ಧರ್ಮಸ್ಥಳ ಶ್ರೀ ಧ.ಮಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬನ್ನಿ ಕಬ್, ಬುಲ್ ಬುಲ್ ಘಟಕದ ಉದ್ಘಾಟನೆ

0

ಧರ್ಮಸ್ಥಳ: ಧರ್ಮಸ್ಥಳ ಶ್ರೀ ಧ.ಮಂ.ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬನ್ನಿ ಕಬ್, ಬುಲ್ ಬುಲ್ ಘಟಕದ ಉದ್ಘಾಟನಾ ಸಮಾರಂಭವು ಆ.10ರಂದು ಜರುಗಿತು.ಸ್ಕೌಟ್ ಗೈಡ್ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ದೀಪ ಬೆಳಗಿಸುವುದರ ಮೂಲಕ ಶುಭಾರಂಭವನ್ನು ಮಾಡಲಾಯಿತು.

ಸ್ಕೌಟ್ ಗೈಡ್ಸ್ ಸಂಸ್ಥಾಪಕ ಬೇಡನ್ ಪೊವೆಲ್ ಅವರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸುವುದರ ಮೂಲಕ ಗೌರವವನ್ನು ಸಲ್ಲಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ದ.ಕ. ಜಿಲ್ಲಾ ಸಹಾಯಕ ಸಂಘಟನಾ ಆಯುಕ್ತ ಭರತ್ ರಾಜ್ ಕೆ., ಮಾತನಾಡುತ್ತಾ ಸ್ಕೌಟ್ ಗೈಡ್ ನ ವಿಭಾಗಗಳಾದ ಬನ್ನಿ ಕಬ್, ಬುಲ್ ಬುಲ್ ಮಗುವಿನ ಸರ್ವತೋಮುಖ ಅಭಿವೃದ್ಧಿಗೆ ದಾರಿದೀಪವಾಗಬಲ್ಲದು ಎಂದರು. ಇನ್ನೋರ್ವ ಮುಖ್ಯ ಅತಿಥಿ ಜಿಲ್ಲಾ ಸಹಾಯಕ ಆಯುಕ್ತ ಬಿ.ಸೋಮಶೇಖರ್ ಶೆಟ್ಟಿ ಮಾತನಾಡುತ್ತಾ ಇಂದಿನ ದಿನಗಳಲ್ಲಿ ಸ್ಕೌಟ್ ಗೈಡ್ ನ ಮೂಲಕ ಮಕ್ಕಳಿಗೆ ಸಿಗುವ ತರಬೇತಿ ಅತಿ ಅವಶ್ಯಕವಾಗಿದೆ ಎಂದರು.

ಬೆಳ್ತಂಗಡಿ ಸ್ಕೌಟ್ ಗೈಡ್ ಲೋಕಲ್ ಅಸೋಸಿಯೇಷನ್ಕಾರ್ಯದರ್ಶಿ ಪ್ರಮೀಳಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಸಾಂಕೇತಿಕವಾಗಿ ಮಕ್ಕಳಿಗೆ ಸ್ಕಾರ್ಫ್ ತೊಡಿಸುವುದರ ಮೂಲಕ ಅವರನ್ನು ಕಬ್ ಬುಲ್ ಬುಲ್ ಗೆ ಸೇರಿಸಿಕೊಳ್ಳಲಾಯಿತು. ಹಾಗೆಯೇ ಬನ್ನಿ ಮಕ್ಕಳಿಗೆ ಮುಂಗವಚ ತೊಡಿಸುವುದರ ಮೂಲಕ ಸ್ವಾಗತಿಸಲಾಯಿತು.ಶಾಲಾ ಮುಖ್ಯ ಶಿಕ್ಷಕಿ ಪರಿಮಳ ಎಂ.ವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೂರ್ವಿ ಭಟ್ ಕಾರ್ಯಕ್ರಮವನ್ನು ನಿರೂಪಿಸಿ, ಭಾರ್ಗವಿ ಸ್ವಾಗತಿಸಿ, ಸಮ್ಯಕ್ ವಂದಿಸಿದರು.

LEAVE A REPLY

Please enter your comment!
Please enter your name here