ನಾರಾವಿ: ಸಂತ ಅಂತೋನಿ ಶಿಕ್ಷಣ ಸಂಸ್ಥೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

0

ನಾರಾವಿ: ಸಂತ ಅಂತೋನಿ ಶಿಕ್ಷಣ ಸಂಸ್ಥೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಮಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂತ ಅಂತೋನಿ ಶಿಕ್ಷಣ ಸಂಸ್ಥೆಯ ನೂತನ ಸಂಚಾಕಲಕರರಾದ ವಂ.ಸ್ವಾ.ಜೆರೋಮ್ ಡಿಸೋಜಾ “ದೇಶಕ್ಕಾಗಿ ಶ್ರಮಿಸಿರುವ ಯೋಧರನ್ನು ಮತ್ತು ಸ್ವಾತಂತ್ರ್ಯವನ್ನು ತಂದುಕೊಟ್ಟ ಮಹನೀಯರನ್ನು ನೆನಪಿಸಿಕೊಳ್ಳದಿದ್ದರೆ ಈ ದಿನದ ಆಚರಣೆ ಅಪೂರ್ಣ” ಎಂದು ಹೇಳುತ್ತಾ ಸ್ವಾತಂತ್ರ್ಯೋತ್ಸವದ ಮಹತ್ವವನ್ನು ತಿಳಿಸಿದರು.

ಅದೇ ರೀತಿ ವೇದಿಕೆಯಲ್ಲಿ ಸಂತ ಅಂತೋನಿ ಪದವಿ ಕಾಲೇಜುಗಳ ಪ್ರಾಂಶುಪಾಲ ವಂ.ಸ್ವಾ.ಡಾ. ಆಲ್ವಿನ್ ಸೆರಾವೋ, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಸಂಜಯ್ ಮಿರಾಂದ, ಕಾರ್ಯದರ್ಶಿ ಯೆವ್ಜಿನ್ ರೋಡ್ರಿಗಸ್, ನಾರಾವಿ ಪ್ರೌಢಶಾಲೆಯ ಮುಖ್ಯಸ್ಥೆ ಲಿಲ್ಲಿ ಪಾಯ್ಸ್, ಸಂತ ಪಾವ್ಲರ ಪ್ರಾಥಮಿಕ ಶಾಲೆಯ ಮುಖ್ಯಸ್ಥೆ ಸೋಫಿಯಾ ಪೆರ್ನಾಂಡಿಸ್ ಹಾಗೂ ಸಂತ ಪಾವ್ಲರ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಸ್ಥೆ ಸಿಸ್ಟರ್ ಸುಪ್ರಿತಾ ಕ್ರಾಸ್ತಾ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ದೇವರ ಸ್ತುತಿಯೊಂದಿಗೆ ಆರಂಭಿಸಲಾಯಿತು. ದೇಶ ಪ್ರೇಮವನ್ನು ಸಾರುವ ದೇಶಭಕ್ತಿ ಗೀತೆ ಹಾಗೂ ನೃತ್ಯವನ್ನು ಮಾಡುವ ಮೂಲಕ ಸ್ವಾತಂತ್ರ್ಯೋತ್ಸವದ ದಿನವನ್ನು ಸಂಭ್ರಮಿಸಲಾಯಿತು.ಅದೇ ರೀತಿ ಈ ಕಾರ್ಯಕ್ರಮವನ್ನು ಘೋಷಣೆ ವಾಕ್ಯವನ್ನು ಕೂಗುವ ಮೂಲಕ, ಹಾಗೂ ಸಿಹಿ ಹಂಚುದರ ಮೂಲಕ ಮುಕ್ತಾಯಗೊಳಿಸಲಾಯಿತು. ನಾರಾವಿ ಕನ್ನಡ ಮಾಧ್ಯಮ ಪ್ರೌಢಶಾಲೆಯ ಕನ್ನಡ ಅದ್ಯಾಪಕ ವಿನೋದ್ ಮೋನಿಸ್ ನೂತನವಾಗಿ ಆಗಮಿಸಿರುವ ಸಂಚಾಲಕರ ಪರಿಚಯ ಮಾಡುವುದರೊಂದಿಗೆ, ಎಲ್ಲರನ್ನೂ ಸ್ವಾಗತಿಸಿದರು.

ಸಂತ ಅಂತೋನಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ಉಪನ್ಯಾಸಕಿ ಕು.ಅಶ್ವಿತಾ ಸೆರಾವೋ ಎಲ್ಲರಿಗೂ ಧನ್ಯವಾದವಿತರು. ನಿರೂಪಣೆಯನ್ನು ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಶಕುಂತಲಾ ಶೆಟ್ಟಿ ಇವರು ನೆರವೇರಿಸಿದರು.

LEAVE A REPLY

Please enter your comment!
Please enter your name here