ಬೆದ್ರಬೆಟ್ಟು: ಅರ್ರಿಫಾಯ್ಯಾ ಮಸೀದಿಯಲ್ಲಿ ಈದ್ ಮಿಲಾದ್ ಆಚರಣೆ

0

ಬೆದ್ರಬೆಟ್ಟು: ಇಸ್ಲಾಂ ಧರ್ಮದ ಪ್ರವಾದಿ ಮುಹಮ್ಮದ್ ಪೈಗಂಬರ್ (ಸ.ಅ) ಅವರ ಜನ್ಮದಿನದ ಪ್ರಯುಕ್ತ ಈದ್ ಮಿಲಾದ್ ಆಚರಣೆಯ ರ‍್ಯಾಲಿ ಅರ್ರಿಫಾಯ್ಯಾ ಮಸೀದಿ ಬೆದ್ರಬೆಟ್ಟುವಿನಲ್ಲಿ ಸಂಭ್ರಮದಿಂದ ನಡೆಯಿತು.

ಮದ್ರಸಗಳ ಮಕ್ಕಳಿಂದ ಪ್ರವಾದಿ ಗುಣಗಾನದ ಹಾಡುಗಳು, ದಫ್‌ ನೊಂದಿಗೆ ಪ್ರವಾದಿ ಜೀವನದ ಸಂದೇಶ ನೀಡುವುದರ ಮೂಲಕ ಬೆದ್ರಬೆಟ್ಟುವಿನಿಂದ ಇತಿಹಾಸ ಪ್ರಸಿದ್ಧ ಕಾಜೂರು ದರ್ಗಾ ವಠಾರದಲ್ಲಿ ಸಾಮೂಹಿಕ ಪ್ರಾರ್ಥನೆ ಮೂಲಕ ಈ ಬಾರಿಯ ಬೃಹತ್ ಮೀಲಾದ್ ರ‍್ಯಾಲಿಯು ಸಾರ್ವಜನಿಕರ ಗಮನ ಸೆಳೆಯಿತು.

ರ‍್ಯಾಲಿಯಲ್ಲಿ ಮಕ್ಕಳಿಗೆ ಸಿಹಿ ತಿಂಡಿ ಹಂಚಿ, ಪಾನೀಯ ನೀಡಲಾಯಿತು. ಮೀಲಾದ್ ರ‍್ಯಾಲಿಯಲ್ಲಿ ಮಕ್ಕಳಲ್ಲದೆ ಹಿರಿಯರೂ ಪಾಲ್ಗೊಂಡು ಮಿಲಾದುನ್ನಬಿಯ ಸಡಗರ, ಸಂಭ್ರಮಕ್ಕೆ ಸಾಕ್ಷಿಯಾದರು.

ರ‍್ಯಾಲಿಗೂ ಮುನ್ನ ಮಸೀದಿ ವಠಾರದಲ್ಲಿ ರಿಫಾಯ್ಯಾ ಮಸೀದಿ ಅಧ್ಯಕ್ಷ ಸಲೀಂ ಅವರು ಧ್ವಜಾರೋಹಣ ಕಾರ್ಯಕ್ರಮವನ್ನು ಮಾಡಿದರು. ಮಸೀದಿ ಧರ್ಮ ಗುರುಗಳು ಮಿಲಾದ್ ಬಗ್ಗೆ ಪ್ರಾಸ್ತಾವಿಕ ಭಾಷಣ ಮಾಡಿ ಈದ್ ಮಿಲಾದ್ ಶುಭಾಶಯ ಕೋರಿದರು. ಕಾರ್ಯಕ್ರಮದಲ್ಲಿ ಆಡಳಿತ ಸಮಿತಿ, ಮಿಲಾದ್ ಸಮಿತಿ, ಯಂಗ್ ಮೆನ್ಸ್ ಸಮೀತಿ, SSF ಬೆದ್ರಬೆಟ್ಟು ಶಾಖೆ ಸಮಿತಿ, ಮದರಸ ಅಧ್ಯಾಪಕರು ಹಾಗೂ ಊರಿನ ಹಿರಿಯರು, ಜಮತಿನ ಸರ್ವ ಮುಸ್ಲಿಮರು ಮತ್ತು ಮದರಸ ವಿದ್ಯಾರ್ಥಿಗಳು ಸೇರಿದ್ದರು.

ಮದರಸ ವಿದ್ಯಾರ್ಥಿಗಳ ಸಾಂಸ್ಕೃತಿಕ ಸ್ಪರ್ಧೆಗಳು ಮಿಲಾದ್ ಮೌಲಿದ್ ಸಾಮೂಹಿಕ ಪ್ರಾರ್ಥನೆ ಮತ್ತು ಸಭಾ ಕಾರ್ಯಕ್ರಮ ಸೆ.21ರಂದು ನಡೆಯಲಿದೆ.

p>

LEAVE A REPLY

Please enter your comment!
Please enter your name here