ಕೊಕ್ಕಡದಲ್ಲಿ ಸುಸಜ್ಜಿತವಾದ ಹವಾನಿಯಂತ್ರಿತ ಸಭಾಭವನ, ಹೋಟೆಲ್, ಅಂಗಡಿ ಕೋಣೆಗಳು, ವಿಶಾಲವಾದ ಪಾರ್ಕಿಂಗ್‌ ವ್ಯವಸ್ಥೆ ಒಳಗೊಂಡ ಸ್ವಾಮಿ ಪ್ರಸಾದ್ ಪ್ಯಾರಡೈಸ್ ವಸತಿ ಗೃಹ ಶುಭಾರಂಭ

0

ಕೊಕ್ಕಡ: ಕೊಕ್ಕಡದಲ್ಲಿ ನೂತನವಾಗಿ ನಿರ್ಮಿಸಿರುವ ಸ್ವಾಮಿ ಪ್ರಸಾದ್ ಪ್ಯಾರಡೈಸ್ ವಸತಿ ಗೃಹವು ಸೆ.6ರಂದು ಶುಭಾರಂಭಗೊಂಡಿತು.

ಸಂಸ್ಥೆಯ ಮಾಲಕರ ತಾಯಿ-ತಂದೆಯಾದ ಲೀಲಾವತಿ ಮತ್ತು ಮಾಯಿಲಪ್ಪ ಗೌಡರವರು ಉದ್ಘಾಟಿಸಿ ಶುಭಾಹಾರೈಸಿದರು.

ಈ ಸಂದರ್ಭದಲ್ಲಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ, ಸೌತಡ್ಕ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಸದಸ್ಯ ವಿಶ್ವನಾಥ ಶೆಟ್ಟಿ, ಜಾಜೀವಿ ಮತ್ತು ದುಗ್ಗಪ್ಪ ಗೌಡ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದು ಶುಭಹಾರೈಸಿದರು.

ಸಂಸ್ಥೆಯ ಮಾಲಕರಾದ ಶೋಭಾ ಮತ್ತು ಕೆ.ಎಂ. ಗಿರೀಶ್ ಕುಮಾರ್, ಮಾಲಕರ ಮಕ್ಕಳಾದ ಆದರ್ಶ ಜಿ ಮತ್ತು ಅನುಪ್ ಜಿ ಬಂದಂತಹ ಅತಿಥಿ ಗಣ್ಯರನ್ನು ಸ್ವಾಗತಿಸಿದರು.

ವಸತಿ ಗೃಹವು ಸುಸಜ್ಜಿತ 4 ಅಂತಸ್ತಿನ ಕಟ್ಟಡದಲ್ಲಿ ಹವಾನಿಯಂತ್ರಿತ ಸಭಾಭವನ, ಹೋಟೆಲ್, ಅಂಗಡಿ ಕೋಣೆಗಳು, ಸುಂದರ ಬಾಲ್ಕನಿ ಒಳಗೊಂಡ ವಿಸ್ತಾರ ಕೊಠಡಿಗಳು, ವಿಶಾಲವಾದ ಪಾರ್ಕಿಂಗ್‌ ವ್ಯವಸ್ಥೆ ಇರಲಿದೆ.

LEAVE A REPLY

Please enter your comment!
Please enter your name here