ಧರ್ಮಸ್ಥಳ ಚರ್ಚ್‌ನಲ್ಲಿ ಕನ್ಯಾ ಮರಿಯಮ್ಮನವವರ ಜನ್ಮ ದಿನಾಚರಣೆ

0

ಬೆಳ್ತಂಗಡಿ: ಧರ್ಮಸ್ಥಳ ಸೈಂಟ್ ಜೋಸೆಫ್ ಚರ್ಚ್‌ನಲ್ಲಿ ಕನ್ಯಾ ಮರಿಯಮ್ಮನವವರ ಜನ್ಮ ದಿನಾಚರಣೆ ಸಂಭ್ರಮದಿಂದ ನಡೆಯಿತು. ಧರ್ಮಗುರು ಫಾ.ರೋಕಿ ಮೇನಾಚೇರಿ ಹಾಗೂ ಸಹಾಯಕ ಧರ್ಮಗುರು ಫಾ.ಕ್ರಿಸ್ಟಿನ್ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಸಭಾ ಕಾರ್ಯಕ್ರಮದ‌ಲ್ಲಿ ಫಾ. ರೋಕಿ ಮೇನಾಚೇರಿ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಧರ್ಮಸ್ಥಳ ಚರ್ಚ್ ವ್ಯಾಪ್ತಿಯ ಏಳು ಮಂದಿಯನ್ನು ಸನ್ಮಾನಿಸಲಾಯಿತು. ಧರ್ಮಸ್ಥಳ ಚರ್ಚ್‌ನ ಸಂಡೆ ಸ್ಕೂಲ್ ಶಿಕ್ಷಕರಾಗಿ ಈ ಹಿಂದೆ ಸೇವೆ ಸಲ್ಲಿಸಿದವರು ಹಾಗೂ ಈಗಿನ ಶಿಕ್ಷಕರನ್ನು ಗೌರವಿಸಲಾಯಿತು.

ಸಹಾಯಕ ಧರ್ಮಗುರುಗಳಾದ ಫಾ.ಕ್ರಿಸ್ಟೀನ್, ಸಿ. ಡಾ.ರೆಶ್ಮಿ ಮರಿಯಾ, ಚರ್ಚ್ ಪಾಲನಾ ಮಂಡಳಿಯ ಸದಸ್ಯ ಮೌರೋಸ್ ಪಂದಮಾಕ್ಕಲ್, ಪಿ.ಟಿ.ಎ ಅಧ್ಯಕ್ಷ ಶಿಬಿ ಧರ್ಮಸ್ಥಳ, ಸಂಡೆ ಸ್ಕೂಲ್ ಮುಖ್ಯೋಪಾಧ್ಯಾಯ ರಾಜೇಶ್ ಪುನ್ನವಿಳ ಉಪಸ್ಥಿತರಿದ್ದರು.

ಮೇರಿ ಸ್ಮಿತಾ, ಜೋಮಿ ಮೇಟಯಿಲ್ ಹಾಗೂ ಜೋಸ್ ಮಳಿಯೆಕ್ಕಲ್ ನಿರೂಪಿಸಿದರು. ಸಿನಿ ಕ್ಸೇವಿಯರ್ ಸ್ವಾಗತಿಸಿದರು, ಶ್ರೇಯ ಪೈಕಾಟ್ ವಂದಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

LEAVE A REPLY

Please enter your comment!
Please enter your name here