ಪಿಲ್ಯ: ಗುಡ್ ಫ್ಯೂಚರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ಸಂತಸ ಸಡಗರಗಳಿಂದ ನಿವೃತ್ತ ಯೋಧರಾದ ಡಾ. ಗೋಪಾಲಕೃಷ್ಣ ಕಾಂಜೋಡಿ ಇವರನ್ನು ಸನ್ಮಾನಿಸುವುದರ ಮೂಲಕ ಆಚರಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ನಸೀರ್ ಖಾನ್ ಪಿಲ್ಯ, ವೀರೇಂದ್ರ ಕುಮಾರ್ ಜೈನ್ ರಾಜಪಾದೆ, ಹರೀನಾಕ್ಷಿ ಪಿಲ್ಯ, ಮೌಲವಿ ಹನೀಫ್ ಹಿಮಾಮಿ ಬದ್ರಿಯಾ ಮಸ್ಜಿದ್ ಪಿಲ್ಯ, ಧನಕೀರ್ತಿ ಜೈನ್ ಕುದ್ಯಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯ ಮೆಲ್ವಿನ್ ಸಂತೋಷ್ ನಿರ್ವಹಿಸಿದರು. ಶಾಲಾ ಸಹಧ್ಯಾಪಕಿ ಫೈಜೂನ್ ಸ್ವಾಗತಿಸಿ ಧನ್ಯವಾದ ಸಲ್ಲಿಸಿ ರಾಷ್ಟಗೀತೆಯೊಂದಿಗೆ ಸಭೆ ಮುಕ್ತಾಯಗೊಳಿಸಲಾಯಿತು.