೆಳ್ತಂಗಡಿಯಲ್ಲಿ ಶ್ರಾವಣ ತರಬೇತಿ ಸಪ್ತಾಹದ ಸಮರೋಪ ಕಾರ್ಯಕ್ರಮ

0

ಬೆಳ್ತಂಗಡಿ: ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಒಂದು ವಾರಗಳ ಕಾಲ ನಡೆದ ಶ್ರಾವಣ ತರಬೇತಿ ಸಪ್ತಾಹದ ಸಮಾರೋಪ ಸಮಾರಂಭ ಕಾರ್ಯಕ್ರಮ ಬಳಂಜದಲ್ಲಿ ಜರುಗಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ರಂಜಿತ್ ಎಚ್.ಡಿ ವಹಿಸಿಕೊಂಡು ಸ್ವಾಗತಿಸಿದರು.

ತರಬೇತಿ ಸಪ್ತಾಹದಲ್ಲಿ ತರಬೇತಿಯನ್ನು ನಡೆಸಿದ ವಲಯ ತರಬೇತುದಾರ ಶಂಕರರಾವ್ ಅವರನ್ನು ಗೌರವಿಸಲಾಯಿತು. ವಲಯ ತರಬೇತಿದಾರರು, ಶ್ರಾವಣ ತರಬೇತಿ ಸಪ್ತಾಹದ ಸಂಯೋಜಕಿ ಹೇಮಾವತಿ ಕೆ. ಇವರಿಗೆ ಕೃತಜ್ಞತೆ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಝೀ ಕನ್ನಡ ನಡೆಸುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನಲ್ಲಿ ಸ್ಪರ್ಧಿಯಾಗಿ ಆಯ್ಕೆಯಾಗಿರುವ ಘಟಕದ ಜೂನಿಯರ್ ಜೆಸಿ ಸದಸ್ಯ ಆಗಿರುವ ಜೆಜೆಸಿ ತ್ರಿಷಾರವರನ್ನು ಗೌರವಿಸಲಾಯಿತು. ಚಾನೆಲ್ ನಲ್ಲಿ ಉದ್ಯೋಗಿಯಾಗಿರುವ, ಸಮೀಕ್ಷಾ ಶಿರ್ಲಾಲ್ ಇವರು ಜೆಸಿ ಸಂಸ್ಥೆಗೆ ಹೊಸ ಸದಸ್ಯರಾಗಿ ಸೇರ್ಪಡೆಗೊಂಡರು. ವಲಯ ಉಪಾಧ್ಯಕ್ಷ ಶಂಕರ್ ರಾವ್ ರವರು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಇದೇ ಸಂದರ್ಭದಲ್ಲಿ ತೆಂಕಕಾರಂದೂರು ಗ್ರಾಮದ ರಮಾನಂದ ಪೂಜಾರಿ ಅವರ ಪುತ್ರಿ ಕೃತಿ ಹಾಗೂ ಜೆಸಿ ಸದಸ್ಯೆ ಮಧುರ ರಾಘವ್ ರವರ ಪುತ್ರಿ ಅಧಿತ್ರಿ ಯವರು ಜೆಜೆಸಿ ಸದಸ್ಯರಾಗಿ ಸೇರ್ಪಡೆಗೊಂಡರು.

ಕಾರ್ಯಕ್ರಮದಲ್ಲಿ ಘಟಕದ ಪೂರ್ವ ಅಧ್ಯಕ್ಷರುಗಳನ್ನು ಗೌರವಿಸಲಾಯಿತು.

ಜೆಸಿಐ ಮಡಂತ್ಯಾರ್ ನ ಅಧ್ಯಕ್ಷ ವಿಕೇಶ್ ಮಾನ್ಯ, ವಲಯದ ನಿರ್ದೇಶಕ ಅಶೋಕ್ ಕುಮಾರ್ ಮಡಾಂತ್ಯಾರು, ಬೆಳ್ತಂಗಡಿ ಘಟಕದ ಪೂರ್ವ ಅಧ್ಯಕ್ಷರುಗಳಾದ ಸುಭಾಷ್ ಚಂದ್ರ ಎಂ ಪಿ, ರವೀಂದ್ರ ಶೆಟ್ಟಿ ಬಳಂಜ, ಸಂತೋಷ್ ಕುಮಾರ್ ಕಾಪಿನಡ್ಕ, ವಸಂತ ಶೆಟ್ಟಿ ಶ್ರದ್ಧಾ, ಸಂತೋಷ್ ಪಿ.ಕೋಟ್ಯಾನ್, ಕಿರಣ್ ಕುಮಾರ್ ಶೆಟ್ಟಿ, ಪ್ರಶಾಂತ ಲಾಯಿಲ, ಪ್ರಸಾದ್ ಬಿ.ಎಸ್.ಉಜಿರೆ, ಜೆಸಿರೇಟ್ ಪೂರ್ವ ಅಧ್ಯಕ್ಷೆ ಉಮಾ ಆರ್. ರಾವ್, ಪವಿತ್ರ ಚಿದಾನಂದ, ಅಮೃತ ಎಸ್. ಕೋಟ್ಯಾನ್, ಆಶಾ ಪ್ರಶಾಂತ್, ಉಪಾಧ್ಯಕ್ಷರುಗಳಾದ ಸುಧೀರ್ ಕೆ ಎನ್, ಶೈಲೇಶ್, ಜೆಜೆಸಿ ಅಧ್ಯಕ್ಷರಾದ ಸಮನ್ವಿತ್ ಕುಮಾರ್, ಲೇಡಿ ಜೇಸಿ ಸಂಯೋಜಕಿ ಶ್ರುತಿ ರಂಜಿತ್, ಜೊತೆ ಕಾರ್ಯದರ್ಶಿ ಪ್ರಮೋದ್ ಕಕ್ಕಿಂಜೆ, ಪ್ರೀತಿ ರತಿಶ್, ಮಧುರ ರಾಘವ್, ರಕ್ಷಿತಾ ಶೆಟ್ಟಿ, ಜಿತೇಶ್, ರತ್ನಾಕರ್, ಲತೇಶ್ ಪೆರಾಜೆ, ರಕ್ಷಿತ್, ದೀಪಕ್ ಎಚ್ ಡಿ, ಜಗದೀಶ್, ಸರಿತಾ ಪ್ರವೀಣ್ ಉಪಸ್ಥಿತರಿದ್ದರು.

ವೇದಿಕೆ ಆಹ್ವಾನವನ್ನು ಪೂರ್ವ ಅಧ್ಯಕ್ಷ ಚಿದಾನಂದ ಇಡ್ಯಾ, ಜೆಸಿ ವಾಣಿಯನ್ನು ಜೆಜೆಸಿ ದೀಪ್ತಿ ಕುಲಾಲ್, ಕಾರ್ಯದರ್ಶಿ ಅನುದೀಪ್ ಜೈನ್ ವಂದಿಸಿದರು.

LEAVE A REPLY

Please enter your comment!
Please enter your name here