ಕೊಕ್ಕಡ: ಕೊಕ್ಕಡ ಗ್ರಾಮ ಪಂಚಾಯತ್ 2024-25ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯು ಇಲಾಖಾಧಿಕಾರಿಗಳು ಗೈರಾದ ಕಾರಣ ಕೊಕ್ಕಡ ಗ್ರಾಮಸಭೆ ರದ್ದುಗೊಂಡಿದೆ.
ಕೊಕ್ಕಡದ ರಥಬೀದಿ, ನೆಲ್ಯಾಡಿ ಪುತ್ಯೆ, ಕೊಕ್ಕಡ, ಪಟ್ಟೂರು-ಪಟ್ರಮೆ ರಸ್ತೆಯು ಜಿಲ್ಲಾ ಪಂಚಾಯತ್ ಗೆ ಸಂಬಂಧ ಪಟ್ಟಿದ್ದು. ರಸ್ತೆಯ ಸಮಸ್ಯೆಗಳ ಬಗ್ಗೆ ಹಲವು ಸಮಯಗಳಿಂದ ಗ್ರಾಮ ಮಟ್ಟದ ಅಧಿಕಾರಿಗಳಲ್ಲಿ ಹೇಳಿ ಯಾವುದೇ ಪ್ರಯೋಜನವಾಗಿಲ್ಲ. ತಾಲೂಕು ಮಟ್ಟದ ಅಧಿಕಾರಿಗಳು ಬರಬೇಕು ಹಾಗೂ ಗ್ರಾಮ ಸಭೆಗೆ ಪಿ.ಡಬ್ಲ್ಯೂಡಿ ಅಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳು ಗ್ರಾಮ ಸಭೆಯಲ್ಲಿ ಭಾಗವಹಿಸದೆ ಇರುವುದರಿಂದ ಗ್ರಾಮ ಸಭೆಯನ್ನು ನಡೆಸುವುದಕ್ಕೆ ಬಿಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದರು.
ಗ್ರಾಮ ಸಭೆಗೆ ಇಲಾಖೆ ಅಧಿಕಾರಿಗಳು ಬರದಿದ್ದರೆ ಗ್ರಾಮ ಸಭೆ ಯಾರಿಗೆ, ಗ್ರಾಮದ ಸಮಸ್ಯೆಯನ್ನು ಯಾರ ಹತ್ತಿರ ಹೇಳಬೇಕು ಎಂದು ಶ್ರೀಧರ್ ಹೇಳಿದರು.ಈ ಬಗ್ಗೆ ಗ್ರಾಮ ಪಂಚಾಯತ್ ಸದಸ್ಯ ಯೋಗೀಶ್ ಅಳಂಬಿಲ ಮಾತನಾಡಿ ಮುಂದಿನ ದಿನಗಳಲ್ಲಿ ಸಂಬಂಧ ಪಟ್ಟ ಎಲ್ಲಾ ಅಧಿಕಾರಿಗಳನ್ನು ಕರಿಸಿ ಸಭೆಯನ್ನು ನಡೆಸುತ್ತೇವೆ ಎಂದು ಅಧ್ಯಕ್ಷರ ಮೇರೆಗೆ ಗ್ರಾಮ ಸಭೆಯನ್ನು ಮುಂದೂಡಿದರು.ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ಗ್ರಾಮ ಪಂಚಾಯತ್ ಸದಸ್ಯ ಯೋಗೀಶ್ ಅಳಂಬಿಲ ಹೇಳಿದರು.
ಈ ಸಂದರ್ಭದಲ್ಲಿ ಮಾರ್ಗದರ್ಶಕ ಸಹಾಯಕ ಕೃಷಿ ನಿರ್ದೇಶಕ ಅಧಿಕಾರಿ ರಂಜಿತ್ ಕುಮಾರ್, ಗ್ರಾಮ ಪಂಚಾಯತ್ ಅಧ್ಯಕ್ಷೆ ಬೇಬಿ, ಉಪಾಧ್ಯಕ್ಷ ಪ್ರಭಾಕರ್ ಗೌಡ, ಸದಸ್ಯರಾದ ಪವಿತ್ರಾ.ಕೆ, ಯೋಗೀಶ್ ಆಲಂಬಿಲ, ವಿಶ್ವನಾಥ ಮಲೆಕುಡಿಯ, ಪುರುಷೋತ್ತಮ ಗೌಡ, ಜಗದೀಶ್ ಪೂಜಾರಿ, ಪ್ರಮೀಳಾ.ಜಿ, ಆಶಾಕಾರ್ಯಕರ್ತೆಯರು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೀಪಕ್ ರಾಜ್, ಪಂಚಾಯತ್ ಸಿಬ್ಬಂದಿಗಳು
ಉಪಸ್ಥಿತರಿದ್ದರು.