ವಲಯ ಮಟ್ಟದ ಬಾಲಕರ ಕಬಡ್ಡಿ ಪಂದ್ಯಾಟದಲ್ಲಿ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ

0

ಬೆಳ್ತಂಗಡಿ: ಕೊಯ್ಯೂರಿನ ದ.ಕ.ಜಿ.ಪ್ರಾಥಮಿಕ ಶಾಲೆಯಲ್ಲಿ ಆಗಸ್ಟ್ 24ರಂದು ನಡೆದ ಬಂಗಾಡಿ ವಲಯ ಮಟ್ಟದ ಬಾಲಕರ ಕಬಡ್ಡಿ ಪಂದ್ಯಾಟದಲ್ಲಿ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಪ್ರಣವ್ (7ನೇ) ಮತ್ತು ಜೋಶ್ವಾ ಡಿಸೋಜ (7ನೇ) ಅತ್ಯುತ್ತಮ ಆಟಗಾರರಾಗಿ ಹೊರಹೊಮ್ಮಿದರು. ಸ್ಪಂದನ್ ವಿ ಜೆ, ಮಹಮ್ಮದ್ ಅರ್ಮಾನ್, ಉಲ್ಲಾಸ್, ಅಜಿತ್, ಅಯಾನ್, ಪ್ರಣವ್, ಪೃಥ್ವಿ, ಕೌಶಿಕ್, ಜೋಶ್ವಾ ಡಿಸೋಜ, ಬಿನೋಯ್ ಡಿಸೋಜ, ವೀವಿಯನ್ ಸೆರಾವೋ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ದೈಹಿಕ ಶಿಕ್ಷಣ ಶಿಕ್ಷಕ ಗಿರೀಶ್ ತರಬೇತಿ ನೀಡಿದರು. ಸಹಶಿಕ್ಷಕಿಯರಾದ ಬ್ಲೆಂಡಿನ್ ರೊಡ್ರಿಗಸ್ ಮತ್ತು ಜೊನಿಟಾ ಕೊರೆಯ ಸಹಕರಿಸಿದರು.

LEAVE A REPLY

Please enter your comment!
Please enter your name here