ಉಜಿರೆ: ಅನುಗ್ರಹ ಶಾಲೆಯಲ್ಲಿ ಪ್ರೀ ಕೆ.ಜಿ, ಎಲ್.ಕೆ.ಜಿ, ಯು.ಕೆ.ಜಿ ಹಾಗೂ ಒಂದನೇ ತರಗತಿಯ ಪುಟಾಣಿಗಳಿಗೆ ‘ಕಲರ‍್ಸ್ ಡೇ( ಬಣ್ಣಗಳ ದಿನ) ಯನ್ನು ವಿನೂತನ ರೀತಿಯಲ್ಲಿ ವೈಭವದಿಂದ ಆಚರಿಸಲಾಯಿತು.
ಶಾಲೆಯ ಹೆಮ್ಮಯ ಬ್ಯಾಂಡ್ ವಾದನದೊಂದಿಗೆ ಪುಟಾಣಿಗಳನ್ನು ಅವರ ಹೆತ್ತವರೊಂದಿಗೆ ಅನುಗ್ರಹ ಶಾಲಾ ಮಹಾದ್ವಾರದಿಂದ ಸಭಾಭವನಕ್ಕೆ ಶಿಸ್ತಿನಿಂದ ಕರೆತರಲಾಯಿತು.ಪುಟಾಣಿ ಮಕ್ಕಳ ಪ್ರಾರ್ಥನಾ ನೃತ್ಯದೊಂದಿಗೆ ಸಭಾಕಾರ್ಯವನ್ನು ಪ್ರಾರಂಭಿಸಲಾಯಿತು. ವಿದ್ಯಾರ್ಥಿಗಳು ಗಣ್ಯರನ್ನು ಸ್ವಾಗತಿಸಿದರು. ವಿಭಿನ್ನ ಶೈಲಿಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾದ ಆರತಿ ಹರೀಶ್ ಪೈ, ಮಾಲಕರು ಸಂಧ್ಯಾ ಟ್ರೇಡರ‍್ಸ್ ಉಜಿರೆ ಇವರು ತಮ್ಮ ಭಾಷಣದಲ್ಲಿ ಬಣ್ಣಗಳ ಮಹತ್ವವನ್ನು ತಿಳಿಸಿ, ಮಕ್ಕಳನ್ನು ಪ್ರೀತಿಯಿಂದ ಬೆಳೆಸಬೇಕು ಎಂದು ತಿಳಿಸಿದರು. ನಂತರ ಶಾಲಾ ಸಂಚಾಲಕರಾದ ವಂದನೀಯ ಫಾ|ಅಬೆಲ್ ಲೋಬೊ ಅವರು ಕಲರ‍್ಸ್ ಡೇ ಯ ಮಹತ್ವವನ್ನು ತಿಳಿಸುತ್ತಾ ಮಕ್ಕಳ ಪ್ರಯತ್ನ ಸಂತಸ ವ್ಯಕ್ತಪಡಿಸಿ, ಶುಭ ಹಾರೈಸಿದರು. ವೇದಿಕೆಯಲ್ಲಿ ಶಾಲೆಯ ಪ್ರಾಂಶುಪಾಲರಾದ ವಂದನೀಯ ಫಾ|ವಿಜಯ್ ಲೋಬೊ, ಪಾಲನಾ ಮಂಡಳಿಯ ಉಪಾಧ್ಯಕ್ಷ ಅಂಟನಿ ಫೆರ್ನಾಂಡೀಸ್, ಸದಸ್ಯೆ ಅನಿತಾ ಮೋನಿಸ್, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಉಮೇಶ್ ಶೆಟ್ಟಿ ಹಾಗೂ ಶಿಕ್ಷಕಿ ಗ್ರೇಸಿ ಸಲ್ಡಾನ್ಹಾ ಉಪಸ್ಥಿತರಿದ್ದರು. ಕುಮಾರಿ ಮಿಶಲ್ ಪಿಂಟೋ ಕಾರ್ಯಕ್ರಮ ನಿರೂಪಿಸಿದಳು.
ಮಕ್ಕಳಿಂದ ನಡೆದ ವೈವಿಧ್ಯಮಯ ಬಣ್ಣಗಳ ವಸ್ತ್ರಾಲಂಕಾರದಿಂದ ಕೂಡಿದ ನೃತ್ಯವು ಎಲ್ಲರ ಮನರಂಜಿಸಿತು. ಈ ಆಕರ್ಷಕ ಕಾರ‍್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಸಿಹಿತಿಂಡಿಯನ್ನು ಹಂಚಲಾಯಿತು.