ಮಡಂತ್ಯಾರು: ಬಿಎಂ ಆಪೇ ಆಟೋ ರಿಕ್ಷಾ ಚಾಲಕ ಮಾಲಕ ಸಂಘದ ವತಿಯಿಂದ 78ನೇ ವರ್ಷದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮವು ಸಂಘದ ಅಧ್ಯಕ್ಷರಾದ ಶೇಕ್ ಸುಲೇಮಾನ್ ಮಾಲಾಡಿ ಇವರ ಅಧ್ಯಕ್ಷತೆಯಲ್ಲಿ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಗೌರವಾನ್ವಿತ ಮುಖ್ಯ ಅತಿಥಿಗಳಾಗಿ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿಗಳು,ಹಾಗೂ ನಮ್ಮ ಸಂಘದ ಗೌರವಾಧ್ಯಕ್ಷರಾದ ಅಬ್ದುಲ್ ರಹಿಮಾನ್ ಪಡ್ಪು, ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪುನೀತ್ ಕುಮಾರ್ ಮಡಂತ್ಯಾರು, ಮಡಂತ್ಯಾರು ರೋಟರಿ ಕ್ಲಬ್ ನ ಅಧ್ಯಕ್ಷರಾದ ನಿತ್ಯಾನಂದ ಬಿ ಸುಪದ್ಮ ಮಾಲಾಡಿ, ಮಾಲಾಡಿ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಬೇಬಿ ಸುವರ್ಣ, ಮಾಲಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಉಮೇಶ್, ನಮ್ಮ ಸಂಘದ ಗೌರವ ಸಲಹೆಗಾರರೂ ಉದ್ಯಮಿಯು ಆದ ಪುರಂದರ ಕೆ ಬಂಗೇರ (ರಘು), ಹಿರಿಯ ಪ್ರಾಥಮಿಕ ಶಾಲೆ ಮಾಲಾಡಿ ಇದರ ಮುಖ್ಯ ಶಿಕ್ಷಕಿ ಲತಾ ಕೆ, ಮಾಲಾಡಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಹಕೀಮ್, ಶಾಲಾ ಮಕ್ಕಳು ಹಾಗೂ ನಮ್ಮ ಸಂಘದ ಸರ್ವ ಸದಸ್ಯರು, ಸಂಘದ ಹಿತೈಷಿಗಳು ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷರಾದ ರಮೇಶ್ ಬಳ್ಳಮಂಜ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿಗಳಾದ ಇಲಿಯಾಸ್ ಬಸವನಗುಡಿ ಧನ್ಯವಾದಗೈದರು.