ಲಾಯಿಲ: ದಯಾ ವಿಶೇಷ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಲಾಯಿಲ: ಕಪುಚಿನ್ ಕೃಷಿಕ್ ಸೇವಾ ಕೇಂದ್ರ (ರಿ) ಅಂಗ ಸಂಸ್ಥೆಯಾದ ದಯಾ ವಿಶೇಷ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅಚರಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಸಂಚಾಲಕರು ಹಾಗೂ ನಿರ್ದೇಶಕ ವಂ.ಫಾದರ್ ವಿನೋದ್ ಮಸ್ಕರೇನ್ಹಸ್, ಕಾರ್ಯಕ್ರಮದ ಉದ್ಘಟಕರು ಅದ ಬೆಳ್ತಂಗಡಿ ಬೆಸ್ಟ್ ಪೌಂಡೇಷನ್ ನ ಸ್ಥಾಪಕರು, ಕೆಪಿಸಿಸಿ ಪ್ರ.ಕಾರ್ಯದರ್ಶಿ ರಕ್ಷಿತ್ ಶಿವರಾಂರವರು, ಬೆಳ್ತಂಗಡಿ ರೇಡ್ ಕ್ರಾಸ್ ಸೊಸೈಟಿಯ ಅಧ್ಯಕ್ಷರು ಹಾಗೂ ಎನ್ ಐ ಸಿ ಡೆವಲಪ್ಮೆಂಟ್ ಅಧಿಕಾರಿ ಹರಿದಾಸ್ ರವರು, ಮೇಲಂತಬೆಟ್ಟು ಪಂಚಾಯತ್ ನ ಮಾಜಿ ಅಧ್ಯಕ್ಷರು ಹಾಗೂ ಅಭಿವೃಧ್ಧಿ ಅಧಿಕಾರಿ ಜೆಸಿಂತ ಮೋನಿಸ್ ರವರು, ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚನ ಭದ್ತತಾ ಸಿಬ್ಬಂದಿಯಾದ ಶ್ರೀಯುತ ಗೋಡ್ಫ್ರೆ ರೋನಾಲ್ಡ್ ಮೋನಿಸ್ ರವರು, ಹಿರಿಯ ವಕೀಲರು ಹಾಗೂ ಸಮಾಜ ಸೇವಕರು ಅದ ಶಿವಕುಮಾರ್ ರವರು, ರೆಡ್ ಕ್ರಾಸ್ ಸೊಸೈಟಿಯ ನಿರ್ದೇಶಕರು ಹಾಗೂ ವಕೀಲೆ ಸುಕನ್ಯ, ಎನ್ ಐ ಸಿ ಡೆವಲಪ್ಮೆಂಟ್ ಅಧಿಕಾರಿ ಹಾಗೂ ರೆಡ್ ಕ್ರಾಸ್ ಸೊಸೈಟಿಯ ನಿರ್ದೇಶಕರು ಅದ ಅರ್ವಿನ್ ಡಿಸೋಜಾರವರು ಪೋಷಕರ ಪ್ರತಿನಿಧಿಯಾಗಿ ಶುಭಕರ್ ರವರು, ಮಕ್ಕಳ ಪ್ರತಿನಿಧಿಯಾಗಿ ಹರ್ಬಾಝ್, ಮತ್ತು ಶಾಲೆಯ ಮುಖ್ಯ ಶಿಕ್ಷಕಿಯಾದ ದಿವ್ಯ ಟಿ ವಿ ಉಪಸ್ಥಿತರಿದ್ದರು.

ಬೆಳ್ತಂಗಡಿ ಬೆಸ್ಟ್ ಪೌಂಡೇಷನ್ ನ ಸ್ಥಾಪಕರು, ರಕ್ಷಿತ್ ಶಿವರಾಂರವರು ಮಾತನಾಡಿ ಸ್ವಾತಂತ್ರ್ಯ ಎಂದರೆ ಸಮಾಜದ ಎಲ್ಲಾ ವರ್ಗದ ಜನರು ಯಾವುದೇ ಧರ್ಮ, ಜಾತಿ, ಭೇದವಿಲ್ಲಧೆ ಸಮಾನಾತೆ ಇರುವುದು, ಭಿಕ್ಷಾಟನೆ ಎಂಬಂತಹ ಕತ್ತಲೆಯಿಂದ ಹೊರಬಂದು ಬಡತನದಿಂದ ಮುಕ್ತಿ ಹೊಂದಿ ನಿರುದ್ಯೋಗ ಸಮಸ್ಯೆಯಿಂದ ಸ್ವಾತಂತ್ರ್ಯವಾಗಬೇಕು, ಮಹತ್ಮಗಾಂಧಿ ಮತ್ತು ಅಂಬೇಡ್ಕರ್ ಮೊದಲಾದ ನಾಯಕರನ್ನು ಸ್ಮರಿಸಿ ಸಂವಿಧಾನ ಪೀಠಿಕೆಯ ಪ್ರಸ್ತಾವನೆಯನ್ನು ಸಭೆಯಲ್ಲಿ ಮಂಡಿಸಿ, ಸರ್ವರಿಗೂ ಸ್ವಾತಂತ್ರ್ಯದ ದಿನಾಚರಣೆಯ ಶುಭಾಶಯ ಕೊರಿ ವಿಶೇಷ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಸಿಬ್ಬಂಧಿಗಳನ್ನು ಪ್ರಶಂಸಿಸಿದರು.
ಸಂಸ್ಥೆಯ ಸಂಚಾಲಕರು ಹಾಗೂ ನಿರ್ದೇಶಕ ವಂ.ಫಾದರ್ ವಿನೋದ್ ಮಸ್ಕರೇನ್ಹಸ್ ರವರು ಮತಾನಾಡಿ ಭಾರತ ದೇಶದಲ್ಲಿ ವಿವಿಧ ಭಾಷೆ, ಆಹಾರ, ಉಡುಪು, ಸಂಸ್ಕೃತಿ ಬೇರೆ-ಬೇರೆ ಇದ್ದರು ನಾವೆಲ್ಲಾರೂ ಭಾರತಾಂಭೆಯ ಮಕ್ಕಳು, ನಾವೆಲ್ಲಾರೂ ಭಾರತೀಯರು, ನಾವು ಹೇಗೆ ನೆಡೆದುಕೊಳ್ಳಬೇಕು ಎಂಬುದು ಸಂವಿಧಾನದಲ್ಲಿ ಅಡಕವಾಗಿದೆ, ಇಂತಹ ಸಂವಿಧಾನವಿತ್ತ ಅಂಬೇಡ್ಕರ್ ರವರನ್ನು ಸ್ಮರಿಸಿ ಹಾಗೂ ಇತರ ರಾಷ್ಟ್ರೀಯ ನಾಯಕರ ಆಧರ್ಶಗಳನ್ನು ನೆನೆಪಿಸಿಕೊಂಡು ಇತರ ದೇಶದೊಂದಿಗೆ ಹೊಲಿಸಿದಾಗ ನಮ್ಮ ದೇಶದಲ್ಲಿ ವಿವಿಧ ಭಾಷೆ ಜನಾಂಗ ಸಂಪ್ರದಾಯ ಪದ್ದತಿಗಳಿದ್ದು, ಇಂತಹ ದೇಶದಲ್ಲಿ ನಾವು ಹುಟ್ಟುರುವುದು ನಮ್ಮ ಹೆಮ್ಮ. ಇತ್ತಿಚ್ಚಿಗೆ ನೆಡೆದ ಒಲಂಫಿಕ್ಸ್ ನಲ್ಲಿ ವಿನೇಶ್ ಫೋಗಟ್ ರವರಿಗೆ ಚಿನ್ನದ ಪದಕ ದೊರಕದಿದ್ದರು ಜನರ ಮನಸ್ಸಿನಲ್ಲಿ ಚಿನ್ನಂತಹ ವೈಕ್ತಿಯಾಗಿದ್ದಾರೆ ಎಂದು ಅವರನ್ನು ಸ್ಮರಿಸಿಕೊಳ್ಳುವ ಮೂಲಕ ಎಲ್ಲಾರಿಗೂ 78ನೇ ವರ್ಷದ ಸ್ವಾತಂತ್ರ್ಯ ದಿನದ ಶುಭಾಶಯ ಕೊರಿದರು.

ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಮತ್ತು ಮಕ್ಕಳು ಭಾಗವಹಿಸಿದರು, ಮಕ್ಕಳಿಗೆ ವಿಶೇಷ ಭೋಜನಾ ವ್ಯೆವಸ್ಥೆ ಮಾಡಲಾಗಿತ್ತು, ಮಕ್ಕಳಿಗೆ ಹಲವು ಬಹುಮಾನಗಳನ್ನು ನೀಡಿದರು, ನಿರೂಪಣೆಯನ್ನು ಶಿಕ್ಷಕಿ ಐಶ್ವರ್ಯ ರವರು ಹಾಗೂ ಶಿಕ್ಷಕಿ ಸುರಕ್ಷಾರವರು ಸ್ವಾಗತಿಸಿ, ಶಿಕ್ಷಕಿ ರಶ್ಮಿರವರು ವಂದಿಸಿದರು.

LEAVE A REPLY

Please enter your comment!
Please enter your name here