ಸುದ್ದಿ ಈಗ ಅದ್ಭುತವಾಗಿ ಮೂಡಿಬರುತ್ತಿದೆ: ಪ್ರತಾಪ್‌ಸಿಂಹ- ದೆಹಲಿ ಸಂಸತ್‌ಡ್ ತುಳುತ ಗ್ಯಾಂಗ್ ಉಂಡು: ಉಜಿರೆಯಲ್ಲಿದ್ದಾಗ ತೆಲಿಗಂಜಿ ಪರ್ಕ, ಕಲಿ ಗಂಗಸರ ಬುಡ್ಕ ಆಂದೋಲನ

0

ಬೆಳ್ತಂಗಡಿ: ವಾಣಿ ಶಿಕ್ಷಣ ಸಂಸ್ಥೆಗಳ ಹಿಂಬದಿಯ ಗದ್ದೆಯಲ್ಲಿ ನಡೆದ ಕೆಸರ್ ಕಂಡೊಡು ಗೌಡೆರೆ ಗೌಜಿ ಗಮ್ಮತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹರೊಂದಿಗೆ ಸುದ್ದಿ ನ್ಯೂಸ್ ಬೆಳ್ತಂಗಡಿ ವಾಹಿನಿಯ ಹೆಡ್ ದಾಮೋದರ ದೊಂಡೋಲೆ ವಿಶೇಷ ಸಂದರ್ಶನ ಮಾಡಿದ್ದು, ಅದರ ಆಯ್ದ ಭಾಗ ಇಲ್ಲಿದೆ.
ಸುದ್ದಿ: ರಾಜಕೀಯ ನಾನು ಮಾಡಿರಲಿಲ್ಲ, ಇನ್ನು ಮಾಡುತ್ತೇನೆ ಅಂತ ಹೇಳಿದ್ದೀರಿ, ಇದರ ಅರ್ಥವೇನು?
ಪ್ರತಾಪ್ ಸಿಂಹ: ೨೦೧೪ರಿಂದ ೨೦೨೪ರವರೆಗೆ ಅಭಿವೃದ್ಧಿ ಮಾಡಿzನೆ. ರಾಜಕಾರಣ ಮಾಡಿಲ್ಲ. ನಾನು ಇನ್ನು ಮುಂದೆ ರಾಜಕಾರಣ ಮಾಡುತ್ತೇನೆ ಅಂತ ಹೇಳಿzನೆ. ಜನಪ್ರತಿನಿಧಿ ಆದಾಗ ಅಭಿವೃದ್ಧಿ ಮಾಡಬಹುದು, ಈಗ ಜನಪ್ರತಿನಿಧಿ ಅಲ್ಲ. ಇವಾಗ ನಾನು ರಾಜಕಾರಣ ಮಾಡುತ್ತೇನೆ. ಜನರನ್ನು ಸಂಘಟನೆ ಮಾಡುತ್ತೇನೆ. ಹಿಂದುತ್ವದ ಪರವಾಗಿರುವವರ ಜೊತೆಗಿರುತ್ತೇನೆ ಎಂಬುದು ನನ್ನ ಮಾತಿನ ತಾತ್ಪರ್ಯ.
ಸುದ್ದಿ: ರಾಜಕೀಯ ಮತ್ತು ಅಭಿವೃದ್ಧಿ ಎರಡೂ ಒಟ್ಟಿಗೆ ಹೋಗುವುದು ಹೇಗೆ?
ಪ್ರತಾಪ್ ಸಿಂಹ: ರಾಜಕೀಯವೇ ಅಭಿವೃದ್ಧಿಗೆ ಒಂದು ವೇದಿಕೆಯಾಗಿರುತ್ತದೆ. ಅಭಿವೃದ್ಧಿ ಮಾಡಲು ಚುನಾಯಿತ ಪ್ರತಿನಿಧಿ ಆಗಿರಬೇಕು. ಚುನಾಯಿತನಾಗಬೇಕಾದರೆ ರಾಜಕಾರಣ ಮಹತ್ವದ್ದಾಗಿರುತ್ತದೆ.
ಸುದ್ದಿ: ಗೌಡರೆ ಗೌಜಿ ಗಮ್ಮತ್ ಕಾರ್ಯಕ್ರಮದ ಬಗ್ಗೆ ಏನಂತೀರಿ?
ಪ್ರತಾಪ್ ಸಿಂಹ: ಬೆಳ್ತಂಗಡಿ ತಾಲೂಕಿನ ಎಲ್ಲ ಒಕ್ಕಲಿಗ ಸಮುದಾಯದ ಬಂಧುಗಳು ಸೇರಿಕೊಂಡು ಆಟೋಟ, ವಿವಿಧ ಸ್ಪರ್ಧೆ ಜೊತೆಗೆ ಸಮಾಜದ ಸಾಧಕರಿಗೆ ಸನ್ಮಾನ ಸಮಾರಂಭ ಮಾಡಿದ್ದಾರೆ. ಇದು ಅತ್ಯುತ್ತಮ ಕಾರ್ಯಕ್ರಮ. ವಿಶೇಷವಾಗಿ ತುಳುಭಾಷಿಗ ಗೌಡರ ಒಂದು ವೇದಿಕೆಯಾಗಿದೆ. ಒಂದು ಭಾಷೆ ಜೊತೆ ಅವರ ಸಂಸ್ಕೃತಿ ಆಚಾರ, ವಿಚಾರವೂ ಇರುತ್ತದೆ. ನಾನು ಇಲ್ಲಿ ಬರಬೇಕೆಂದು ಯುವ ವೇದಿಕೆಯ ಕಾರ್ಯದರ್ಶಿ, ವಕೀಲರೂ ಆಗಿರುವ ನವೀನ್ ಬಿ.ಕೆ. ತುಂಬಾ ದಿನದಿಂದ ಕೇಳಿಕೊಂಡಿದ್ದರು. ಸಂಘದಿಂದಲೂ ಆಹ್ವಾನ ಬಂದಿತ್ತು. ಹಾಗಾಗಿ ಕಾರ್ಯಕ್ರಮಕ್ಕೆ ಬಂದಿzನೆ.
ಸುದ್ದಿ: ಬೆಳ್ತಂಗಡಿ, ಉಜಿರೆಗೆ ಬರುವುದಕ್ಕೆ ನಿಮಗೆ ತುಂಬಾನೇ ಖುಷಿಯಂತೆ ಹೌದೇ?
ಪ್ರತಾಪ್ ಸಿಂಹ: ವಿಶೇಷವಾಗಿ ಧರ್ಮಸ್ಥಳ ಮತ್ತು ಉಜಿರೆಯಲ್ಲಿ ಓದಿzನೆ, ಬೆಳ್ತಂಗಡಿ ತಾಲೂಕಿನಲ್ಲಿ ಓದಿzನೆ. ಉನ್ನತ ವ್ಯಾಸಂಗವನ್ನು ಕೊಣಾಜೆಯ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಮಾಡಿzನೆ. ಹಾಗಾಗಿ ಈ ಊರಿಗೆ ಬರುವುದು ಖುಷಿ. ಮಂಜುನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿ ದರ್ಶನ ಆಗುತ್ತದೆ. ಹಳೆ ಸ್ನೇಹಿತರ ಭೇಟಿ, ಸಮಾಜದ ಬಂಧುಗಳ ಭೇಟಿಯಾದಂತೆ ಆಗುತ್ತದೆ.
ಸುದ್ದಿ: ಈ ವಾರದ ಸುದ್ದಿ ಬಿಡುಗಡೆ ಪತ್ರಿಕೆಯನ್ನು ಓದಿದ್ದೀರಿ, ಏನು ಹೇಳುತ್ತೀರಿ?
ಪ್ರತಾಪ್ ಸಿಂಹ: ಸುದ್ದಿ ಬಿಡುಗಡೆ ನಾನು ಓದುವಾಗ ಬ್ಲಾಕ್ ಆಂಡ್ ವೈಟ್‌ನಲ್ಲಿ ಬರುತ್ತಿತ್ತು. ಈವಾಗ ಕಲರ್ ಪೇಜ್‌ನಲ್ಲಿ ಬರುತ್ತಿದೆ. ಬಹಳ ಚೆಂದವಾಗಿ ಮಾಡುತ್ತಿದ್ದೀರಿ. ಪುಟಗಳ ಸಂಖ್ಯೆಯನ್ನು ಹೆಚ್ಚಿಸಿದ್ದೀರಿ. ಈ ಭಾಗದಲ್ಲಿ ಸುದ್ದಿ ಬಿಡುಗಡೆಯೆಂದರೆ ವಿಶೇಷ. ತಾಲೂಕು ಮಟ್ಟದ ಪತ್ರಿಕೆಯಾಗಿ ಸುದ್ದಿ ಬಿಡುಗಡೆ ತನ್ನದೇ ಆದ ಛಾಪು ಮೂಡಿಸಿದೆ. ಜಿಲ್ಲಾ ಮಟ್ಟದ ಪತ್ರಿಕೆಯಾಗಿ ಮೈಸೂರಿನಲ್ಲಿ ಮೈಸೂರು ಮಿತ್ರ ಇಡೀ ದೇಶದಲ್ಲೇ ಅತೀ ಹೆಚ್ಚು ಪ್ರಸಾರ ಸಂಖ್ಯೆ ಹೊಂದಿರುವ ಪತ್ರಿಕೆ. ಮೈಸೂರಿನಲ್ಲಿ ಯಾವ ಪತ್ರಿಕೆ ಯಾರೇ ಓದಿದರೂ ಮೈಸೂರು ಮಿತ್ರ ಓದಿಯೇ ಓದುತ್ತಾರೆ. ಅದೇ ರೀತಿ ಬೆಳ್ತಂಗಡಿಯಲ್ಲಿ ಮನೆಗೆ ಎಷ್ಟೇ ಪತ್ರಿಕೆಗಳು ಬಂದರೂ ಕೂಡ ಸುದ್ದಿ ಬಿಡುಗಡೆಯನ್ನು ಓದಲೇಬೇಕು. ಅಂತಹ ಒಂದು ವಿಶ್ವಾಸಾರ್ಹತೆಯನ್ನು ಸುದ್ದಿ ಬಿಡುಗಡೆ ಗಳಿಸಿಕೊಂಡಿದೆ.
ಸುದ್ದಿ: ತುಳುವಿನಲ್ಲಿ ತಾವು ಮಾತನಾಡುತ್ತೀರಿ, ತುಳುವಿನ ಜೊತೆಗೆ ಆಪ್ತತೆ ಇದೆ ಅಂದಿದ್ದೀರಿ. ತುಳು ಭಾಷೆಯ ಬಗ್ಗೆ ಏನು ಹೇಳುತ್ತೀರಿ?
ಪ್ರತಾಪ್ ಸಿಂಹ: ತುಳುಟು ಯಾನ್ ಪಾತೆರುವೆ. ಎನ್ನ ಫ್ರೆಂಡ್ಸ್ ಪೂರ ತುಳುತಕುಲು ಉಲ್ಲೆರ್. ಪಾರ್ಲಿಮೆಂಟ್‌ಡ್ಲ ಎಂಕ್ಲೆನ ಒಂಜಿ ತುಳುತ ಗ್ಯಾಂಗ್ ಉಂಡು. ನಳಿನಣ್ಣ, ಶೋಭಕ್ಕ, ಆಸ್ಕರ್ ಫೆರ್ನಾಂಡೀಸ್, ಗೋಪಾಲ್ ಶೆಟ್ಟಿ ಎಂಕ್ಲೆನ ಒಂಜಿ ಗ್ಯಾಂಗ್ ಇತ್ತಂಡ್. ಎಂಕುಲು ತುಳುಟೆ ಪಾತೆರೊಂದಿತ್ತ. ಇತ್ತೆ ಕ್ಲಾಸ್‌ಮೇಟ್ಸ್ ಎಸ್.ಡಿ.ಎಂ.ಡು, ಕೊಣಾಜೆಡ್ ಏರ್ ಮಾತ ಇತ್ತೆರೋ ಅಯಿಟ್ ಕೊಂಕಣಿ, ಕೊಡವ, ಕನ್ನಡದಕುಲು ಉಲ್ಲೆರ್. ಆಂಡ ಎಂಕುಲು ಮಾತ ಸೇರ್ನಗ ಎಂಕುಲು ತುಳುಟೆ ಪಾತೆರುವ. ತುಳು ಎಂಕ್ಲೆನ ಕಾಮನ್ ಭಾಷೆ.
ಸುದ್ದಿ: ನೀವು ಉಜಿರೆಯಲ್ಲಿದ್ದಾಗಿನ ನೆನಪುಗಳನ್ನು ಮೆಲುಕು ಹಾಕುವುದಾದರೆ?
ಪ್ರತಾಪ್ ಸಿಂಹ: ನಾವು ಇಲ್ಲಿ ಇರುವಾಗ ತೆಲಿ ಗಂಜಿ ತಿನ್ನುತ್ತಿದ್ದೆವು. ಬೆಳ್ತಂಗಡಿಯಲ್ಲಿ ದುಶ್ಚಟಗಳಾದ ಕಲಿ, ಗಂಗಸರದ ವಿರುದ್ಧ ನಾವು ಆಂದೋಲನ ಮಾಡುತ್ತಿದ್ದೆವು. ಆವಾಗ ಕಲಿ ಗಂಗಸರ ಬುಡ್ಕ, ತೆಲಿಗಂಜಿ ಪರ್ಕ ಅಂತ ಫಲಕ ಹಿಡಿದು ಸಾಗುತ್ತಿದ್ದೆವು. ಅದೆಲ್ಲವೂ ನನಗೆ ತುಂಬಾನೇ ಖುಷಿ ಕೊಡುತ್ತದೆ.

LEAVE A REPLY

Please enter your comment!
Please enter your name here