ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ- ನಿವೃತ್ತ ಶಿಕ್ಷಕರಿಗೆ ಗೌರವಾರ್ಪಣೆ

0

ಬಾರ್ಯ: ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ವಠಾರ ಪಂಚಾಯತು ಸಭಾಭವನದಲ್ಲಿ ಸೆ.5ರಂದು ನಡೆಯಿತು.

ಸಂಘದ ಅಧ್ಯಕ್ಷ ಪ್ರವೀಣ್ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ಮಹಾಸಭೆ ಎಂದರೆ ಹಬ್ಬ. ವರ್ಷದ ನಿರಂತರ ಹಾದಿಯಲ್ಲಿ ಗ್ರಾಹಕರಿಗೆ ಸ್ಪಂದನ ನೀಡುತ್ತಿದೆ. ಸಲಹೆ ಸೂಚನೆಗಳನ್ನು ಸಂಘದ ಏಳಿಗೆಗೆ ಪುಷ್ಠಿ ನೀಡಿದ್ದಂತೆ ಆಗುತ್ತದೆ. ಸದಸ್ಯರಿಗೆ ಶೇ.11 ಡಿವಿಡೆಂಡ್ ಘೋಷಿಸಿದರು.

ಗೌರವಾರ್ಪಣೆ: ಶಿಕ್ಷಕರ ದಿನಾಚರಣೆ ಪ್ರಯುಕ್ತ ನಿವೃತ್ತ ಶಿಕ್ಷಕರಾದ ಅನಂತ ರಾಜ್ ಶೆಟ್ರು, ಫಿಲೋಮಿನಾ ಬ್ರಾಗ್ಸ್ , ಜಯಾನಂದ ರೈ ಎನ್., ಕೃಷ್ಣಪ್ಪ ಗೌಡ ಎ., ಅಣ್ಣು ಪೂಜಾರಿ ಹಾಗೂ ಇಬ್ರಾಹಿಂ ಹಾಜಿ ರವರನ್ನು ಗೌರವಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ವಸಂತ ಪೂಜಾರಿ, ರೋಹಿನಾಥ್ ಬಿ.ಸಾಲಿಯಾನ್ ಮತ್ತು ಬೊಮ್ಮಣ್ಣ ಗೌಡ ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಗಳಿಸಿದ ವಿದ್ಯಾರ್ಥಿಗಳಾದ ಕೃತಿಕಾ, ಮೋಕ್ಷ, ಅಮಿತ್ ಕಲ್ವಿನ್ ಬ್ಲಾಗ್ಸ್, ಚಂದನ, ರೋಹನ್ ಹಾಗೂ ಅಮೃತ್ ರವರಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿ ಇಬ್ರಾಹಿಂ ಹಾಜಿ ದೇವನು ಒಬ್ಬನೆ ಸಮಾಜದಲ್ಲಿ ನಾವೆಲ್ಲರೂ ಜಾತಿ ಭೇದ ಭಾವ ಇಲ್ಲದೆ ಬಾಳಬೇಕು. ಮಾನವತ ಧರ್ಮವನ್ನು ಪ್ರತಿಪಾದಿಸಿ ನಡೆಯಬೇಕು ಎಂದು ಹೇಳಿದರು.

ನಿವೃತ್ತ ಶಿಕ್ಷಕಿ ಫಿಲೋಮಿನಾ ಬ್ರಾಗ್ಸ್ ಮಾತನಾಡಿ ಬಾರ್ಯ ಶಾಲೆ ನನ್ನ ಬದುಕಿಗೆ ಪುಷ್ಠಿ ನೀಡಿದ ಶಾಲೆ. ನಾನು ಕಲಿಸಿದ ವಿದ್ಯಾರ್ಥಿ ಸಂಘದಲ್ಲಿ ಉನ್ನತ ಸ್ಥಾನದಲ್ಲಿರುವುದು ಗುರುವಾದ ನನಗೆ ಹೆಮ್ಮೆನಿಸುತ್ತಿದೆ ಎಂದು ಹೇಳಿದರು.

ನಿದೇರ್ಶಕರಾದ ಪ್ರಸನ್ನ ಯುನ್., ಪಾರ್ಶ್ವನಾಥ ಜೈನ್ ಕಲ್ಲಾಜೆ, ಶೇಸಪ್ಪ ಸಾಲಿಯಾನ್, ಅಶ್ರಫ್ ಪೊಸೆಕ್ಕೆಲ್ , ಲಿಡಿಯಾ ಜೆರೋಮ್ ಬ್ಲಾಗ್ಸ್, ಸವಿತಾ ವೆಂಕಟೇಶ್ ಪೂಜಾರಿ, ಪ್ರತಾಪ್ ಮೂರುಗೋಳಿ, ಮೋಹನ್ ಗೌಡ, ಸುರೇಶ್, ಚಂದ್ರಶೇಖರ , ಅರುಣ್ ಬಂಗೇರ ಹಾಗೂ ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಸಿರಾಜುದ್ದೀನ್ ಉಪಸ್ಥಿತರಿದ್ದರು. ಬಾರ್ಯ ಗ್ರಾಮ ಪಂಚಾಯತ್ ಅಧ್ಯಕ್ಷ ಪಿ.ಕೆ.ಉಸ್ಮಾನ್, ಸದಸ್ಯರಾದ ಉಷಾ ಶರತ್, ಅನುರಾಗ್, ಫೈಜಾಲ್, ಪ್ರಮುಖರಾದ ಪ್ರಶಾಂತ್ ಪೈ, ಜಯರಾಜ್ ಹೆಗ್ಡೆ ಸಹಿತ ಮತ್ತಿತರರು ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸತೀಶ್ ಗೌಡ ಟಿ. ವರದಿ ವಾಚಿಸಿದರು. ಉಪಾಧ್ಯಕ್ಷ ಶಿವಾರಾಮ ಕೆಳಗಿನಂಗಡಿ ಸ್ವಾಗತಿಸಿದರು. ನಿರ್ದೇಶಕ ರಾಜೇಶ್ ರೈ ಹೆನ್ನಡ್ಕ ವಂದಿಸಿದರು.

ಸಿಬ್ಬಂದಿಗಳಾದ ಶಶಿಧರ್ ಅಡಪ, ರೋಹಿಣಿ ಜಿ., ನವೀನ್ ಕುಮಾರ್ ಎಂ., ರತ್ನಾವತಿ, ವೆಂಕಪ್ಪ ಎ., ಪ್ರವೀಣ್ ಬಿ., ಧನುಷ್, ಅನುಷಾ ಹಾಗೂ ರಕ್ಷಿತ್ ಸಹಕರಿಸಿದರು.

LEAVE A REPLY

Please enter your comment!
Please enter your name here