ಮಾಲಾಡಿ: ಗ್ರಾಮ ಪಂಚಾಯತ್ ಪ್ರಥಮ ಸುತ್ತಿನ ಗ್ರಾಮ ಸಭೆ- ಪುಂಜಾಲಕಟ್ಟೆ-ಪುರಿಯ ರಸ್ತೆ ತೀವ್ರ ಹದಗೆಟ್ಟಿದ್ದು, ರಸ್ತೆ ನಿರ್ಮಾಣ ಮಾಡದಿದ್ದಲ್ಲಿ ತೀವ್ರ ಹೋರಾಟದ ಎಚ್ಚರಿಕೆ ನೀಡಿದ ಗ್ರಾಮಸ್ಥರು

0

ಮಾಲಾಡಿ: ಪುಂಜಾಲಕಟ್ಟೆ, ಪುರಿಯ, ಊರ್ಲ, ಕುಕ್ಕೇಡಿ ಪಿ.ಡಬ್ಲ್ಯೂ.ಡಿ ರಸ್ತೆಗೆ 1ಕೋಟಿ ಅನುದಾನ ಬಿಡುಗಡೆಯಾದರು ಜಲ್ಲಿ ಹಾಕಿದ್ದು, ಜಲ್ಲಿ ಎದ್ದು ಹೋಗಿದೆ. ಇದುವರೆಗೆ ರಸ್ತೆ ಕಾಮಗಾರಿ ನಡೆದಿಲ್ಲ.ಈ ರಸ್ತೆಯಲ್ಲಿ ಪ್ಯಾಚ್ ವರ್ಕ್, ಚರಂಡಿ ದುರಸ್ತಿಯಾಗದೆ ಕಳೆದ 8 ವರ್ಷದಿಂದ ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ಗ್ರಾಮಸ್ಥರಾದ ಗುರುಪ್ರಸಾದ್ ಶೆಟ್ಟಿ ದೂರಿದರು. ಅದಕ್ಕೆ ಉತ್ತರಿಸಿದ ಅಧ್ಯಕ್ಷರು ಈ ರಸ್ತೆ ಪಿ.ಡಬ್ಲ್ಯೂ.ಡಿ ರಸ್ತೆಯಾಗಿದ್ದು, 1ಕೋಟಿ ಅನುದಾನ ಮಂಜೂರುಗೊಂಡಿದ್ದು. ಬಿಮಲ್ ನವರಿಗೆ ಗುತ್ತಿಗೆ ಮಂಜೂರುಗೊಂಡಿದೆ. ಕಾಮಗಾರಿ ಮಾಡದೇ ಬಿಟ್ಟು ಹೋಗಿದ್ದಾರೆ ಎಂದು ಅಧ್ಯಕ್ಷರು ಮಾಹಿತಿ ನೀಡಿದರು. ಅದಕ್ಕೆ ಉತ್ತರಿಸಿದ ಗ್ರಾಮಸ್ಥರು ಒಂದು ತಿಂಗಳ ಒಳಗೆ ಕಾಮಗಾರಿ ಮಾಡದಿದ್ದಲ್ಲಿ ತೀವ್ರ ಹೋರಾಟ ಮಾಡುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಸಿದರು.

ಮಾಲಾಡಿ ಗ್ರಾಮ ಪಂಚಾಯತ್ ನ 2024-25ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷ ಪುನೀತ್ ಕುಮಾರ್ ಇವರ ಅದ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಆ.21ರಂದು ಜರಗಿತು. ಬೆಳ್ತಂಗಡಿ ತಾಲೂಕು ಆಫೀಸ್ ನಲ್ಲಿ ತಾಂತ್ರಿಕ ತೊಂದರೆಯಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಪಡಿತರ ಸಮಸ್ಯೆ ಕೂಡಲೇ ಬಗೆಹರಿಸುವಂತೆ ಕಂದಾಯ ಅಧಿಕಾರಿಗಳಲ್ಲಿ ಮಾಲಾಡಿಯ ಗುರುಪ್ರಸಾದ್ ಶೆಟ್ಟಿ ಮನವಿ ಮಾಡಿದರು.

ಅಪಾಯಕಾರಿ ವಿದ್ಯುತ್ ಕಂಬ, ತಂತಿ ಬದಲಾಯಿಸಿ: ಮಾಲಾಡಿ ಮಸೀದಿಯಲ್ಲಿ ಹೈಮಾಸ್ಟ್ ಅಳವಡಿಸಲಾಗಿದೆ. ಲೈಟ್ ಉರಿಯುವುದಿಲ್ಲ, ಪಣಕಜೆಯಲ್ಲಿ ವಿದ್ಯುತ್ ತಂತಿ ಬದಲಾಯಿಸುವಂತೆ, ಅಂಗಳದಲ್ಲಿ ತಂತಿ ಹಾದು ಹೋಗುತ್ತದೆ ಅದನ್ನು ಸ್ಥಳಾಂತರ ಮಾಡುವಂತೆ, ಪಮ್ಮಾಜೆ ಟ್ರಾನ್ಸ್ಫರ್ಮ್ರ್ ಬದಲಾಯಿಸುವಂತೆ, ಶಾಲಾ ಮೈದಾನದಲ್ಲಿ ಹಾದು ಹೋಗುವ ತಂತಿ ಸ್ಥಳಾಂತರ, ನಾವುಂಡ ರಸ್ತೆಯಲ್ಲಿ ವಿದ್ಯುತ್ ಕಂಬ ವಾಲಿ ನಿಂತಿದೆ, ಸಬರ ಬೈಲು ತಂತಿ ಬದಲಾಯಿಸಲು, ರಾತ್ರಿ ವೇಳೆಯಲ್ಲಿ ಪ್ರತೀದಿನ ಲೋಡ್ ಶೆಡ್ಡಿಂಗ್ ಮಾಡುತ್ತಿರುವ ಬಗ್ಗೆ ಗ್ರಾಮಸ್ಥರಾದ ಬಾಬಿ, ಸುಂದರ, ವಿನ್ಸೆಂಟ್ ಡಿ’ಸೋಜಾರವರು ಮೆಸ್ಕಾಂ ಅಧಿಕಾರಿಯಲ್ಲಿ ತಮ್ಮ ಅಳಲನ್ನು ತೋಡಿಕೊಂಡರು. ಮಾಲಾಡಿ ಶಾಲೆಯ ಶತಮಾನೋತ್ಸವ ಆಚರಣೆಯಲ್ಲಿದೆ. ಶಾಲೆಗೆ ಅನುದಾನ ಒದಗಿಸುವಂತೆ, ಶಾಲಾ ಮಕ್ಕಳಿಗೆ ವಿದ್ಯಾರ್ಥಿ ವೇತನ ದೊರೆಯದೆ ಇದ್ದು ವಿದ್ಯಾರ್ಥಿಗಳು ವಿದ್ಯಾಭ್ಯಾಸದಿಂದ ವಂಚಿತರಾಗಲು ಕಾರಣವಾಗಿದೆ ಎಂದು ಮಕ್ಕಳ ಪೋಷಕರು ಗ್ರಾಮ ಸಭೆಯಲ್ಲಿ ಶಿಕ್ಷಣ ಇಲಾಖಾ ಅಧಿಕಾರಿಯಲ್ಲಿ ದೂರಿದರು.

ಡ್ರಗ್ಸ್ ದಂದೆ: ಡ್ರಗ್ಸ್ ದಂದೆ ಬೇಕಾಬಿಟ್ಟಿಯಾಗಿ ನಡೆಯುತ್ತಿದೆ. ಕೂಡಲೇ ಕಾರ್ಯಪ್ರವೃತ್ತರಾಗುವಂತೆ ಪೊಲೀಸ್ ಅಧಿಕಾರಿಯವರಲ್ಲಿ ಗ್ರಾಮಸ್ಥರು ಮನವಿ ಮಾಡಿದರು. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಮರ್ಪಕವಾಗದೆ ಬಹಳಷ್ಟು ತೊಂದರೆ ಅನುಭವಿಸುತ್ತಿದ್ದೇವೆ. ಗ್ರಾಮಸಭೆಗೆ ಅಧಿಕಾರಿಗಳು ಯಾಕೆ ಬಂದಿಲ್ಲ ಎಂದು ದೂರಿದರು. ಓಡಾಡಲು ಆಗದೆ ಇದ್ದು ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಗ್ರಾಮಸ್ಥರೇ ನಿಂತು ರಸ್ತೆ ರಿಪೇರಿ ಮಾಡಿದ್ದನ್ನು ಗ್ರಾಮಸ್ಥರು ಅಭಿನಂದಿಸಿದರು.

ಸಮಸ್ಯೆಗಳು ಮತ್ತು ಬೇಡಿಕೆಗಳು: ನೀರು ಸಂಪರ್ಕ, ಕಾಮಗಾರಿ ಸಮರ್ಪಕವಾಗಿ ನಡೆದಿಲ್ಲ ಎಂದು ಪಂಚಾಯತ್ ರಾಜ್ ಇಂಜಿನಿಯರ್ ವಿಭಾಗದ ಅಧಿಕಾರಿಯಲ್ಲಿ ಗ್ರಾಮಸ್ಥರು ದೂರಿದರು. ಪುರಿಯ ಅಂಗನವಾಡಿ ಕೇಂದ್ರ ಎದುರು ಹಾಲಿನ ಡಿಪ್ಪೋದ ಕೊಳಕು ನೀರು ಹಾದು ಹೋಗುತ್ತದೆ.ಅದನ್ನು ಸರಿಪಡಿಸುವಂತೆ ಆರೋಗ್ಯ ಇಲಾಖೆಯವರಲ್ಲಿ ಮನವಿ.ವಿದ್ಯುತ್ ತಂತಿಗಳ ಮೇಲೆ ಬೀಳುವ ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತೆ ಗ್ರಾಮಸ್ಥರ ಒತ್ತಾಯ. ಪೈಪ್ ಲೈನ್ ಸಂಪರ್ಕ ಆಗದಿದ್ದರೂ ಬಿಲ್ ನೀಡಲಾಗಿದೆ, ಕಜೆ ದಲಿತ ಕಾಲೋನಿಯಲ್ಲಿ ಚರಂಡಿ ಬ್ಲಾಕ್ ಆಗಿದ್ದು ಸರಿ ಪಡಿಸುವಂತೆ, ಭಾರೀ ಮಳೆಗೆ ಕುಸಿದ ಬಾವಿ ನಿರ್ಮಾಣಕ್ಕೆ ಪರಿಹಾರ ನೀಡುವಂತೆ, ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಾಣ, ನಾವುಂಡ – ಮಾಲಾಡಿ ಚರಂಡಿ ದುರಸ್ತಿ, ಮನೆ ಪಕ್ಕದಲ್ಲಿ ತ್ಯಾಜ್ಯ ಸುರಿದು ಸುಡುವ ಕಸದ ವ್ಯವಸ್ಥೆ ಸರಿಪಡಿಸುವ ಬಗ್ಗೆ, ಹಿಂದೂ ರುದ್ರ ಭೂಮಿ ಸಮರ್ಪಕವಾಗಿ ನಿರ್ಮಾಣ, ಬೀದಿ ನಾಯಿಗಳ ಸಮಸ್ಯೆ, 9/11 ಗ್ರಾಮ ಪಂಚಾಯತ್ ನಲ್ಲಿ ಅನುಷ್ಠಾನ ಮಾಡುವಂತೆ, ಕೋಡಿಯಲು ಬಳಿ ಕಸದ ಮೂಟೆ ವಿಲೇವಾರಿ ಮಾಡುವಂತೆ ಬೇಡಿಕೆ ನೀಡಿದರು.

ಮಾರ್ಗದರ್ಶಿ ಅಧಿಕಾರಿಯಾಗಿ ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ರವಿ ಕುಮಾರ್ ಭಾಗವಹಿಸಿ ಸಭೆಯನ್ನು ನಡೆಸಿಕೊಟ್ಟರು.ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪುನಿತ್ ಕುಮಾರ್ ಅಭಿವೃದ್ಧಿ ಪೂರಕವಾಗಿ ಚರ್ಚೆಯಾಗಿದೆ. ಯಾವುದೇ ಅಭಿವೃದ್ಧಿಯಾಗಬೇಕಾದರೆ ಗ್ರಾಮಸ್ಥರೇ ಮುಖ್ಯಸ್ಥರು. ಗ್ರಾಮದ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು. ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಕೂಡಲೇ ಸ್ಪಂದನೆ ನೀಡಲಾಗಿದೆ.ಎಲ್ಲರಿಗೂ ಪರಿಹಾರ ಸಿಗುವ ಹಾಗೆ ಪ್ರಯತ್ನಿಸಲಾಗುವುದು. ಸ್ವಚ್ಛತೆಗೆ ಗ್ರಾಮಸ್ಥರು ಸ್ಪಂದನೆ ನೀಡಬೇಕು. ಸ್ವಚ್ಛತೆಗೆ ನಾಗರಿಕರ ಕರ್ತವ್ಯ ಕೂಡ. ಮಳೆ ನಿಂತ ಮೇಲೆ ನೀರು ಮಿತವಾಗಿ ಬಳಸಬೇಕು ಎಂದರು.

ಸಭೆಯಲ್ಲಿ ಉಪಾಧ್ಯಕ್ಷರಾಗಿ ಸೆಲೆಸ್ತಿನ್ ಡಿಸೋಜಾ , ಸದಸ್ಯರಾದ ಸುಸ್ಸಾನ ಡಿಸೋಜಾ, ದಿನೇಶ್ ಕರ್ಕೇರ, ಎಸ್ ಬೇಬಿ ಸುವರ್ಣ, ಸುಧಾಕರ್ ಆಳ್ವ, ಜಯಂತಿ, ಉಮೇಶ್, ಬೆನೆಡಿಕ್ಟ್ ಮಿರಾಂದ,ವಸಂತ್ ಪೂಜಾರಿ, ತುಳಸಿ ಬಿ. ರಾಜೇಶ್, ಐರಿನ್ ಮೊರಾಸ್, ಫರ್ಜಾನ, ವಿದ್ಯಾ ಪಿ. ಸಾಲಿಯಾನ್, ರುಬೀನಾ, ಗುಲಾಬಿ, ದಿನೇಶ್, ವಿವಿಧ ಇಲಾಖಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರು, ಗ್ರಾಮಸ್ಥರು, ಪಂಚಾಯತ್ ಅಭಿವೃದ್ಧಿ ರಾಜಶೇಖರ್ ರೈ ಸ್ವಾಗತಿಸಿ. ಗ್ರಾಮ ಪಂಚಾಯತ್ ಕಾರ್ಯದರ್ಶಿ ಯಶೋಧರ ಶೆಟ್ಟಿ ಜಮಾ ಖರ್ಚಿನ ವಿವರ ಅನುಪಾಲನಾ ವರದಿ ಮಂಡಿಸಿದರು. ಕಾರ್ಯದರ್ಶಿ ಯಶೋಧರ ಶೆಟ್ಟಿ ವಂದಿಸಿದರು. ಗ್ರಾಮ ಸಭೆಯಲ್ಲಿ ತಾಲೂಕಿನ ಇಲಾಖಾಧಿಕಾರಿಗಳು ಇಲಾಖೆಯಿಂದ ಸಿಗುವ ಸಿಗುವ ಸೌಲಭ್ಯಗಳ ಮಾಹಿತಿ ನೀಡಿದರು.


LEAVE A REPLY

Please enter your comment!
Please enter your name here