ಕನ್ಯಾಡಿ-2: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಕನ್ಯಾಡಿ-2 : ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ನಶಾ ಮುಕ್ತ ಭಾರತ ಅಭಿಯಾನ ” ಎಂಬ ವಿಷಯವನ್ನು ಮುಂದಿಟ್ಟುಕೊಂಡು 78ನೇಯ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಮುಖ್ಯ ಅತಿಥಿಗಳಾದ ಶಾರಿಕಾ. ಡಿ .ಶೆಟ್ಟಿ ಹಾಗೂ ಗಣ್ಯರು ಸ್ವಾತಂತ್ರ್ಯ ಹೋರಾಟಗಾರರಾದ ಮಹಾತ್ಮ ಗಾಂಧೀಜಿ, ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.ಮುಖ್ಯ ಅತಿಥಿಗಳಾದ ಸಾರಿಕಾ.ಡಿ ಶೆಟ್ಟಿ ಧ್ವಜಾರೋಹಣವನ್ನು ಮಾಡಿ ಸ್ವಾತಂತ್ರ ದಿನದ ಮಹತ್ವವನ್ನು ತಿಳಿಸಿಕೊಟ್ಟರು.

ಶಾಲಾ ನಾಯಕ ಸುಜಿತ್ ನೇತೃತ್ವದಲ್ಲಿ ಮಕ್ಕಳು ಘೋಷಣೆ ಕೂಗಿದರು ಮತ್ತು ಮಕ್ಕಳು ಮಾಸ್ ಪಿ.ಟಿ ಯನ್ನು ಸೊಗಸಾಗಿ ಮಾಡಿದರು. ಈ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಧರ್ಮಸ್ಥಳ ಗ್ರಾಮ್ ಪಂಚಾಯತ್ ಸದಸ್ಯರು ಹಾಗೂ ಶಾಲೆಯ ಅಡುಗೆ ಸಿಬ್ಬಂದಿ ಭಾರತಿ, ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಕೆ.ನಂದ, ಉಪಾಧ್ಯಕ್ಷೆ ರಮ್ಯಾ ಗೌರವ ಸಲಹೆಗಾರರಾದ ರಾಜೇಂದ್ರ ಅಜ್ರಿ, ನವೀನ್ ಚಂದ್ರ ಶೆಟ್ಟಿ, ಶಾಲೆಯ ಹಳೆ ವಿದ್ಯಾರ್ಥಿ ಸುದರ್ಶನ್ ಕನ್ಯಾಡಿ, ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಪುಷ್ಪಾ.ಎನ್, ಶಾಲಾ ಶಿಕ್ಷಕ ವೃಂದ, ಪೋಷಕ ವೃಂದ, ಶಾಲಾ ಮೇಲುಸ್ತುವಾರಿ ಸಮಿತಿಯ ಸರ್ವ ಸದಸ್ಯರು,ಶಾಲಾ ನಾಯಕ ಸುಜಿತ್ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ರಾಜೇಂದ್ರ ಅಜ್ರಿ “ನಶಾ ಮುಕ್ತ ಭಾರತ ಅಭಿಯಾನ” ಬಗ್ಗೆ ಮಾಹಿತಿಯನ್ನು ನೀಡಿದರು.ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಕೆ ನಂದ ರವರು ಶುಭ ಆರೈಸಿದರು.ಈ ಕಾರ್ಯಕ್ರಮವನ್ನು ಶಾಲಾ ಗೌರವ ಶಿಕ್ಷಕಿ ರಾಜಶ್ರೀ ನಿರೂಪಿಸಿ , ಗೌರವ ಶಿಕ್ಷಕಿಯಾದ ರೇವತಿ ಸ್ವಾಗತಿಸಿ, ಶಾಲಾ ಅತಿಥಿ ಶಿಕ್ಷಕಿ ಶ್ವೇತಾ ಧನ್ಯವಾದ ಕಾರ್ಯಕ್ರಮವನ್ನು ಮಾಡಿದರು.

ಶಾಲಾ ಸಹ ಶಿಕ್ಷಕಿಯಾದ

ದೀಪಿಕಾ ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಧರ್ಮಸ್ಥಳ ಗ್ರಾಮ ಪಂಚಾಯತ್ ಮತ್ತು ವಿನೀತ್ ಕುಮಾರ್ ಶೆಟ್ಟಿ ಮಾಣಿ ಇವರ ಪ್ರಾಯೋಜಕತ್ವದಲ್ಲಿ ಸಿಹಿತಿಂಡಿಯನ್ನು ಮಕ್ಕಳಿಗೆ ವಿತರಿಸಲಾಯಿತು.

p>

LEAVE A REPLY

Please enter your comment!
Please enter your name here