ಪುದುವೆಟ್ಟಿನ ಮಿಯ್ಯಾರು ಬಳಿ ಚರಂಡಿಗೆ ಬಿದ್ದ ಆಟೋ ರಿಕ್ಷಾ

0

ಬೆಳ್ತಂಗಡಿ: ಪುದುವೆಟ್ಟು ಗ್ರಾಮದ ಮಿಯ್ಯಾರು ಮಠ ಶಾಲೆಯ ಬಳಿ ಸೆ.8ರಂದು ಸಂಜೆ ಆಟೋ ರಿಕ್ಷಾ ಮಗುಚಿ ಬಿದ್ದಿದ್ದು, ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಧರ್ಮಸ್ಥಳದಲ್ಲಿ ಬಾಡಿಗೆ ಮಾಡುವ ರಿಕ್ಷಾ ಮಿಯ್ಯಾರಿನತ್ತ ತೆರಳುತ್ತಿರುವಾಗ ಮಠ ಶಾಲೆಯ ಬಳಿ ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ಚರಂಡಿಗೆ ಬಿದ್ದಿದೆ. ರಿಕ್ಷಾದಲ್ಲಿ ಪ್ರಯಾಣಿಕರು ಇರಲಿಲ್ಲ. ಬಾಯಿತ್ಯಾರು ನಿವಾಸಿ, ರಿಕ್ಷಾ ಚಾಲಕ ಕಿಶೋರ್ ಅಪಾಯದಿಂದ ಪಾರಾಗಿದ್ದಾರೆ. ರಿಕ್ಷಾದ ಮುಂಭಾಗಕ್ಕೆ ಹಾನಿಯಾಗಿದೆ.

LEAVE A REPLY

Please enter your comment!
Please enter your name here