ಬೆಳ್ತಂಗಡಿ: ಸಂಜಯ್ ಗ್ಲೋಬಲ್ ಫೌಂಡೇಷನ್ ವತಿಯಿಂದ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

0

ಬೆಳ್ತಂಗಡಿ: ಸಂಜಯ್ ಗ್ಲೋಬಲ್ ಫೌಂಡೇಷನ್ ವತಿಯಿಂದ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮ ದ ಅಧ್ಯಕ್ಷತೆಯನ್ನು SGF ಇದರ ಅಧ್ಯಕ್ಷರಾದ ರಶೀದ್ ಸಂಜಯ ನಗರ ರವರು ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಮೆಹಬೂಬ್ ಸಂಜಯ ನಗರ, ಅಕ್ಬರ್ ಬೆಳ್ತಂಗಡಿ, ಅಬ್ಬಾಸ್ ಹಂಝಾ ಭಾಗವಹಿದರು.

ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ. ಅತಿ ಹೆಚ್ಚು ಅಂಕ ಗಳಿಸಿದ ವಿಧ್ಯಾರ್ಥಿಗಳಿ ಪ್ರತಿಭಾ ಪುರಸ್ಕಾರ, ಕ್ರೀಡಾ ವಿಜೇತರಿಗೆ ಬಹುಮಾನ ವಿತರಣೆ, ಅದೇ ರೀತಿ ಯುವ ಪ್ರತಿಭೆ ಎಲ್ಲಾ ಬಿಡಿ ಭಾಗಗಳನ್ನು ಸಂಗ್ರಹಿಸಿ ಮೋಟಾರು ಬೈಕು ತಯಾರಿಸಿದ ಸಾರಿಮ್ ಸಂಜಯ ನಗರ ರವರು ಸಾಲು ಹೊದಿಸಿ ಸನ್ಮಾನಿಸಲಾಯಿತು.

ಸಮಿತಿಯ ಉಪಾಧ್ಯಕ್ಷರಾದ ರಿಯಾಝ್ ಕಾರ್ಯದರ್ಶಿ ಮಹಮ್ಮದ್ ಕುದ್ರಡ್ಕ, ಸೈರೋಝ್ ಉದಯ ನಗರ, ಕೋಶಾಧಿಕಾರಿಗಳಾದ ಇಸ್ಮಾಲಿ ಐ ಬಿ ಉಪಸ್ಥಿತರಿದ್ದರು.

ಹನೀಫ್ ವರ್ಷಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶಫೀರ್ ವಂದಿಸಿದರು. ಕೊನೆಯಲ್ಲಿ ಕೇರಳದ ವಯನಾಡ್ ಹಾಗೂ ಕರ್ನಾಟಕದ ಶಿರೂರುನಲ್ಲಿ ನಡೆದ ಘಟಕಗಳಿಗೆ ಮೌನ ಪ್ರಾರ್ಥನೆ ಮಾಡಲಾಯಿತು.

LEAVE A REPLY

Please enter your comment!
Please enter your name here