ಪುದುವೆಟ್ಟು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಟೆ ಇಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಂಭ್ರಮದಲ್ಲಿ ಆಚರಿಸಲಾಯಿತು. ಇದೇ ಶುಭ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿಯಾಗಿದ್ದ ಪ್ರೀತಿ ಕುಮಾರಿ ಎಂ ಇವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಡತ್ತೋಡಿ ಪೆರ್ಲ ಇಲ್ಲಿಗೆ ವರ್ಗಾವಣೆಗೊಂಡಿರುತ್ತಾರೆ. ಅವರಿಗೆ ಎಲ್ಲಾ ಅತಿಥಿಗಳು, ವಿದ್ಯಾಭಿಮಾನಿಗಳ ಪರವಾಗಿ ಗೌರವ ಪೂರ್ವಕವಾಗಿ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಂಡಿದ್ದರು.
ಈ ಸಂದರ್ಭದಲ್ಲಿ ಪುದುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅನಿತಾ, ಉಪಾಧ್ಯಕ್ಷರಾದ ಪೂರ್ಣಕ್ಷ, ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಅಬೂಬಕ್ಕರ್, ಉಪಾಧ್ಯಕ್ಷರಾದ ಸುಮಿತ್ರಾ, ಸಂತೋಷ್. ಕೆ. ಸಿ. ಅಧ್ಯಕ್ಷರು, ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಮಿಯಾರು ಪುದುವೆಟ್ಟು, ಅಶೋಕನ್ (ಅಶೋಕ್ ಟ್ರೇಡರ್ಸ್), ವನದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷರಾದ ನಿತ್ಯಾನಂದ ಎಟ್ಯೋಡು, ಡಿ.ಎಸ್.ಎಸ್. ನ ಅಧ್ಯಕ್ಷ ಸೋಮ ಬೊಮ್ಮಂತಿಲ್, ಕೆಮ್ಮಟೆ ವಲಯದ ಸೇವಾಪ್ರತಿನಿಧಿಯಾದ ಚೈತ್ರ, ಎಲ್ಲಾ ಪೋಷಕರು, ಶಿಕ್ಷಕ ವೃಂದ, ವಿದ್ಯಾಭಿಮಾನಿಗಳ ಸಮ್ಮುಖದಲ್ಲಿ ಗೌರವಾರ್ಪಣೆ ನೇರವೇರಿತು.
ಮುಖ್ಯ ಶಿಕ್ಷಕಿ ವನಿತಾ. ಎನ್.ಸ್ವಾಗತಿಸಿ, ಅಶ್ವಿನಿ ಅನಿಸಿಕೆ ವ್ಯಕ್ತಪಡಿಸಿದರು. ಉಮೇಶ್ ಕಾರ್ಯಕ್ರಮ ನಿರೂಪಿಸಿ, ಪವಿತ್ರ ವಿ. ಇವರು ಧನ್ಯವಾದವಿತ್ತರು.