ಬೆಳ್ತಂಗಡಿ: ಸಾಮಾಜಿಕ ಪರಿವರ್ತನಾ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳ ವಿದ್ಯೆಯಿಂದ ಸ್ವತಂತ್ರರಾಗಿ ಸಂಘಟನೆಯಿಂದ ಬಲಯುತರಾಗಿ ಎಂಬ ಧ್ಯೇಯದೊಂದಿಗೆ ಗುರುಗಳ ತತ್ವ ಸಂದೇಶಗಳನ್ನು ಮನೆ ಮನೆಗೆ ತಲುಪಿಸುವ ನಿಟ್ಟಿನಲ್ಲಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಆಶ್ರಯದಲ್ಲಿ ಯುವಬಿಲ್ಲವ ಬಿಲ್ಲವ ವೇದಿಕೆ ಬೆಳ್ತಂಗಡಿ ತಾಲೂಕು ನೇತೃತ್ವದಲ್ಲಿ ಬಿಲ್ಲವ ಮಹಿಳಾ ವೇದಿಕೆಯ ಸಹಕಾರದೊಂದಿಗೆ ಮನೆ-ಮನದಲ್ಲಿ ಗುರುಗಳು ಎಂಬ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಂದೇಶ ಪ್ರಚಾರ ಸರಣಿ ಕಾರ್ಯಕ್ರಮ ಗುರಿಪಳ್ಳ ಪೊರ್ಲು ಮನೆಯಲ್ಲಿ ಜರಗಿತು.
ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುಂದರ ಪೂಜಾರಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ ಕಲ್ಲಾಪು ಮಾತನಾಡಿ ಬ್ರಹ್ಮಶ್ರೀ ನಾರಾಯಣ ಗುರುಗಳ ಅನುಯಾಯಿಗಳನ್ನು ಸಂಘಟನಾತ್ಮಕವಾಗಿ ಒಗ್ಗೂಡಿಸುವ ಸಲುವಾಗಿ ಯುವಬಿಲ್ಲವ ವೇದಿಕೆಯ ನೇತೃತ್ವದಲ್ಲಿ ಮನೆ-ಮನದಲ್ಲಿ ಗುರುಗಳು ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತಾಲೂಕಿನ ಬಡ ವಿದ್ಯಾರ್ಥಿಗಳ ವಿದ್ಯಾರ್ಜನೆಗಾಗಿ ಹಾಗೂ ಸಮಾಜದಲ್ಲಿ ಸಂಕಷ್ಟಕ್ಕೊಳಗಾದ ಅಶಕ್ತರಿಗೆ ತಾಲೂಕು ಸಂಘ ನಿರಂತರ ನೆರವು ನೀಡುತ್ತಾ ಬರುತ್ತಿದೆ.ಗುರುಗಳ ಸಂದೇಶವೆ ನಮಗೆಲ್ಲರಿಗೂ ಪ್ರೇರಣೆಯಾಗಿದ್ದು ಅವರ ಆಶಯದಂತೆ ಸಂಘನೆಯಿಂದ ಸಮಾಜವನ್ನು ಬಲಿಷ್ಠವಾಗಿ ಕಟ್ಟೋಣ ಎಂದು ತಿಳಿಸಿದರು.
ಯುವಬಿಲ್ಲವ ವೇದಿಕೆ ಉಪಾಧ್ಯಕ್ಷ ಸೀತಾರಾಮ ಹುಣ್ಸೆಕಟ್ಟೆ ನಾರಾಯಣ ಗುರುಗಳ ತತ್ವ ಸಂದೇಶ ಉಪನ್ಯಾಸ ನೀಡಿದರು.ಈ ಸಂದರ್ಭದಲ್ಲಿ ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ನಿತೀಶ್ ಎಚ್.ಕೋಟ್ಯಾನ್, ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಸದಾಶಿವ ಪೂಜಾರಿ ಊರ, ಯುವಬಿಲ್ಲವ ವೇದಿಕೆ ತಾಲೂಕು ಅಧ್ಯಕ್ಷ ಎಮ್.ಕೆ.ಪ್ರಸಾದ್, ಸಂಘದ ನಿರ್ದೇಶಕರಾದ ಜಯ ಸಾಲಿಯಾನ್ ನಡ, ಯಶೋಧರ ಮುಂಡಾಜೆ, ಪ್ರಸಾದ್ ಏಣೀರು, ರತ್ನಾಕರ ಪೂಜಾರಿ, ಲಕ್ಷಣ ಪೂಜಾರಿ ಹುಣ್ಸೆಕಟ್ಟೆ, ನಾಣಿಯಪ್ಪ ಪೂಜಾರಿ, ಅರುಣ್ ಪೂಜಾರಿ, ಆನಂದ್ ಪೂಜಾರಿ, ಜಯರಾಮ್ ಪೂಜಾರಿ, ಬೇಬಿ ಉಮೇಶ್, ರವಿ ಪೂಜಾರಿ, ರಾಘವ ಪೂಜಾರಿ ಗ್ರಾಮ ಪಂಚಾಯತ್ ಸದಸ್ಯೆ ಶ್l ದೇವಕಿ ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.
ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ನಿರ್ದೇಶಕ ಗುರುರಾಜ್ ಗುರುಪಳ್ಳ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.