ಗುರುವಾಯನಕೆರೆ: ‘ನಮ್ಮ ಮನೆ ಹವ್ಯಕ ಭವನ’ದಲ್ಲಿ 48 ದಿನಗಳ ಉಚಿತ ಯೋಗ ಶಿಕ್ಷಣ ತರಗತಿ ಶಿಬಿರದ ಉದ್ಘಾಟನೆ

0

ಗುರುವಾಯನಕೆರೆ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ವಲಯ ದ.ಕ. ಜಿಲ್ಲೆ ಇವರ ವತಿಯಿಂದ ಗುರುವಾಯನಕೆರೆ “ನಮ್ಮ ಮನೆ ಹವ್ಯಕ ಭವನ”ದಲ್ಲಿ 48 ದಿನಗಳ ಉಚಿತ ಯೋಗ ಶಿಕ್ಷಣ ತರಗತಿ ಶಿಬಿರವು ಆ.25ರಂದು ಉದ್ಘಾಟನೆಗೊಂಡಿತು.

ನಮ್ಮ ಮನೆ ಹವ್ಯಕ ಭವನದ ಅಧ್ಯಕ್ಷ ಕೃಷ್ಣ ಭಟ್ ರವರು ದೀಪ ಬೆಳಗಿಸುವುದರೊದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ಶಾಖೆಯ ಮುಖ್ಯ ಶಿಕ್ಷಕ ಡಾ.ಗೋವಿಂದ ಪ್ರಸಾದ್ ಕಜೆ ಇವರು ಅಧ್ಯಕ್ಷತೆ ವಹಿಸಿ ಯೋಗದ ಮಹತ್ವ ತಿಳಿಸುವುದರೊಂದಿಗೆ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಪುತ್ತೂರು ತಾಲ್ಲೂಕು ಶಾಖೆಯ ಮುಖ್ಯ ಶಿಕ್ಷಕ ಕೃಷ್ಣಾನಂದರವರು ಪ್ರಾಸ್ತಾವಿಕವಾಗಿ ಮಾತನಾಡಿ ಎಸ್.ಪಿ.ವೈ.ಎಸ್.ಎಸ್. ಸಮಿತಿಯ ಪರಿಚಯ ಹಾಗು ಧ್ಯೇಯೋದ್ದೇಶಗಳನ್ನು ತಿಳಿಸಿದರು. ಸುಮಾರು 100 ಮಂದಿ ಯೋಗಾಸಕ್ತ ಬಂಧುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಅಶ್ವಿನಿ ಪ್ರಾರ್ಥಿಸಿ, ಆಶಾ ಸ್ವಾಗತಿಸಿ, ಪ್ರಜ್ಞಾ ವಂದಿಸಿದರು. ಪ್ರೇಮಲತಾ ಗಣೇಶ್ ಕಾರ್ಯಕ್ರಮ ನಿರೂಪಿಸಿದರು.ಬೆಳ್ತಂಗಡಿ ತಾಲೂಕಿನಲ್ಲಿ ಪ್ರಪ್ರಥಮ ಬಾರಿಗೆ ಎಸ್.ಪಿ.ವೈ.ಎಸ್.ಎಸ್. ವತಿಯಿಂದ ಸಂಸ್ಕಾರ, ಸಂಘಟನೆ, ಸೇವೆ ಎಂಬ ಧ್ಯೇಯೋದ್ದೇಶದೊಂದಿಗೆ ನಡೆಯುವ ಈ ಯೋಗ ತರಗತಿ ಪ್ರಾತಃಕಾಲ 5ರಿಂದ 6.15ರವರೆಗೆ ಈ ಯೋಗ ಶಿಕ್ಷಣ ತರಗತಿ ನಡೆಯಲಿದೆ.

LEAVE A REPLY

Please enter your comment!
Please enter your name here