ವೇಣೂರು: ಕುಸಿಯುವ ಭೀತಿಯಲ್ಲಿರುವ ವೇಣೂರು ಪ್ರೌಢ ಶಾಲೆಗೆ ಶಾಸಕರ ನಿಧಿಯಿಂದ ರೂ.1.26 ಕೋಟಿ ವೆಚ್ಚದಲ್ಲಿ ನೂತನ 8 ಕೊಠಡಿ ನಿರ್ಮಾಣಗೊಂಡಿದ್ದು ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿ ಇದ್ದುದರಿಂದ ಅಗತ್ಯವಾಗಿ 16 ಕೊಠಡಿಗಳ ಅವಶ್ಯಕತೆ ಇದ್ದು ಸೆ.9ರಂದು ಶಾಸಕ ಹರೀಶ್ ಪೂಂಜ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಅಗತ್ಯ ಕೊಠಡಿಗಳ ಅವಶ್ಯಕತೆ ಇದ್ದುದನ್ನು ಗಮನಿಸಿ ಶೀಘ್ರ ಇನ್ನೂ 4 ಕೊಠಡಿ ನಿರ್ಮಾಣಕ್ಕೆ ಭರವಸೆ ನೀಡಿ ಕಾಮಗಾರಿ ಪ್ರಾರಂಭ ಮಾಡಲು ತಿಳಿಸಿದರು.
ಹಳೆಯ ಕಟ್ಟಡ ಬೀಳುವ ಸ್ಥಿತಿಯಲ್ಲಿದ್ದು ಕೂಡಲೇ ಹೊಸ ಕಟ್ಟಡಕ್ಕೆ ಮಕ್ಕಳನ್ನು ಸ್ಥಳಾಂತರಿಸಲು ಹಾಗೂ ಹೊಸ ಕಟ್ಟಡ ಆಗುವವರೆಗೆ ಪದವಿ ಪೂರ್ವ ಕಾಲೇಜಿನ 2 ಕೊಠಡಿಯಲ್ಲಿ ವ್ಯವಸ್ಥೆ ಮಾಡಲು ಸೂಚಿಸಿದರು. ಪ್ರೌಢ ಶಾಲೆಯಲ್ಲಿ ಹೆತ್ತವರ, ದಾನಿಗಳ ಸಹಕಾರದಿಂದ ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಕ್ಕೆ ಹಳೆ ವಿದ್ಯಾರ್ಥಿ ಸಂಘ, ಹೆತ್ತವರು, ದಾನಿಗಳು ಸಹಕರಿಸಿದರು.
ಈ ಸಂದರ್ಭದಲ್ಲಿ ವೇಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಲ್ಲಿಕಾ ಹೆಗ್ಡೆ, ನಿಕಟ ಪೂರ್ವ ಅಧ್ಯಕ್ಷ ನೇಮಯ್ಯ ಕುಲಾಲ್, ಪಂಚಾಯತ್ ಸದಸ್ಯ ವೇಣೂರು ಸಹಕಾರ ಸಂಘದ ಅಧ್ಯಕ್ಷ ಸುಂದರ ಹೆಗ್ಡೆ, ತಾಲೂಕು ರೈತ ಮೋರ್ಚಾ ಅಧ್ಯಕ್ಷ ವಿಜಯ ಗೌಡ, ಕಟ್ಟಡ ಸಮಿತಿಯ ಸಂಚಾಲಕ ಪೋಷಕ ರಾಜೇಶ್ ಪೂಜಾರಿ ಮೂಡುಕೋಡಿ ಕಟ್ಟಡ ಸಮಿತಿ ಸದಸ್ಯ ಉದ್ಯಮಿ ಭಾಸ್ಕರ ಪೈ, ಸರಕಾರಿ ಪ.ಪೂ.ಕಾಲೇಜು ಪ್ರಾಂಶುಪಾಲ ಗಂಗಾಧರ, ಶಾಲಾ ಮುಖ್ಯ ಶಿಕ್ಷಕ ವೆಂಕಟೇಶ್ ತುಳುಪುಲೆ, ಶಿಕ್ಷಕರು ಹಾಜರಿದ್ದರು.