ಬಳಂಜ: ಮೂಡುಬಿದ್ರೆಯ ಮಂಗಳೂರು ತಾಂತ್ರಿಕ ಮತ್ತು ಇಂಜಿನಿಯರಿಂಗ್ ಕಾಲೇಜ್ (MITE) ವಿದ್ಯಾರ್ಥಿಗಳಿಂದ ಪ್ರಾಜೆಕ್ಟ್ ನ ವಿನ್ಯಾಸದ ಬಗ್ಗೆ ಎರಡು ದಿನದ ಕಾರ್ಯಾಗಾರ ಆ. 28, 29ರಂದು ಬಳಂಜ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಸುಲೋಚನ ಉದ್ಘಾಟಿಸಿದರು. ಮೈಟ್ ಕಾಲೇಜಿನ ಆಡಳಿತ ವರ್ಗ, ಅಧ್ಯಾಪಕರಿಗೆ ಬಳಂಜ ಶಾಲೆಯನ್ನು ಎರಡು ದಿವಸದ ಕಾರ್ಯಗಾರಕ್ಕೆ ಪರಿಗಣಿಸಿದ್ದಕ್ಕಾಗಿ ಧನ್ಯವಾದಗಳು ಸಲ್ಲಿಸಿದರು. ಮಕ್ಕಳಿಗೆ ಇದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಕೋರಿಕೊಂಡರು.
ವೇದಿಕೆಯಲ್ಲಿ ಸರಕಾರಿ ಪ್ರಾಥಮಿಕ ಶಾಲೆ ಬಳೆಂಜದ ನೂತನ ಮುಖ್ಯೋಪಾಧ್ಯಾಯ ರಂಗಸ್ವಾಮಿ ಉಪಸ್ಥಿತರಿದ್ದರು. ಮೈಟ್ ಕಾಲೇಜಿನ ಉಪನ್ಯಾಸಕ ರಂಜಿತ್ ಎಚ್. ಡಿ.ಬಳಂಜ ಪ್ರಾಸ್ತಾವಿಕವಾಗಿ ಮಾತನಾಡಿ ಎರಡು ದಿನ ನಡೆಯುವ ಕಾರ್ಯಗಾರದ ಬಗ್ಗೆ ವಿವರಣೆಯನ್ನು ನೀಡಿದರು.
ಮೈಟ್ ಕಾಲೇಜಿನ ವಿದ್ಯಾರ್ಥಿಗಳಾದ ಪುನೀತ್, ನಿಶಾಂತ್, ತನುಶ್ರೀ, ದೀಪಕ್, ವೀಕ್ಷಿತಾ, ಅಭಿಜ್ಞಾ ಏನ್, ಫಿಯೋನಾ ಲವಿಶ, ಕೆ.ವೈಭವ್, ಸುಹಾಸ್ ಮತ್ತು ಅಬ್ದುಲ್ ಖಾದರ್ ಅಫೀಫ್ ಭಾಗವಹಿಸಿದ್ದರು.ಬಳಂಜ ಪ್ರೌಢ ಶಾಲೆ ಮತ್ತು ಪ್ರಾಥಮಿಕ ಶಾಲೆಯ ಆಧ್ಯಾಪಕರುಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಈ ಕಾರ್ಯಗಾರವು ತಾಲೂಕಿನ ಸರಕಾರಿ ಪ್ರೌಢ ಶಾಲೆಗಳಾದ ಗುರುವಾಯನಕೆರೆ, ಕಕ್ಕಿಂಜೆ, ಕಾಶಿಪಟ್ಣದಲ್ಲಿ ಕೂಡ ನಡೆಯಿತು.