ಉಜಿರೆ: ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಹಿಂದಿ ದಿನಾಚರಣೆ

0

ಉಜಿರೆ: “ಮಾತೃಭಾಷೆಯಲ್ಲಿ ಹಿಡಿತ ಹೊಂದಿದವರು ಇತರ ಭಾಷೆಗಳನ್ನು ಸರಾಗವಾಗಿ ಕಲಿಯಬಹುದು. ಭಾರತವು ಬಹುಭಾಷ ದೇಶವಾಗಿದ್ದು ಎಲ್ಲಾ ಭಾಷೆಗಳು ಇಲ್ಲಿ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ” ಎಂದು ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ರಾಜ್ಯ ಪಠ್ಯಕ್ರಮ) ಶಾಲೆಯ ಶಿಕ್ಷಕ ಸೋಮಶೇಖರ್ ಹೇಳಿದರು.

ಇವರು ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ)ಯಲ್ಲಿ ನಡೆದ ‘ಹಿಂದಿ ದಿವಸ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ನೃತ್ಯ, ಕಿರು ಪ್ರಹಸನ, ವೃಂದ ಗಾಯನ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಕಿ ಶಾಂಟಿ ಜಾರ್ಜ್ ವಹಿಸಿದ್ದರು.

ವಿದ್ಯಾರ್ಥಿನಿ ಇಶಿತ ಹಾಗೂ ಆನೆಟ್ ನಿರೂಪಿಸಿ, ವಿದ್ಯಾರ್ಥಿನಿ ಆಯಿಷಾ ಅಸ್ಮಿನ್ ಸ್ವಾಗತಿಸಿ, ವಿದ್ಯಾರ್ಥಿ ಅನಿಶ್ ವಂದಿಸಿದರು.

LEAVE A REPLY

Please enter your comment!
Please enter your name here