ಕೊಕ್ಕಡ: ಕೌಕ್ರಾಡಿ ಸಂತ ಜೋನರ ದೇವಾಲಯದಲ್ಲಿ ಮರಿಯಮ್ಮರವರ ಜನುಮ ದಿನ ಮತ್ತು ತೆನೆ ಹಬ್ಬ ಆಚರಣೆ

0

ಕೊಕ್ಕಡ: ಕೌಕ್ರಾಡಿ ಸಂತ ಜೋನರ ದೇವಾಲಯದಲ್ಲಿ ಮಾತೆ ಮರಿಯಮ್ಮರವರ ಜನುಮ ದಿನ ಆಚರಣೆ ಮತ್ತು ತೆನೆ ಹಬ್ಬ ವಿಜೃಂಭಣೆಯಿಂದ ನಡೆಯಿತು. ತೆನೆಗಳನ್ನು ಆಶೀರ್ವದಿಸುವ ಕಾರ್ಯವನ್ನು ವಂ.ಫಾ.ಅಶೋಕ್ ಡಿ’ಸೋಜರವರು ನಡೆಸಿಕೊಟ್ಟರು. ಭಕ್ತಾದಿಗಳು ಮಾತೆ ಮರಿಯಮ್ಮರಿಗೆ ಪ್ರಷ್ಪಾರ್ಪನೆ ಮಾಡಿದರು.ಇವರೊಂದಿಗೆ ವಂ.ಫಾ.ವಿನೀತ್ ವಿನ್ಸೆಂಟ್ ಪಿರೇರಾರವರು ಸಹಕಾರ ನೀಡಿದರು.

ಸಂಭ್ರಮದ ಮೆರವಣಿಗೆಯೊಂದಿಗೆ ದೇವಾಲಯಕ್ಕೆ ಆಗಮಿಸಿದ ಭಕ್ತರು ಬಲಿಪೂಜೆಯಲ್ಲಿ ಭಾಗವಹಿಸಿದರು. ಬಲಿಪೂಜೆಯ ಮುಂದಾಳುತ್ವ ವಹಿಸಿದ ಫಾ. ಅನಿಲ್ ಪ್ರಕಾಶ್ ಡಿಸಿಲ್ವಾರವರು ಪ್ರವಚನ ನೀಡಿದರು.ಸಹಯಾಜಕರಾಗಿ ಫಾ.ವಿನೀತ್ ವಿನ್ಸೆಂಟ್ ಪಿರೇರಾ ಮತ್ತು ಫಾ.ಅಶೋಕ್ ಡಿ’ಸೋಜರವರು ವಿಧಿವಿಧಾನಗಳನ್ನು ನಡೆಸಿಕೊಟ್ಟರು. ಈ ಹಿಂದೆ ನಡೆದ ನವದಿನದ ನೊವೇನಾದಲ್ಲಿ ಹೂಗಳನ್ನು ಅರ್ಪಿಸಿದ ಮಕ್ಕಳನ್ನು ಹಾಗೂ ಹಿರಿಯರನ್ನು, ಎಲ್ಲಾ ದಾನಿಗಳನ್ನು, ಸಿಹಿ ತಿಂಡಿ ಮತ್ತು ಕಬ್ಬು ನೀಡಿದ ದಾನಿಗಳನ್ನು ಈ ಸಂದರ್ಭದಲ್ಲಿ ಸ್ಮರಿಸಿ ಅಭಿನಂದನೆ ಸಲ್ಲಿಸಿದರು.

ಬಲಿಪೂಜೆಯ ನಂತರ ದೇವಾಲಯದ ನೂತನ ಜಾಲತಾಣವಾದ www.kokkadachurch.in ಅನ್ನು ಉದ್ಘಾಟಿಸಿ ಮಾತನಾಡಿದ ಧರ್ಮಗುರುಗಳು ಜಾಲತಾಣ ಸೃಷ್ಟಿಸಿದ ಸಿಲ್ವೆಸ್ಟರ್ ಡಿಸೋಜರಿಗೆ ಅಭಿನಂದಿಸಿ, ನೆನಪಿನ ಕಾಣಿಕೆ ನೀಡಿದರು.ದೇವಾಲಯದ ಪಾಲನಾ ಪರಿಷತ್ ಸದಸ್ಯರಿಗೆ ಗೌರವ ಪೂರ್ವಕವಾಗಿ ಧರ್ಮಗುರುಗಳು ತೆನೆಗಳನ್ನು ವಿತರಿಸಿದರು.

ಭಕ್ತಾದಿಗಳಿಗೆ ಆರು ವಾಳ್ಯಗಳ ಗುರಿಕಾರರು ತೆನೆಯನ್ನು ಹಂಚಿದರು. ದೇವಾಲಯದ ಆವರಣದಲ್ಲಿ ವೈಸಿಎಸ್ ಮತ್ತು ಐಸಿವೈಎಂ ಸದಸ್ಯರು ಮುಂಚಿತವಾಗಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ಐಸಿವೈಎಂ ಸದಸ್ಯರು ಎಲ್ಲರಿಗೂ ಕಬ್ಬು ವಿತರಿಸಿದರು. ಯುವಕರ ಬ್ರಾಸ್ ಬ್ಯಾಂಡ್ ವಾದ್ಯದೊಂದಿಗೆ ಕಾರ್ಯಕ್ರಮವು ಕೊನೆಗೊಂಡಿತು.

LEAVE A REPLY

Please enter your comment!
Please enter your name here